ಗಾಂಜಾ ಸೇದುತ್ತಾ ಮಾಸ್ಟರ್ ಪ್ಲಾನ್ ಮಾಡಿದ #ಮೀಟೂ ನಟಿಯರು.! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹರ್ಷಿಕಾ.!

Recommended Video

#Metoo ಬಗ್ಗೆ ಹರ್ಷಿಕಾ ಪೂಣಚ್ಚ ಗರಂ ಆಗಿ ಹೇಳಿದ್ದು ಹೀಗೆ | Filmibeat Kannada

#ಮೀಟೂ ಅಭಿಯಾನ ಬಾಲಿವುಡ್ ನಲ್ಲಿ ಪ್ರಾಮುಖ್ಯತೆ ಪಡೆದ್ಮೇಲೆ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿತು. ಕನ್ನಡ ಚಿತ್ರರಂಗದ ಕೆಲವು ನಟಿಯರು ತಮ್ಮ ವೃತ್ತಿ ಬದುಕಿನಲ್ಲಿ ಆದ ಕರಾಳ ಅನುಭವವನ್ನು #ಮೀಟೂ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು.

ಚಂದನವನದಲ್ಲಿ #ಮೀಟೂ ಸುನಾಮಿಯನ್ನೇ ಹಬ್ಬಿಸಿದ್ಮೇಲೆ ಕೊಡಗಿನ ಕುವರಿ, ಕನ್ನಡದ ನಟಿ ಹರ್ಷಿಕಾ ಪೂಣಚ್ಚ ಒಂದು ಸ್ಫೋಟಕ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ. ಕೆಲವರ ಹೆಸರಿಗೆ ಮಸಿ ಬಳಿಯಲು ಗಾಂಜಾ ಸೇದುತ್ತಾ #ಮೀಟೂ ನಟಿಯರು ಹೇಗೆಲ್ಲಾ ಪ್ಲಾನ್ ಮಾಡಿದರು ಎಂಬ ರೋಚಕ ಸಂಗತಿಯನ್ನ ನಟಿ ಹರ್ಷಿಕಾ ಪೂಣಚ್ಚ ಬಟಾ ಬಯಲು ಮಾಡಿದ್ದಾರೆ.

''ಇದು #ಮೀಟೂ ಅಲ್ಲ. ಖಂಡಿತವಾಗಿಯೂ ಇದು #ಮೀಟೂ ಫಾರ್ ಪಬ್ಲಿಸಿಟಿ'' ಅಂತ ನಟಿ ಹರ್ಷಿಕಾ ಪೂಣಚ್ಚ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿ #ಮೀಟೂ ಬಗ್ಗೆ ಹರ್ಷಿಕಾ ಬರೆದುಕೊಂಡಿರುವ ಪೋಸ್ಟ್ ನ ಕನ್ನಡ ಅನುವಾದ ಇಲ್ಲಿದೆ, ಓದಿರಿ...

ಅಸಹ್ಯ ಆಗುತ್ತಿದೆ

ಅಸಹ್ಯ ಆಗುತ್ತಿದೆ

''ಇದು #ಮೀಟೂ ಅಲ್ಲ. ಇದು #ಮೀಟೂ ಫಾರ್ ಪಬ್ಲಿಸಿಟಿ ಎನ್ನುವುದು ಸ್ಪಷ್ಟವಾಗಿದೆ. #ಮೀಟೂ ಅಭಿಯಾನದ ಕುರಿತ ಬೆಳವಣಿಗೆಗಳನ್ನು ನಾನು ಗಮನಿಸುತ್ತಿದ್ದೇನೆ. ದಿಟ್ಟ ಮಹಿಳೆಯಾಗಿ ಚಿತ್ರರಂಗದಲ್ಲಿ ಇರುವ ನಾನು ಮಹಿಳೆಯರಿಗೆ ಅಗೌರವ ತರುವ ಘಟನೆಗಳನ್ನು ಎಂದೂ ಸಹಿಸುವುದಿಲ್ಲ. ಆದ್ರೆ, 'ಹೆಣ್ತನ'ವನ್ನೇ ಪಬ್ಲಿಸಿಟಿಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿರುವವರನ್ನ ನೋಡಿ ನನಗೆ ಅಸಹ್ಯ ಆಗುತ್ತಿದೆ'' - ಹರ್ಷಿಕಾ ಪೂಣಚ್ಚ, ನಟಿ

ಪಬ್ಲಿಸಿಟಿಗಾಗಿ ಹೀಗೆ ಮಾಡೋದಾ.?

