For Quick Alerts
  ALLOW NOTIFICATIONS  
  For Daily Alerts

  ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ

  |

  ಬಾಲಿವುಡ್ ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಶಿವಮೊಗ್ಗದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಹೌದು, ಶ್ರೀಲಂಕಾ ಮೂಲದ ಈ ಸುಂದರಿ, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ. ಅಂದಹಾಗೆ ಜಾಕ್ವೆಲಿನ್ ಮಲೆನಾಡಿಗೆ ದಿಢೀರ್ ಭೇಟಿ ನೀಡಲು ಕಾರಣವೇನು? ಎನ್ನುವ ಪ್ರಶ್ನೆ ಸಹಜವಾಗಿ ಅಭಿಮಾನಿಗಳನ್ನು ಕಾಡುತ್ತಿದೆ.

  ಜಾಕ್ವೆಲಿನ್ ಕಳೆದೆರಡು ದಿನಗಳಿಂದ ಶಿವಮೊಗ್ಗದಲ್ಲೇ ಬೀಡುಬಿಟ್ಟಿದ್ದಾರೆ. ಅಂದಹಾಗೆ ಸಿನಿಮಾದವರು ಬರ್ತಾರೆ ಎಂದರೆ ಯಾವುದೋ ಶೂಟಿಂಗ್ ಇರಬಹುದು ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ. ಆದರೆ ಜಾಕ್ವೆಲಿನ್ ಶಿವಮೊಗ್ಗಕ್ಕೆ ಬಂದಿರುವುದು ಒಂದು ಖಾಸಗಿ ಭೇಟಿಯಷ್ಟೆ. ಸ್ನೇಹಿತರ ಜೊತೆ ವೀಕೆಂಡ್ ಎಂಜಾಯ್ ಮಾಡಲು ಜಾಕ್ವೆಲಿನ್ ಈ ಬಾರಿ ಆಯ್ಕೆ ಮಾಡಿಕೊಂಡ ಜಾಗ ಶಿವಮೊಗ್ಗ.

  ಕತ್ರಿನಾ-ನೋರಾ ಫತೇಹಿ ಇಬ್ಬರೂ ಅಲ್ಲ: ಸುದೀಪ್ ಜೊತೆ ಹೆಜ್ಜೆ ಹಾಕುತ್ತಿದ್ದಾರೆ ಬಾಲಿವುಡ್ ನ ಈ ಸ್ಟಾರ್ ನಟಿ

  ಕಿಮ್ಮನೆ ಗಾಲ್ಫ್ ರೆಸಾರ್ಟ್ ನಲ್ಲಿ ಜಾಕ್ವೆಲಿನ್

  ಕಿಮ್ಮನೆ ಗಾಲ್ಫ್ ರೆಸಾರ್ಟ್ ನಲ್ಲಿ ಜಾಕ್ವೆಲಿನ್

  ಶಿವಮೊಗ್ಗದ ಐಷಾರಾಮಿ ಕಿಮ್ಮನೆ ಗಾಲ್ಫ್ ರೆಸಾರ್ಟ್ ನಲ್ಲಿ ಜಾಕ್ವೆಲಿನ್ ತಂಗಿದ್ದಾರೆ. ಸ್ನೇಹಿತರ ಜೊತೆ ಆಗಮಿಸಿರುವ ಜಾಕ್ವೆಲಿನ್ ಸುಂದರ ಪ್ರಕೃತಿಯ ನಡುವೆ ವೀಕೆಂಡ್ ಎಂಜಾಯ್ ಮಾಡುತ್ತಿದ್ದಾರೆ. ಸ್ನೇಹಿತರ ಜೊತೆ ಗಾಲ್ಫ್ ಆಡಿ ಜಾಕ್ವೆಲಿನ್ ಸಂಭ್ರಮಿಸಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ಜಾಕ್ವೆಲಿನ್

  ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ಜಾಕ್ವೆಲಿನ್

  ಕಳೆದರೆಡು ದಿನಗಳಿಂದ ಮಲೆನಾಡಿನ ಪ್ರಕೃತಿ ಸೌಂದರ್ಯದ ಮಧ್ಯೆ ಇರುವ ಜಾಕ್ವೆಲಿನ್ ಒಂದಿಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಶಿವಮೊಗ್ಗದ ಸುಂದರ ಕ್ಷಣಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಬೆಸ್ಟ್ ವೀಕೆಂಡ್ ಎವರ್' ಎಂದು ಬರೆದುಕೊಂಡಿದ್ದಾರೆ.

  ಸುದೀಪ್ ಫ್ಯಾಂಟಮ್ ಸಿನಿಮಾದಲ್ಲಿ ಜಾಕ್ವೆಲಿನ್

  ಸುದೀಪ್ ಫ್ಯಾಂಟಮ್ ಸಿನಿಮಾದಲ್ಲಿ ಜಾಕ್ವೆಲಿನ್

  ಅಂದಹಾಗೆ ಜಾಕ್ವೆಲಿನ್ ಕನ್ನಡದ ಸಿನಿಮಾ ಹಾಡಿನಲ್ಲಿ ಹೆಜ್ಜೆ ಹಾಕಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾದ ಹಾಡಿನಲ್ಲಿ ಜಾಕ್ವೆಲಿನ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಏಪ್ರಿಲ್ ನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದ್ದು, ಜಾಕ್ವೆಲಿನ್ ಏಪ್ರಿಲ್ ನಲ್ಲಿ ಪ್ಯಾಂಟಮ್ ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

  KGF ಮೀರಿಸಲಿದೆ ಸಲಾರ್ | Filmibeat Kannada
  ಜಾಕ್ವೆಲಿನ್ ಬಳಿ ಇರುವ ಸಿನಿಮಾಗಳು

  ಜಾಕ್ವೆಲಿನ್ ಬಳಿ ಇರುವ ಸಿನಿಮಾಗಳು

  ಜಾಕ್ವೆಲಿನ್ ಸದ್ಯ ಬಾಲಿವುಡ್ ನ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅಕ್ಷಯ್ ಕುಮಾರ್ ಜೊತೆ ಬಚ್ಚನ್ ಪಾಂಡೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಅಟ್ಯಾಕ್, ಭೂತ್ ಪೊಲೀಸ್, ಸರ್ಕಸ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  English summary
  Bollywood Actress Jacqueline Fernandez visits shivamogga with her friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X