'ಗದಂಗ್ ರಕ್ಕಮ್ಮ'ನ ಭರ್ಜರಿ ಎಂಟ್ರಿ: ಕಿಚ್ಚನ ಅಭಿಮಾನಿಗಳು ಫುಲ್ ಖುಷ್

ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿರುವ ವಿಚಾರ ತಿಳಿದಿದೆ. ಇದೀಗ, ಜಾಕ್ವೆಲಿನ್ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಹಾಗೂ ಪಾತ್ರದ ಪರಿಚಯ ಮಾಡಿಕೊಡಲಾಗಿದೆ.

Recommended Video

ಸುದೀಪ್ ಹಾಗೂ ಕನ್ನಡದ ಬಗ್ಗೆ ಮಾತನಾಡಿದ ಜಾಕ್ವೆಲಿನ್ ಫರ್ನಾಂಡಿಸ್

ಚಿತ್ರತಂಡ ಹೇಳಿದಂತೆ ಜಾಕ್ವೆಲಿನ್ ಫರ್ನಾಂಡಿಸ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ಕಿಚ್ಚನ ಅಭಿಮಾನಿಗಳು ಉಘೆ ಉಘೇ ಎನ್ನುತ್ತಿದ್ದಾರೆ. ಹಾಡೊಂದಕ್ಕೆ ಹೆಜ್ಜೆ ಹಾಕಲು ಬಂದ ನಟಿ ಆಮೇಲೆ ವಿಶೇಷ ಪಾತ್ರದಲ್ಲು ನಟಿಸಿರುವುದರಿಂದ ಸಹಜವಾಗಿ ಜಾಕ್ವೆಲಿನ್ ಮೇಲೆ ಕುತೂಹಲ ಹೆಚ್ಚಿದೆ. ಆ ಥ್ರಿಲ್‌ಗೆ ತಕ್ಕಂತೆ ಈಗ ಪೋಸ್ಟರ್ ಬಂದಿದೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಪೋಸ್ಟರ್ ರಿಲೀಸ್ ಆಗಿದೆ. 'ಗದಂಗ್ ರಕ್ಕಮ್ಮ' ಎಂಬ ರಗಡ್ ಪಾತ್ರದಲ್ಲಿ ಶ್ರೀಲಂಕಾ ಚೆಲುವೆ ನಟಿಸುತ್ತಿದ್ದು, ಸ್ಯಾಂಡಲ್‌ವುಡ್ ಅಭಿಮಾನಿಗಳ ಕಿಕ್ ಹೆಚ್ಚಿಸಿದ್ದಾರೆ. ಈ ಹಾಡು ಸಖತ್ ಕಿಕ್‌ನಿಂದ ಕೂಡಿರಲಿದೆ ಎನ್ನುವುದಕ್ಕೆ ಹಿನ್ನೆಲೆ ಸಂಗೀತ ಸಣ್ಣದೊಂದು ಝಲಕ್ ನೀಡಿದೆ.

ಆರಂಭದಲ್ಲಿ ಸುದ್ದಿಯಾದಂತೆ ನಟಿ ಜಾಕ್ವೆಲಿನ್ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಹಾಡಿಗೆ ಡ್ಯಾನ್ಸ್ ಮಾಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಜಾಕ್ವೆಲಿನ್ ಈ ಸಿನಿಮಾದಲ್ಲಿ ಆಕ್ಟ್ ಕೂಡ ಮಾಡಿದ್ದಾರೆ. ಸುದೀಪ್ ಸಿನಿಮಾದಲ್ಲಿ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದು, ಡ್ಯಾನ್ಸ್ ಮಾಡುವುದರ ಜೊತೆಗೆ ಕೆಲವು ಸೀನ್‌ಗಳಲ್ಲಿ ನಟಿಸಿದ್ದಾರೆ. ಜಾಕ್ವೆಲಿನ್ ಪಾತ್ರದ ಹೆಸರು 'ಗದಂಗ್ ರಂಗಮ್ಮ'. ಹೆಸರಿಗೆ ತಕ್ಕಂತೆ ರಗಡ್ ಆಗಿ ಫಸ್ಟ್ ಲುಕ್ ಬಂದಿದೆ. ಮುಂದೆ ಓದಿ...

ಜುಲೈ ಮೂರನೇ ವಾರದಲ್ಲಿ ಶೂಟಿಂಗ್

ಜುಲೈ ಮೂರನೇ ವಾರದಲ್ಲಿ ಶೂಟಿಂಗ್

ವಿಕ್ರಾಂತ್ ರೋಣ ಚಿತ್ರದ ಚಿತ್ರೀಕರಣಕ್ಕಾಗಿ ನಟಿ ಜಾಕ್ವೆಲಿನ್ ಬೆಂಗಳೂರಿಗೆ ಬಂದಿದ್ದರು. ಜುಲೈ ಮೂರನೇ ವಾರದಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಸಾಂಗ್ ಶೂಟಿಂಗ್ ಮುಗಿದ ಮೇಲೆ ಸುದೀಪ್ ಸಹ ಬಾಲಿವುಡ್ ಬ್ಯೂಟಿಗೆ ಥ್ಯಾಂಕ್ಸ್ ಹೇಳಿದ್ದರು. ''ನಮ್ಮ ಸಿನಿಮಾದ ಹಾಡಿಗೆ ಜೋಶ್ ತುಂಬಿದ್ದಕ್ಕೆ ಧನ್ಯವಾದ ಜಾಕ್ವೆಲಿನ್ ಫರ್ನಾಂಡೀಸ್. ನಿಮ್ಮ ನೃತ್ಯ ನನ್ನನ್ನೂ ಒಂದೆರಡು ಸ್ಟೆಪ್ ಹಾಕುವಂತೆ ಪ್ರೇರೇಪಿಸಿತು. ನಿಮಗೆ ಶುಭವಾಗಲಿ'' ಎಂದು ಟ್ವೀಟ್ ಮಾಡಿದ್ದರು.