ಪಬ್ಲಿಸಿಟಿಗಾಗಿ ಹೀಗೆ ಮಾಡೋದಾ.?

''ಪಬ್ಲಿಸಿಟಿ ಒಳ್ಳೆಯದ್ದೇ. ಆದರೆ ಅದರಿಂದ ಓರ್ವ ವ್ಯಕ್ತಿಯ ಕುಟುಂಬ ಮುರಿದು ಬಿದ್ದರೆ.? ಆತನ ಮಡದಿ ಹಾಗೂ ಮಕ್ಕಳಿಗೆ ಅವಮಾನವಾದರೆ.? 15-20 ವರ್ಷಗಳ ಆತನ ವೃತ್ತಿ ಜೀವನದ ಶ್ರಮಕ್ಕೆ ಪೆಟ್ಟು ಬೀಳುವುದು ಸರಿಯೇ.?'' ಎಂದು ನಟಿ ಹರ್ಷಿಕಾ ಪೂಣಚ್ಚ ಪ್ರಶ್ನಿಸಿದ್ದಾರೆ.

ಕೆಲ ನಟಿಯರು ಏನು ಬೇಕಾದರೂ ಮಾಡ್ತಾರೆ

ಕೆಲ ನಟಿಯರು ಏನು ಬೇಕಾದರೂ ಮಾಡ್ತಾರೆ

''ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ನಾನು ಸಕ್ರಿಯವಾಗಿದ್ದೇನೆ. ಎಲ್ಲವನ್ನೂ ಪ್ರತ್ಯಕ್ಷವಾಗಿ ಕಣ್ಣಾರೆ ಕಂಡಿದ್ದೇನೆ. ಕೆಲ ನಟಿಯರಂತೂ ಒಳ್ಳೆಯ ಚಿತ್ರಗಳಲ್ಲಿ ಅಭಿನಯಿಸಲು, ದುಡ್ಡು ಮಾಡಲು, ಪ್ರಯಾಣ ಬೆಳೆಸಲು, ವೈಭೋಗದ ಜೀವನ ನಡೆಸಲು ವೃತ್ತಿ ಜೀವನದ ಆರಂಭದಲ್ಲಿ ಏನು ಬೇಕಾದರೂ ಮಾಡುತ್ತಾರೆ'' - ಹರ್ಷಿಕಾ ಪೂಣಚ್ಚ, ನಟಿ

ಅಂದು ಸಲುಗೆ ಕೊಟ್ಟಿದ್ಯಾಕೆ.?

ಅಂದು ಸಲುಗೆ ಕೊಟ್ಟಿದ್ಯಾಕೆ.?

''ಅಂದು ಗಂಡಸರಿಗೆ ಸಲುಗೆ ನೀಡಿ ಇಂದು ಪಬ್ಲಿಸಿಟಿಗಾಗಿ ಅವರ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ಅಂದು ಕೈಕೈ ಹಿಡಿದುಕೊಂಡು ಓಡಾಡುತ್ತಿದ್ದವರ ಕಡೆಯೇ ಇಂದು ನಟಿಯರು ಬೆಟ್ಟು ಮಾಡಿ ತೋರಿಸುತ್ತಿದ್ದಾರೆ'' - ಹರ್ಷಿಕಾ ಪೂಣಚ್ಚ, ನಟಿ

ನಟಿಯರ ಆಟ

ನಟಿಯರ ಆಟ

''ಗಂಜಾ ಸೇದುತ್ತಾ, ವಿದೇಶಗಳಲ್ಲಿ ನಡೆಯುವ ಸಾಂಗ್ ಶೂಟಿಂಗ್ ಗಳಲ್ಲಿ ಮಜಾ ಮಾಡುತ್ತಾ, ಜನಪ್ರಿಯ ವ್ಯಕ್ತಿಗಳ (ನಟರು, ನಿರ್ಮಾಪಕರು, ರಿಯಲ್ ಎಸ್ಟೇಟ್ ಉದ್ಯಮಿಗಳು) ಮೇಲೆ ನಟಿಯರು ಬೀಳುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇವೆಲ್ಲ ಮಲೇಶಿಯಾ, ದುಬೈ ಹಾಗೂ ಸಿಂಗಾಪುರದಲ್ಲಿ ನಡೆಯುವ ಅವಾರ್ಡ್ ಫಂಕ್ಷನ್ ಸಮಾರಂಭಗಳಲ್ಲೂ ನಡೆಯುತ್ತವೆ'' - ಹರ್ಷಿಕಾ ಪೂಣಚ್ಚ, ನಟಿ

ಅಂದು ಎಲ್ಲಿ ಹೋಗಿತ್ತು #ಮೀಟೂ.?

