'ಕೋಟಿಗೊಬ್ಬ 3' ವಿರುದ್ಧ ಷಡ್ಯಂತ್ರ: ಎಳೆ-ಎಳೆಯಾಗಿ ಬಿಚ್ಚಿಟ್ಟ ಸುದೀಪ್ ಆಪ್ತ ಜಾಕ್ ಮಂಜು

ಸುದೀಪ್ ನಟನೆಯ 'ಕೋಟಿಗೊಬ್ಬ 3' ಅಕ್ಟೋಬರ್ 14 ರಂದು ಬಿಡುಗಡೆ ಆಗುದಕ್ಕಿತ್ತು. ಅಭಿಮಾನಿಗಳು, ಚಿತ್ರಮಂದಿರಗಳಿಗೆ ಹಾರ ಕಟ್ಟಿ, ಕಟೌಟ್‌ಗೆ ಹಾಲಿನಭಿಷೇಕ ಮಾಡಿ ಸಿನಿಮಾ ನೋಡಲು ಕಾಯುತ್ತಿದ್ದರು. ಆದರೆ ಸಿನಿಮಾ ಬಿಡುಗಡೆ ಆಗಲೇ ಇಲ್ಲ.

ಕೊನೆಗೆ ಹಣಕಾಸಿನ ತೊಂದರೆಯಿಂದ ಯುಎಫ್‌ಓ ಪರವಾನಗಿ ಸಿಗದ ಕಾರಣ ಸಿನಿಮಾ ಬಿಡುಗಡೆ ಆಗುತ್ತಿಲ್ಲ ಎನ್ನಲಾಯಿತು. ಮಧ್ಯಾಹ್ನದ ವೇಳೆಗೆ ವಿಡಿಯೋ ಪ್ರಕಟಿಸಿದ ಸೂರಪ್ಪ ಬಾಬು, ''ಇಬ್ಬರು ವಿತರಕರಿಂದ ನನಗೆ ಮೋಸವಾಗಿದೆ. ನಾಳೆ ಸಿನಿಮಾ ಬಿಡುಗಡೆ ಆಗುವುದು ಪಕ್ಕಾ'' ಎಂದು ಕೈಮುಗಿದು ಮನವಿ ಮಾಡಿದರು. ಅಂತೆಯೇ ಸುದೀಪ್ ಸಹ, ''ಸಮಸ್ಯೆ ಕೊಟ್ಟವರು ಯಾರೆಂದು ನಮಗೆ ಗೊತ್ತಿದೆ, ನಾಳೆ ಸಿನಿಮಾ ಬಿಡುಗಡೆ ಆಗಲಿದೆ ಎಲ್ಲರೂ ನೋಡಿ'' ಎಂದರು.

ಕೊನೆಗೆ ಇಂದು (ಅಕ್ಟೋಬರ್ 15)ಕ್ಕೆ ಸಿನಿಮಾ 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸುದೀಪ್ ಅಭಿಮಾನಿಗಳು, ಸಿನಿಮಾ ಪ್ರಿಯರು ಚಿತ್ರಮಂದಿರಗಳಲ್ಲಿ 'ಕೊಟಿಗೊಬ್ಬ 3' ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ ನಿನ್ನೆ ಸಿನಿಮಾ ಏಕೆ ಬಿಡುಗಡೆ ಆಗಲಿಲ್ಲ. ಸೂರಪ್ಪ ಬಾಬುಗೆ ಯಾರು ತೊಂದರೆ ಕೊಟ್ಟರು, ಏಕೆ ತೊಂದರೆ ಕೊಟ್ಟರು? ಇನ್ನೂ ಹಲವು ವಿಷಯಗಳನ್ನು ಸುದೀಪ್ ಅವರ ಆಪ್ತ, ನಿರ್ಮಾಪಕ, ವಿತರಕರೂ ಆಗಿರುವ ಜಾಕ್ ಮಂಜು ಮಾತನಾಡಿದ್ದಾರೆ.

