ರಾಜಮೌಳಿ 'ಆರ್ ಆರ್ ಆರ್' ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್?
ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಆರ್ ಆರ್ ಆರ್ ಸಿನಿಮಾ ಚಿತ್ರಾಭಿಮಾನಿಗಳ ಕುತೂಹಲ ಹೆಚ್ಚಿಸುತ್ತಲೆ ಇದೆ. ಈಗಾಗಲೆ ಭರ್ಜರಿಯಾಗಿ ಚಿತ್ರೀಕರಣ ನಡೆಯುತ್ತಿದೆ. ಆದ್ರೆ ಕಲಾವಿದರ ಆಯ್ಕೆ ವಿಚಾರದಲ್ಲಿ 'ಆರ್ ಆರ್ ಆರ್' ಸಿನಿಮಾ ಇನ್ನು ಸುದ್ದಿ ಮಾಡುತ್ತಲೆ ಇದೆ.
ಈ ಬಾರಿ ಬಾಲಿವುಡ್ ನಟಿಣಿಯರಿಗೆ ಮಣೆ ಹಾಕಿರುವ ರಾಜಮೌಳಿ ಆಗಲೆ ಅಲಿಯಾ ಭಟ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದ್ರೆ ಚಿತ್ರದಲ್ಲಿ ಮತ್ತೋರ್ವ ನಾಯಕಿಯಾಗಿ ಅಭಿನಯಿಸಬೇಕಾಗಿದ್ದ ಬ್ರಿಟನ್ ನಟಿ ಡೈಸಿ ಈದ್ಗರ್ 'ಆರ್ ಆರ್ ಆರ್' ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆ ಜಾಗಕ್ಕೆ ಈಗ ಹೊಸ ನಾಯಕಿಯ ಹುಡುಕಾಟದಲ್ಲಿ ರಾಜಮೌಳಿ ಅಂಡ್ ಟೀಂ ಬ್ಯುಸಿಯಾಗಿದೆ.
ಡೈಸಿ ಬಿಟ್ಟ ಜಾಗವನ್ನು ಬಾಲಿವುಡ ನಟಿ ಜಾಕ್ವೆಲಿನ್ ತುಂಬುವ ಸಾಧ್ಯತೆ ಇದೆ. ಹೌದು ಬಾಲಿವುಡ್ ನಲ್ಲಿ ಮಿಂಚುತ್ತಿರುವ ಜಾಕ್ವೆಲಿನ್ ಈಗ ರಾಜಮೌಳಿ ಸಿನಿಮಾ ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತದ ಕಡೆ ಮುಖ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.ಮುಂದೆ ಓದಿ..

ಡೈಸಿ ಜಾಗಕ್ಕೆ ಬಂದ ಜಾಕ್ವೆಲಿನ್
'ಆರ್ ಆರ್ ಆರ್' ಸಿನಿಮಾದಲ್ಲಿ ಡೈಸಿ ಈದ್ಗರ್ ಬಿಟ್ಟು ಹೋದ ಜಾಗಕ್ಕೆ ಜಾಕ್ವೆಲಿನ್ ಕರೆತರುವ ಪ್ಲಾನ್ ಮಾಡಿದ್ದಾರಂತೆ ರಾಜಮೌಳಿ. ಆ ಪಾತ್ರಕ್ಕೆ ವಿದೇಶಿ ಬೆಡಗಿಯೆ ಬೇಕಾದ ಕಾರಣ ಜಾಕ್ವೆಲ್ ಪಕ್ಕಾ ಸೂಟ್ ಆಗ್ತಾರೆ ಎನ್ನುವುದು ಚಿತ್ರತಂಡದ ಲೆಕ್ಕಾಚಾರ. ಈಗಾಗಲೆ ಸಾಕಷ್ಟು ನಾಯಕಿರನ್ನು ಹುಡುಕಿದ ಚಿತ್ರತಂಡ ಸದ್ಯ ಜಾಕ್ವೆಲಿನ್ ಗೆ ಅಪ್ರೋಚ್ ಮಾಡಿದ್ದಾರಂತೆ. ಒಂದು ವೇಳೆ ಜಾಕ್ವೆಲಿನ್ ಗ್ರೀನ್ ಸಿಗ್ನಲ್ ನೀಡಿದ್ರೆ ಆರ್ ಆರ್ ಆರ್ ಸಿನಿಮಾ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಮರಳಲಿದ್ದಾರೆ.

