For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ'ನಿಗೆ ಜೊತೆಯಾಗಲು ಬೆಂಗಳೂರಿಗೆ ಬಂದ ಜಾಕ್ವೆಲಿನ್

  |

  ಬಾಲಿವುಡ್ ನಟಿ, ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡೀಸ್ ಬೆಂಗಳೂರಿಗೆ ಬಂದಿದ್ದಾರೆ. ಜಾಕ್ವೆಲಿನ್ ಅನ್ನು ನಿರ್ಮಾಪಕ, ಸುದೀಪ್ ಆಪ್ತ ಜಾಕ್ ಮಂಜು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

  ವಿಕ್ರಾಂತ್ ರೋಣ ಒಂದು ಹಾಡಿನ ಬಜೆಟ್ ಕೇಳಿದ್ರೆ ಶಾಕ್ ಆಗ್ತೀರಾ | filmibeat kannada

  ಜಾಕ್ವೆಲಿನ್ ಬೆಂಗಳೂರಿಗೆ ಬಂದಿರುವುದು ಸುದೀಪ್ ನಟನೆಯ 'ವಿಕ್ರಾಂತ ರೋಣ' ಸಿನಿಮಾದ ವಿಶೇಷ ಹಾಡಿನಲ್ಲಿ ನರ್ತಿಸಲು.

  ಜಾಕ್ವೆಲಿನ್ ನಟಿಸುತ್ತಿರುವ ವಿಶೇಷ ಹಾಡಿನ ಚಿತ್ರೀಕರಣಕ್ಕಾಗಿ ಸಿನಿಮಾ ನಿರ್ಮಾಪಕರೂ ಆಗಿರುವ ಜಾಕ್ ಮಂಜು ಭಾರಿ ಮೊತ್ತವನ್ನು ವ್ಯಯಿಸುತ್ತಿದ್ದಾರೆ. ಈ ಒಂದು ಐದು ನಿಮಿಷದ ಹಾಡಿನ ಚಿತ್ರೀಕರಣಕ್ಕಾಗಿ ಸುಮಾರು 3 ಕೋಟಿಯನ್ನು ವ್ಯಯಿಸಲಾಗುತ್ತಿದ್ದು, ಇದರಲ್ಲಿ ಒಂದು ಕೋಟಿಯನ್ನು ಜಾಕ್ವೆಲಿನ್‌ಗೆ ಸಂಭಾವನೆಯಾಗಿ ಕೊಡಲಾಗುತ್ತಿದೆ.

  ಸುದೀಪ್ ಜೊತೆ ಜಾಕ್ವೆಲಿನ್ ನರ್ತಿಸಲಿರುವ ಈ ಹಾಡು ಸಿನಿಮಾಗಳ ಹೈಲೈಟ್‌ಗಳಲ್ಲಿ ಒಂದು ಎನ್ನಲಾಗುತ್ತಿದೆ. ಹಾಗಾಗಿಯೇ ಈ ಹಾಡಿಗೆ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಲಾಗುತ್ತಿದೆ. ಮೊದಲಿಗೆ ಈ ಹಾಡಿನಲ್ಲಿ ಸನ್ನಿ ಲಿಯೋನ್ ನರ್ತಿಸುತ್ತಾರೆ ಎನ್ನಲಾಗಿತ್ತು ನಂತರ ಅದು ಜಾಕ್ವೆಲಿನ್ ಪಾಲಾಯಿತು.

  ಹಾಡಿಗೆ ನರ್ತಿಸಲಿರುವ ಜಾಕ್ವೆಲಿನ್ ಫರ್ನಾಂಡೀಸ್

  ಹಾಡಿಗೆ ನರ್ತಿಸಲಿರುವ ಜಾಕ್ವೆಲಿನ್ ಫರ್ನಾಂಡೀಸ್

  ಜಾಕ್ವೆಲಿನ್ ನರ್ತಿಸಲಿರುವ ಹಾಡಿಗೆ ಸಂಗೀತ ನಿರ್ದೇಶನ ಮಾಡಿರುವುದು ಅಜನೀಶ್ ಲೋಕನಾಥ್. ಹಾಡಿಗೆ ನೃತ್ಯ ಸಂಯೋಜನೆ ಮಾಡುತ್ತಿರುವುದು ಜಾನಿ ಮಾಸ್ಟರ್. ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡುತ್ತಿರುವುದು ಸುದೀಪ್ ಆಪ್ತ ಜಾಕ್ ಮಂಜು.