ಭಾರತ ಹೆಮ್ಮೆ ಪಡುವ ನಿರ್ದೇಶಕ

ಭಾರತ ಹೆಮ್ಮೆ ಪಡುವ ನಿರ್ದೇಶಕ

ಅನೂಪ್ ಭಂಡಾರಿ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಾಕ್ವೆಲಿನ್ ಫರ್ನಾಂಡಿಸ್, ''ವಿಶ್ವಮಟ್ಟದಲ್ಲಿ ಭಾರತ ಹೆಮ್ಮೆಪಡುವಂತೆ ಮಾಡಲಿದ್ದಾರೆ ಅನೂಪ್ ಭಂಡಾರಿ'' ಎಂದು ಟ್ವೀಟ್ ಮಾಡಿದ್ದರು.

ಐಎಂಡಿಬಿ ರೇಟಿಂಗ್‌ನಲ್ಲಿ ಟಾಪ್

ಐಎಂಡಿಬಿ ರೇಟಿಂಗ್‌ನಲ್ಲಿ ಟಾಪ್

ಭಾರತೀಯ ಸಿನಿಮಾಗಳಲ್ಲಿ ಯಾವುದು ಹೆಚ್ಚು ನಿರೀಕ್ಷೆ ಮೂಡಿಸಿದೆ ಎನ್ನುವ ಕುರಿತು ಐಎಂಡಿಬಿ ಸಂಸ್ಥೆ ಟ್ರೆಂಡ್‌ಗೆ ತಕ್ಕಂತೆ ಪಟ್ಟಿ ಪ್ರಕಟಿಸುತ್ತಿದೆ. ಈ ಪಟ್ಟಿಯಲ್ಲಿ ವಿಕ್ರಾಂತ್ ರೋಣ ಸಿನಿಮಾ ಮೊದಲ ಸ್ಥಾನದಲ್ಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕುತೂಹಲ ಮೂಡಿಸಿರುವ ಕೆಜಿಎಫ್ ಚಾಪ್ಟರ್ 2 ಹಿಂದಿಕ್ಕಿರುವ ವಿಕ್ರಾಂತ್ ರೋಣ ಟಾಪ್‌ನಲ್ಲಿದೆ.

ಬಿಡುಗಡೆ ಬಗ್ಗೆ ಸದ್ಯಕ್ಕೆ ಕುತೂಹಲ

ಬಿಡುಗಡೆ ಬಗ್ಗೆ ಸದ್ಯಕ್ಕೆ ಕುತೂಹಲ

ಹಾಗ್ನೋಡಿದ್ರೆ, ವಿಕ್ರಾಂತ್ ರೋಣ ಚಿತ್ರಕ್ಕೂ ಮೊದಲು ಸುದೀಪ್ ನಟನೆಯ ಕೋಟಿಗೊಬ್ಬ 3 ತೆರೆಗೆ ಬರಬೇಕಿದೆ. ಕೋಟಿಗೊಬ್ಬ ಚಿತ್ರದ ರಿಲೀಸ್ ದಿನಾಂಕವೂ ಪ್ರಕಟವಾಗಿಲ್ಲ. ಹಾಗಾಗಿ, ಸೂರಪ್ಪ ಬಾಬು ಚಿತ್ರದ ಬಿಡುಗಡೆ ಮೇಲೆ ವಿಕ್ರಾಂತ್ ರೋಣ ಸಿನಿಮಾದ ರಿಲೀಸ್ ನಿಂತಿದೆ.

ಕನ್ನಡದಲ್ಲಿ ಮೊದಲ ಚಿತ್ರ

ಕನ್ನಡದಲ್ಲಿ ಮೊದಲ ಚಿತ್ರ

ಜಾಕ್ವೆಲಿನ್‌ಗೆ ವಿಕ್ರಾಂತ್ ರೋಣ ಮೊದಲ ಕನ್ನಡ ಸಿನಿಮಾ. ಇನ್ನು ಹಿಂದಿಯಲ್ಲಿ ಅಟ್ಯಾಕ್, ಸರ್ಕಸ್, ಹಾಗೂ ಅಕ್ಷಯ್ ಕುಮಾರ್ ಜೊತೆ ಬಚ್ಚನ್ ಪಾಂಡೆ, ರಾಮ್ ಸೇತು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗಿನಲ್ಲಿ ಪವನ್ ಕಲ್ಯಾಣ್ ನಟಿಸುತ್ತಿರುವ 'ಹರಿ ಹರ ವೀರ ಮಲ್ಲು' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

More from Filmibeat

English summary
Jacqueline Fernandez's First Look From Vikrant Rona Released; Introducing as Raquel D'Costa aka Gadang Rakkamma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X