'ಕೋಟಿಗೊಬ್ಬ 3' ಸಿನಿಮಾದ ವಿರುದ್ಧ ಷಡ್ಯಂತ್ರ: ಜಾಕ್ ಮಂಜು

'ಕೋಟಿಗೊಬ್ಬ 3' ಸಿನಿಮಾದ ವಿರುದ್ಧ ಷಡ್ಯಂತ್ರ: ಜಾಕ್ ಮಂಜು

''ಕೋಟಿಗೊಬ್ಬ 3' ಸಿನಿಮಾದ ವಿರುದ್ಧ ವ್ಯವಸ್ಥಿತ ಷಡ್ಯಂತ್ಯ ನಡೆದಿದೆ. ಇಬ್ಬರು ವಿತಕರಿಂದ ಸಿನಿಮಾ ಅಂದುಕೊಂಡ ಸಮಯಕ್ಕೆ ಬಿಡುಗಡೆ ಆಗಲಿಲ್ಲ. ಚಿತ್ರದುರ್ಗ ಹಾಗೂ ಮೈಸೂರು ವಿತರಕರು 20% ಮುಂಗಡ ಕೊಟ್ಟು ಬುಕ್ ಮಾಡಿಕೊಂಡಿದ್ದರು. ಬಿಡುಗಡೆ ಹಿಂದಿನ ದಿನ ಬಾಕಿ ಹಣ ಕೊಡುತ್ತೀನಿ ಎಂದಿದ್ದವರು ಹಣ ಕೊಡಲಿಲ್ಲ. ಏನೇನೋ ಸಬೂಬು ಹೇಳಿ ಕೊನೆಗೆ ಹಣ ಕೊಡಲೇ ಇಲ್ಲ. ಇದರಿಂದ ನಿರ್ಮಾಪಕರು ಗೊಂದಲಗೊಂಡು, ನಂತರ ತಾವೇ ಸ್ವಂತ ಬಲದ ಮೇಲೆ ಏನೋ ಮಾಡಲು ಹೋದರು ಆದರೆ ಅದು ಸಾಧ್ಯವಾಗಲಿಲ್ಲ'' ಎಂದರು ಜಾಕ್ ಮಂಜು.

ಹಿರಿಯ ವಿತರಕರೊಬ್ಬರ ಮೇಲೆ ಕೆಂಡ ಕಾರಿದ ಜಾಕ್ ಮಂಜು

ಹಿರಿಯ ವಿತರಕರೊಬ್ಬರ ಮೇಲೆ ಕೆಂಡ ಕಾರಿದ ಜಾಕ್ ಮಂಜು

ಹಿರಿಯ ವಿತರಕರೊಬ್ಬರ ಮೇಲೆ ಅವರ ಹೆಸರು ಹೇಳದೆ ಕೆಂಡ ಕಾರಿದ ಕೆ.ಮಂಜು, ''ಚಿತ್ರರಂಗದ ಹಿರಿಯ ವಿತರಕ ನಿರ್ಮಾಪಕರೊಬ್ಬರಿದ್ದಾರೆ. ಅವರು ತಮ್ಮ ಮಗನ ಸಿನಿಮಾವನ್ನು ಯಾವುದೇ ಸ್ಟಾರ್ ಸಿನಿಮಾದ ಎದುರು ಬಿಡುಗಡೆ ಮಾಡುವುದಿಲ್ಲ. ಆದರೆ ಬೇರೆಯವರ ಮಕ್ಕಳ ಸಿನಿಮಾಗಳನ್ನು ಬಿಡುಗಡೆ ಮಾಡಿಸಿ ಹಾಳು ಮಾಡುತ್ತಾರೆ. 'ಜಾಕಿ' ಸಿನಿಮಾದ ಎದುರು ಸುದೀಪ್‌ರ 'ಕಿಚ್ಚ ಹುಚ್ಚ' ಸಿನಿಮಾ ಬಿಡುಗಡೆ ಮಾಡಿಸಿದರು. ಆಗ 'ಜಾಕಿ' ಸಿನಿಮಾದ ಹವಾ ಜೋರಾಗಿತ್ತು. ಆ ನಂತರ 'ಮುಕುಂದ ಮುರಾರಿ' ಸಿನಿಮಾದ ಎದುರು 'ಸಂತೂ ಸ್ಟ್ರೈಟ್ ಫಾರ್ವಡ್' ಸಿನಿಮಾ ಬಿಡುಗಡೆ ಮಾಡಿಸಿದರು. ಹಿರಿಯ ವಿತರಕರಾಗಿ ಇದು ಅವರಿಗೆ ಶೋಭೆ ತರುವುದಿಲ್ಲ'' ಎಂದರು ಜಾಕ್ ಮಂಜು.

