'ವಿಕ್ರಾಂತ್ ರೋಣ'ನ ಬಿಗ್ ಅಪ್ ಡೇಟ್: ಜಾಕ್ವೆಲಿನ್ ದರ್ಶನಕ್ಕೆ ದಿನಾಂಕ ಫಿಕ್ಸ್

ಕನ್ನಡದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರ ಕೂಡ ಒಂದು. ಈಗಾಗಲೇ ಪೋಸ್ಟರ್ ಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ 'ವಿಕ್ರಾಂತ್ ರೋಣ' ಬಾಲಿವುಡ್ ಖ್ಯಾತ ನಟಿಯ ಎಂಟ್ರಿಯಿಂದ ಕುತೂಹಲ, ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ವಿಕ್ರಾಂತ್ ರೋಣ ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚಿಗಷ್ಟೆ ಹಾಡಿನ ಚಿತ್ರೀಕರಣ ಮುಗಿಸಲಾಗಿದೆ. ಕಿಚ್ಚನ ಜೊತೆ ಹೆಜ್ಜೆ ಹಾಕಲು ಬೆಂಗಳೂರಿಗೆ ಬಂದಿದ್ದ ಜಾಕ್ವೆಲಿನ್ ತನ್ನ ಭಾಗದ ಚಿತ್ರೀಕರಣ ಮುಗಿಸಿ ಮುಂಬೈಗೆ ವಾಪಸ್ ಆಗಿದ್ದರು.

ಜಾಕ್ವೆಲಿನ್ ಬೆಂಗಳೂರಿಗೆ ಬಂದಿದ್ದ ಫೋಟೋ, ವಿಡಿಯೋ ಮತ್ತು ಸುದೀಪ್ ಜೊತೆ ಕ್ಯಾಮರಾಗೆ ಪೋಸ್ ನೀಡಿದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜಾಕ್ವೆಲಿನ್ ಚಿತ್ರೀಕರಣ ಮುಗಿಸಿ ಮುಂಬೈ ವಾಪಸ್ ಆದ ಬೆನ್ನಲ್ಲೇ ಸಿನಿಮಾತಂಡ ಅಭಿಮಾನಿಗಳಿಗೆ ಸಖತ್ ಸುದ್ದಿಯನ್ನು ನೀಡಿದೆ. ಬಹುನಿರೀಕ್ಷೆಯ ಸಿನಿಮಾದ ಹೈ ವೋಲ್ಟೇಜ್ ಹಾಡಿನ ಮೊದಲ ಲುಕ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.

 Jacqueline Fernandez first look in Vikrant Rona to be released on July 31

ಇದೇ ತಿಂಗಳು ಜುಲೈ 31ರಂದು ಜಾಕ್ವೆಲಿನ್ ಫರ್ನಾಂಡಿಸ್ ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ಸಿನಿಮಾತಂಡ ಅನೌನ್ಸ ಮಾಡಿದೆ. ಅಂದಹಾಗೆ ಈ ಲುಕ್ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಒಟ್ಟು 5 ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

ಈ ಬಗ್ಗೆ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು, "ಜುಲೈ 31ಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ವಿಕ್ರಾಂತ್ ರೋಣ ಫಸ್ಟ್ ಲುಕ್ ಲುಕ್ ಬಿಡುಗಡೆ ಆಗಲಿದೆ" ಎಂದು ಹೇಳಿದ್ದಾರೆ. ಇನ್ನು ನಟಿ ಜಾಕ್ವೆಲಿನ್ ಸಹ ಈ ಬಗ್ಗೆ ಸಖತ್ ಉತ್ಸುಕರಾಗಿದ್ದಾರೆ. "ಬಿಗ್ ಸರ್ಪ್ರೈಸ್ ಗೆ ರೆಡಿಯಾಗಿ. ವಿಕ್ರಾಂತ್ ರೋಣ ಸಿನಿಮಾತಂಡ ಜುಲೈ 31ಕ್ಕೆ ಫಸ್ಟ್ ಲುಕ್ ಬಿಡುಗಡೆ ಮಾಡುತ್ತಿದೆ. ಎದುರು ನೋಡುತ್ತಿದ್ದೀನಿ" ಎಂದು ಟ್ವೀಟ್ ಮಾಡಿದ್ದಾರೆ.

 Jacqueline Fernandez first look in Vikrant Rona to be released on July 31

ಜಾಕ್ವೆಲಿನ್ ಮೊದಲ ಕನ್ನಡ ಸಿನಿಮಾದ ಲುಕ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಜುಲೈ 31ಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬಂದಿರುವ ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಿಚ್ಚನ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ವಿಕ್ರಾಂತ್ ರೋಣ ಯಾವಾಗ ತೆರೆಗೆ ಬರಲಿದೆ ಎನ್ನುವ ಕುತೂಹಲಕ್ಕೆ ಸದ್ಯದಲ್ಲೇ ತೆರೆಬೀಳುವ ಸಾಧ್ಯತೆ ಇದೆ.

More from Filmibeat

English summary
Bollywood Actress Jacqueline Fernandez first look in Vikrant Rona to be released on July 31.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X