ಜಾಕ್ವೆಲಿನ್ ಹೆಸರು ಸೂಚಿಸಿದ ಸಲ್ಮಾನ್ ಖಾನ್
'ಆರ್ ಆರ್ ಆರ್' ಸಿನಿಮಾದ ನಾಯಕಿಗಾಗಿ ಹುಡುಕುತ್ತಿದ್ದ ಚಿತ್ರತಂಡಕ್ಕೆ ಸಲ್ಮಾನ್ ಖಾನ್ ಜಾಕ್ವೆಲಿನ್ ಹೆಸರನ್ನು ಸೂಚಿಸಿದ್ದಾರಂತೆ. ಸಲ್ಲು ಸೂಚಿಸಿದ್ದಾರೆ ಅಂದ್ಮೇಲೆ ಶ್ರೀಲಂಕಾದ ಬ್ಯೂಟಿ 'ಆರ್ ಆರ್ ಆರ್' ಟೀಂ ಸೇರುವುದು ಪಕ್ಕಾ ಅಂತಿದೆ ಮೂಲಗಳು. ಆದ್ರೆ ಜಾಕ್ವೆಲಿನ್ ಕಡೆಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಚಿತ್ರದಲ್ಲಿ ಜ್ಯೂ,ಎನ್ ಟಿ ಆರ್ ಗೆ ನಾಯಕಿಯಾಗಿ ಜಾಕ್ವೆಲಿನ್ ಕಾಣಿಸಿಕೊಳ್ಳಲಿದ್ದಾರೆ.
ಆರ್.ಆರ್.ಆರ್ ಚಿತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ನ ಮತ್ತಿಬ್ಬರು.!

ನಾಯಕಿಯ ರೇಸ್ ನಲ್ಲಿದ್ದಾರೆ ಪರಿಣೀತಿ
ರಾಜಮೌಳಿ ಸಿನಿಮಾದ ಡೈಸ್ ಬಿಟ್ಟು ಹೋದ ಜಾಗಕ್ಕೆ ಪರಿಣೀತಿ ಹೆಸರು ಕೂಡ ತುಂಬಾ ಓಡಾಡುತ್ತಿದೆ. ಚಿತ್ರದ ಮೊದಲ ನಾಯಕಿಯಾಗಿಯೆ ಆಯ್ಕೆ ಆಗಬೇಕಿದ್ದ ಪರಿಣೀತಿ ಈಗ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ರೆ ಪರಿಣೀತಿ ಕಡೆಯಿಂದ ಆಗಲಿ ಅಥವಾ ಚಿತ್ರತಂಡದ ಕಡೆಯಿಂದ ಯಾವುದೆ ಅದಿಕೃತ ಮಾಹಿತಿ ಹೊರಬಿದ್ದಿಲ್ಲ.

ರಾಜಮೌಳಿ ಸಿನಿಮಾ ರಿಜೆಕ್ಟ್ ಮಾಡಿದ ಶ್ರದ್ಧಾ
'ಆರ್ ಆರ್ ಆರ್' ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಶ್ರದ್ಧಾ ರಾಜಮೌಳಿ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರಂತೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ 'ಆರ್ ಆರ್ ಆರ್' ಸಿನಿಮಾ ಪ್ರಾಜೆಕ್ಟ್ ಅನ್ನು ಡ್ರಾಪ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಶ್ರದ್ಧಾ ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್ ಜೊತೆ ಅಭಿನಯಿಸುತ್ತಿದ್ದಾರೆ.


Click it and Unblock the Notifications