ಅಂದು ಎಲ್ಲಿ ಹೋಗಿತ್ತು #ಮೀಟೂ.?

''ಖ್ಯಾತಿ ಗಳಿಸಲು ಅಂದು ಮಾಡಬಾರದನ್ನೆಲ್ಲಾ ಮಾಡಿ ಈಗ ವೈಯುಕ್ತಿಕವಾಗಿ ಯಶಸ್ಸು ಪಡೆದ್ಮೇಲೆ ಗಂಡಸರ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ.? 2, 5, 10 ವರ್ಷಗಳ ಹಿಂದೆ ನಿಮ್ಮ #ಮೀಟೂ ಭಾವನೆ ಎಲ್ಲಿ ಹೋಗಿತ್ತು.? ಅಂದು ಎಲ್ಲವೂ ಸರಿ ಇತ್ತು. ಆದರೆ ಇಂದು ಮಹಿಳೆಯರನ್ನ ಕಾಮುಕರಿಂದ ಬಚಾವ್ ಮಾಡಲು ಮುಂದಾಗಿದ್ದೀರಾ.? ಇದು ನಾನ್ ಸೆನ್ಸ್.!'' - ಹರ್ಷಿಕಾ ಪೂಣಚ್ಚ, ನಟಿ

ಧೈರ್ಯ ಇದ್ದರೆ ಹೀಗೆ ಮಾಡಿ...

ಧೈರ್ಯ ಇದ್ದರೆ ಹೀಗೆ ಮಾಡಿ...

''ನಿಮಗೆಲ್ಲರಿಗೂ ನನ್ನದೊಂದು ಪ್ರಶ್ನೆ - ನಿಮಗೆ ಧೈರ್ಯ ಇದ್ದರೆ ಚಿತ್ರರಂಗದ ಎ-ಲಿಸ್ಟ್ ಸೂಪರ್ ಸ್ಟಾರ್ ಗಳ ವಿರುದ್ಧ ಆರೋಪ ಮಾಡಿ. ಸೂಪರ್ ಸ್ಟಾರ್ ನಟಿಯರು ಮಾತ್ರ ಯಾಕೆ ಯಾವುದೇ ಆರೋಪಗಳನ್ನು ಮಾಡುತ್ತಿಲ್ಲ'' - ಹರ್ಷಿಕಾ ಪೂಣಚ್ಚ, ನಟಿ

ಗಾಂಜಾ ಸೇದುತ್ತಾ ಮಾಸ್ಟರ್ ಪ್ಲಾನ್

ಗಾಂಜಾ ಸೇದುತ್ತಾ ಮಾಸ್ಟರ್ ಪ್ಲಾನ್

''ಖ್ಯಾತ ನಿರ್ಮಾಪಕರೊಬ್ಬರು ನನಗೊಂದು ವಿಡಿಯೋ ತೋರಿಸಿದರು. ಅದರಲ್ಲಿ ಈ #ಮೀಟೂ ನಟಿಯರು ಖುಷಿಯಾಗಿ ಗಾಂಜಾ ಸೇದುತ್ತಾ ಗಣ್ಯ ವ್ಯಕ್ತಿಯ ಮೇಲೆ ಬಿದ್ದು, ಕೆಲವರ ಹೆಸರಿಗೆ ಮಸಿ ಬಳಿಯುವ ಪ್ಲಾನ್ ಮಾಡುತ್ತಿರುವುದು ರೆಕಾರ್ಡ್ ಆಗಿದೆ. ಇನ್ನೊಂದು ವಿಡಿಯೋದಲ್ಲಿ ಖ್ಯಾತ ನಟಿ ಅರೆನಗ್ನವಾಗಿ ಕಾರಿನಲ್ಲಿ ಕುಳಿತು ''ನಿಮ್ಮ ಮುಂದಿನ ಚಿತ್ರದಲ್ಲೂ ನಾನೇ ಇರಬೇಕು'' ಅಂತ ಖ್ಯಾತ ನಟನಿಗೆ ಹೇಳುವುದು ಸೆರೆ ಆಗಿದೆ. ಇದು ಸರಿನಾ.?'' - ಹರ್ಷಿಕಾ ಪೂಣಚ್ಚ, ನಟಿ