''ಡಾರ್ಲಿಂಗ್ ಕೃಷ್ಣ, ಸಂದೇಶ್ ನಾಗರಾಜ್‌ಗೆ ಒಂದು ಮಾತು ಹೇಳ್ತೀನಿ''

''ಡಾರ್ಲಿಂಗ್ ಕೃಷ್ಣ, ಸಂದೇಶ್ ನಾಗರಾಜ್‌ಗೆ ಒಂದು ಮಾತು ಹೇಳ್ತೀನಿ''

''ಡಾರ್ಲಿಂಗ್ ಕೃಷ್ಣ ಮತ್ತು ಸಂದೇಶ್ ನಾಗರಾಜ್‌ಗೆ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ಡಾರ್ಲಿಂಗ್ ಕೃಷ್ಣ ನಟಿಸಿದ್ದ 'ಲವ್ ಮಾಕ್ಟೆಲ್' ಸಿನಿಮಾವನ್ನು ವಿತರಕನಾಗಿ ನಾನು 174 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿಸಿದ್ದೆ. ಆದರೆ ಈಗ ಅದೇ ಡಾರ್ಲಿಂಗ್ ಕೃಷ್ಣ ನಟನೆಯ 'ಶ್ರೀಕೃಷ್ಣ ಜಿಮೇಲ್.ಕಾಮ್' ಸಿನಿಮಾ ಕೇವಲ 34 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ವಿತರಕನಾದವನು ಸಲಹೆ ಕೊಡುವುದು ಬೇಡವೇ. 'ಸಲಗ', 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಆಗುವಾಗ ಈ ಸಿನಿಮಾವನ್ನು ಬಿಡುಗಡೆಗೊಳಿಸುವ ಅಗತ್ಯ ಏನಿತ್ತು'' ಎಂದು ಜಾಕ್ ಮಂಜು ಪ್ರಶ್ನೆ ಮಾಡಿದ್ದಾರೆ.

ನಮ್ಮ ನಿರ್ಮಾಪಕರದ್ದೂ ತಪ್ಪಿದೆ: ಜಾಕ್ ಮಂಜು

ನಮ್ಮ ನಿರ್ಮಾಪಕರದ್ದೂ ತಪ್ಪಿದೆ: ಜಾಕ್ ಮಂಜು

''ನಮ್ಮ ನಿರ್ಮಾಪಕರದ್ದೂ ತಪ್ಪಿದೆ. ಅವರು ಮೊದಲೇ ವಿಷಯವನ್ನು ಸುದೀಪ್ ಬಳಿ ತಿಳಿಸಿದ್ದಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ನಿರ್ಮಾಪಕರ ಹಳೆಯ ಸ್ನೇಹಿತರು, ಶತ್ರುಗಳು ಸೇರಿಕೊಂಡೆ ಅವರನ್ನು ಮುಳುಗಿಸುವ ಉದ್ದೇಶದಿಂದಲೇ ಈ ಷಡ್ಯಂತ್ರ ಮಾಡಿದ್ದಾರೆ. ಶತ್ರುಗಳು, ಹಿತ ಶತ್ರುಗಳು ಒಂದಾಗಿದ್ದಾರೆ. ಎಲ್ಲ ಸಮಸ್ಯೆ ಬಗೆ ಹರಿದ ಮೇಲೆ ನಾನು ನಿನ್ನೆ ಕೆಲವು ವಿತರಕರಿಗೆ ಕರೆ ಮಾಡಿ ಕೇಳಿದೆ ಏಕೆ ಹೀಗಾಯ್ತು ಎಂದು ಅವರು ಕೊಟ್ಟ ಉತ್ತರಗಳಿಂದ ನನಗೆ ಗೊತ್ತಾಯ್ತು ಇದೊಂದು ವ್ಯವಸ್ಥಿತ ಷಡ್ಯಂತ್ರವೆಂದು. ಆದರೆ ಈ ಷಡ್ಯಂತ್ರದಲ್ಲಿ 'ಸಲಗ' ಚಿತ್ರತಂಡದ ಯಾವುದೇ ಕೈವಾಡ ಇಲ್ಲ'' ಎಂದು ಜಾಕ್ ಮಂಜು ಹೇಳಿದ್ದಾರೆ.

More from Filmibeat

English summary
Jack Manju said some people intentionally made conspiracy on Kotigobba 3 movie. He said movie is running successfully and Sudeep fans enjoying the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X