ನಿಖಿಲ್ ಕುಮಾರ್ ಜೊತೆ ಹೆಜ್ಜೆ ಹಾಕಲು ರೆಡಿಯಾದ ಬಿಟೌನ್ ನಟಿ

By Pavithra

Recommended Video

ನಿಖಿಲ್ ಕುಮಾರಸ್ವಾಮಿಗಾಗಿ ಬಂದ ಬಾಲಿವುಡ್ ಬೆಡಗಿ...!! | Filmibeat Kannada

ಸ್ಯಾಂಡಲ್ ವುಡ್ ಪ್ರಿನ್ಸ್ ನಿಖಿಲ್ ಕುಮಾರ್ ಅಭಿನಯದ 'ಸೀತಾ ರಾಮ ಕಲ್ಯಾಣ' ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಚಿತ್ರದಲ್ಲಿ ನಿಖಿಲ್ ಜೊತೆಯಾಗಿ ಇದೇ ಮೊದಲ ಬಾರಿಗೆ ರಚಿತಾ ರಾಮ್ ಅಭಿನಯ ಮಾಡುತ್ತಿದ್ದು ಎ ಹರ್ಷ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಚೆನ್ನಾಂಭಿಕ ಕಂಬೈನ್ಸ್ ನಲ್ಲಿ ನಿರ್ಮಾಣವಾಗುತ್ತಿರುವ 'ಸೀತಾ ರಾಮ ಕಲ್ಯಾಣ' ಸಿನಿಮಾದಲ್ಲಿ ಈಗಾಗಲೇ ಬಹುಭಾಷಾ ತಾರೆಯರು ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಮೈಸೂರಿನಲ್ಲಿ ಅದ್ದೂರಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿದ್ದು ಸದ್ಯ ಹಾಡುಗಳ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿ ಆಗಲಿದೆ.

ಈ ಹಿಂದೆ 'ಜಾಗ್ವಾರ್' ಸಿನಿಮಾದಲ್ಲಿ ನಿಖಿಲ್ ಜೊತೆ ಟಾಲಿವುಡ್ ನಟಿ ತಮನ್ನಾ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು ಈಗ 'ಸೀತಾ ರಾಮ ಕಲ್ಯಾಣ'ಕ್ಕಾಗಿ ಬಿಟೌನ್ ನ ಫೇಮಸ್ ನಟಿ ಎಂಟ್ರಿಕೊಡಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿದೆ. ಯಾರು ಆ ನಟಿ? ಚಿತ್ರೀಕರಣ ಯಾವಾಗ ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ..

ಕನ್ನಡ ಸಿನಿಮಾದಲ್ಲಿ ಜಾಕ್ವೆಲಿನ್

ಕನ್ನಡ ಸಿನಿಮಾದಲ್ಲಿ ಜಾಕ್ವೆಲಿನ್

ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ಕನ್ನಡಕ್ಕೆ ಬರುವ ಸೂಚನೆ ಸಿಕ್ಕಿದೆ. ನಿಖಿಲ್ ಕುಮಾರ್ ಅಭಿನಯದ 'ಸೀತಾ ರಾಮ ಕಲ್ಯಾಣ' ಚಿತ್ರದಲ್ಲಿ ಭಾಗಿ ಆಗಲು ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಸಂಪರ್ಕ ಮಾಡಲಾಗಿದ್ಯಂತೆ.

ನಿಖಿಲ್ ಜೊತೆ ಜಾಕ್ವೆಲಿನ್ ಡ್ಯಾನ್ಸ್

ನಿಖಿಲ್ ಜೊತೆ ಜಾಕ್ವೆಲಿನ್ ಡ್ಯಾನ್ಸ್

ನಟಿ ಜಾಕ್ವೆಲಿನ್ 'ಸೀತಾ ರಾಮ ಕಲ್ಯಾಣ' ಚಿತ್ರದ ಸ್ಪೆಷಲ್ ಸಾಂಗ್ ನಲ್ಲಿ ಹೆಜ್ಜೆ ಹಾಕಿಸಲು ಚಿತ್ರತಂಡ ಮನಸ್ಸು ಮಾಡಿದ್ದು ಈಗಾಗಲೇ ಸಂಪರ್ಕವನ್ನು ಮಾಡಲಾಗಿದ್ಯಂತೆ. ಹಾಡಿನಲ್ಲಿ ಹೆಜ್ಜೆ ಹಾಕಲು ಮನಸ್ಸು ಮಾಡಿದ್ದು ಡೇಟ್ಸ್ ಬಗ್ಗೆ ಮಾತುಕಥೆ ಆಗಬೇಕಿದ್ಯಂತೆ.

ಬೇಡಿಕೆಯ ನಟಿ ಜಾಕ್ವೆಲಿನ್

ಬೇಡಿಕೆಯ ನಟಿ ಜಾಕ್ವೆಲಿನ್

'ಆಪ್ ಕಾ ಕ್ಯಾ ಹೋಗಯಾ', 'ಜಾದು ಕೀ ಜಪ್ಪಿ' ಮತ್ತು 'ಬಾಗಿ -2' ಸಿನಿಮಾದ ಏಕ್ ದೋ ತೀನ್ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದ ಜಾಕ್ವೆಲಿನ್ ಇತ್ತೀಚಿಗಷ್ಟೆ ರೇಸ್ -3 ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸುವ ಮೂಲಕ ಫೇಮಸ್ ಆಗಿದ್ದರು. ಸದ್ಯ ಸುಶಾಂತ್ ಸಿಂಗ್ ರಜಪೂತ್ ಜೊತೆ ನಟಿಸುತ್ತಿದ್ದಾರೆ,

ಜಾಗ್ವಾರ್ ಜೊತೆ ತಮನ್ನಾ

ಜಾಗ್ವಾರ್ ಜೊತೆ ತಮನ್ನಾ

ಈ ಹಿಂದೆ ನಿಖಿಲ್ ಅಭಿನಯದ ಜಾಗ್ವಾರ್ ಸಿನಿಮಾದಲ್ಲಿ ನಟಿ ತಮನ್ನಾ ಅವರನ್ನು ಕರೆಸಲಾಗಿತ್ತು. ವಿಶೇಷ ಹಾಡೊಂದಕ್ಕೆ ತಮನ್ನಾ ಹೆಜ್ಜೆ ಹಾಕಿದ್ದರು.

More from Filmibeat

English summary
Bollywood actress Jacqueline fernandez has acted in Kannada film Seetha Rama Kalyana. Seetha Rama Kalyana is a film starring Nikhil Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X