ಬೆಟ್ಟು ಮಾಡಿ ತೋರಸಲ್ಲ

ಬೆಟ್ಟು ಮಾಡಿ ತೋರಸಲ್ಲ

''ನಟಿಯಾದ ನನಗೂ ಕಾಂಪ್ರೊಮೈಸ್ ಆಗುವಂತೆ ಕೆಲವರು ಕೇಳಿದ್ದಾರೆ. ಆದರೆ ನಾನು ಯಾವುದಕ್ಕೂ ಒಪ್ಪಿಕೊಂಡಿಲ್ಲ. ಹತ್ತು ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಯಾರೊಬ್ಬರೂ ನನ್ನ ವಿರುದ್ಧ ಬೆಟ್ಟು ಮಾಡಿ ತೋರಿಸಲ್ಲ. ದೊಡ್ಡ ಪ್ರಾಜೆಕ್ಟ್ ಗಳು ನನಗೆ ಸಿಕ್ಕಿಲ್ಲ. ಆದ್ರೆ, ಚಿತ್ರರಂಗದಲ್ಲಿ ನಾನು ಖುಷಿ ಆಗಿದ್ದೇನೆ'' - ಹರ್ಷಿಕಾ ಪೂಣಚ್ಚ, ನಟಿ

ಇದೇ ಸತ್ಯ

ಇದೇ ಸತ್ಯ

''ನಾನಿವತ್ತು ಇದನ್ನೆಲ್ಲ ಹೇಳಿರುವುದಕ್ಕೆ ಕೆಲವರು ನನ್ನನ್ನ ವಿರೋಧಿಸಬಹುದು. ಆದ್ರೆ, ಇದೇ ಸತ್ಯ. ಕೆಲ ಗಂಡಸರು ಕೆಟ್ಟವರು ಇರಬಹುದು. ಕೆಲಸಕ್ಕಾಗಿ ಫೇವರ್ ಕೇಳುತ್ತಾರೆ. ಆದ್ರೆ, ಅದಕ್ಕೆ ಇಷ್ಟವಿಲ್ಲದಿದ್ದರೆ 'ಇಲ್ಲ' ಎನ್ನಬಹುದು. ಎರಡು ಕೈ ಸೇರಿದರೆ ಚಪ್ಪಾಳೆ. ಹೀಗಾಗಿ, ಎಲ್ಲ ನಟಿಯರಿಗೂ 'ರಿಯಲ್' ಆಗಿರಲು ನಾನು ಕೇಳಿಕೊಳ್ಳುತ್ತೇನೆ'' - ಹರ್ಷಿಕಾ ಪೂಣಚ್ಚ, ನಟಿ

#ವಿಟೂ ಅಭಿಯಾನ ಆರಂಭ ಆಗಲಿ

''ಇನ್ನಾದರೂ ಗಂಡಸರು #ವಿಟೂ ಚಳುವಳಿ ಶುರು ಮಾಡಲಿ. ಎಷ್ಟೋ ನಟಿಯರು ಗಂಡಸರನ್ನು ಬಳಸಿಕೊಂಡು ನಂತರ ಕೈಕೊಟ್ಟಿದ್ದಾರೆ. ಇಲ್ಲಿಯವರೆಗೂ ನಟಿಯರ ವಿರುದ್ಧ ಮಾತನಾಡಬಾರದು ಅಂತ ನಾನು ಸುಮ್ಮನಿದ್ದೆ. ಆದ್ರೆ, ಕೆಲ ನಟಿಯರು ಇದನ್ನ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾರಣ ಇಂದು ಇದನ್ನೆಲ್ಲ ಹೇಳಬೇಕಾಗಿದೆ. ಚಿತ್ರರಂಗ ನಮಗೆ ಊಟ ಕೊಟ್ಟಿದೆ. ಜೈ ಕರ್ನಾಟಕ'' - ಹರ್ಷಿಕಾ ಪೂಣಚ್ಚ, ನಟಿ

More from Filmibeat

English summary
Its not Me Too, Its clearly Me Too for publicity says Kannada Actress Harshika Poonacha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X