  ಮೇ ನಲ್ಲಿಯೇ ಚಿತ್ರೀಕರಣ ಆಗಬೇಕಿತ್ತು

  ಮೇ ನಲ್ಲಿಯೇ ಚಿತ್ರೀಕರಣ ಆಗಬೇಕಿತ್ತು

  'ವಿಕ್ರಾಂತ್ ರೋಣ' ಸಿನಿಮಾದ ಬಹುತೇಕ ಚಿತ್ರೀಕರಣ ಹಾಗೂ ಡಬ್ಬಿಂಗ್ ಪೂರ್ಣವಾಗಿದೆ. ಹಾಡುಗಳ ಚಿತ್ರಕರಣ ಮಾತ್ರವೇ ಬಾಕಿ ಇತ್ತು. ಅದೂ ಸಹ ಈ ವಿಶೇಷ ಹಾಡಿನೊಂದಿಗೆ ಮುಕ್ತಾಯವಾಗಲಿದೆ ಎನ್ನಲಾಗಿದೆ. ಈ ಹಾಡಿನ ಚಿತ್ರೀಕರಣವನ್ನು ಮೇ ನಲ್ಲಿಯೇ ಯೋಜನೆ ಮಾಡಲಾಗಿತ್ತು ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದ ಚಿತ್ರೀಕರಣ ತಡವಾಗಿದೆ.

  ಶ್ರದ್ಧಾ ಶ್ರೀನಾಥ್, ನೀತಾ ಅಶೋಕ್ ಇದ್ದಾರೆ

  ಶ್ರದ್ಧಾ ಶ್ರೀನಾಥ್, ನೀತಾ ಅಶೋಕ್ ಇದ್ದಾರೆ

  'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಸುದೀಪ್ ಜೊತೆಗೆ ನಿರುಪ್ ಭಂಡಾರಿ, ಶ್ರದ್ಧಾ ಶ್ರೀನಾಥ್, ನೀತಾ ಅಶೋಕ್ ನಟಿಸಿದ್ದಾರೆ. ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಸಿನಿಮಾಕ್ಕೆ 'ಫ್ಯಾಂಟಮ್' ಎಂದು ಹೆಸರಿಡಲಾಗಿತ್ತು, ನಂತರ 'ವಿಕ್ರಾಂತ್ ರೋಣ' ಎಂದು ಹೆಸರು ಬದಲಿಸಲಾಯಿತು.

  ಬಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಜಾಕ್ವೆಲಿನ್ ಫರ್ನಾಂಡೀಸ್

  ಬಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಜಾಕ್ವೆಲಿನ್ ಫರ್ನಾಂಡೀಸ್

  ಜಾಕ್ವೆಲಿನ್ ಫರ್ನಾಂಡೀಸ್‌ಗೆ ಇದು ಮೊದಲ ಕನ್ನಡ ಸಿನಿಮಾ. ಬಾಲಿವುಡ್‌ನಲ್ಲಿ ಈಗಾಗಲೇ ಹಲವು ವಿಶೇಷ ಹಾಡುಗಳಿಗೆ ಸೊಂಟ ಬಳುಕಿಸಿದ್ದಾರೆ ಈ ಶ್ರೀಲಂಕನ್ ಸುಂದರಿ. ಬಾಲಿವುಡ್‌ನಲ್ಲಿ ಸಾಕಷ್ಟು ಬ್ಯುಸಿಯಾಗಿರುವ ಜಾಕ್ವೆಲಿನ್ ಕೈಯಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿರುವ 'ಬಚ್ಚನ್ ಪಾಂಡೆ', 'ರಾಮ್ ಸೇತು', ಸಲ್ಮಾನ್ ಖಾನ್ ನಟಿಸುತ್ತಿರುವ 'ಡಾನ್ಸಿಂಗ್ ಡ್ಯಾಡಿ', ಜಾನ್ ಅಬ್ರಹಾಂ ಜೊತೆ 'ಅಟ್ಯಾಕ್', ರವಿ ಕಾಂತ್ ನಿರ್ದೇಶನದ 'ಹಮಾರಿ ಶಾದಿ' ಸಿನಿಮಾಗಳಿವೆ.

  English summary
  Bollywood Actress Jacqueline Fernandez arrived to Benglauru to perform to a special song in movie Vikranth Rona along with actor Sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X