»   » ಜಡೇಜಾಗೆ ನಾಯಕಿಯಾಗಿ ‘ಭಾರತ ಸುಂದರಿ’ ಸೆಲೀನಾ

ಜಡೇಜಾಗೆ ನಾಯಕಿಯಾಗಿ ‘ಭಾರತ ಸುಂದರಿ’ ಸೆಲೀನಾ

Posted By: Staff
Subscribe to Filmibeat Kannada

ಮುಂಬಯಿ : ಕ್ರಿಕೆಟ್‌ನಿಂದ ಹೊರದಬ್ಬಿಸಿಕೊಂಡು ಸಿನಿಮಾದಲ್ಲಿ ತಾರೆಯಾಗಲು ಹೊರಟಿರುವ ಅಜಯ್‌ ಜಡೇಜಾಗೆ ಚೊಚ್ಚಿಲ ನಾಯಕಿಯಾಗಿ ಭಾರತ ಸುಂದರಿ ಸೆಲೀನಾ ಜೇಟ್ಲಿ ಆಯ್ಕೆಯಾಗಿದ್ದಾರೆ. ಇದು ಸೆಲೀನಾ ಅದೃಷ್ಟ ಪರೀಕ್ಷೆಯೂ ಹೌದು. ಆಕೆ, ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಯಶಸ್ಸು ಗಳಿಸಲು ವಿಫಲಳಾಗಿದ್ದಳು.

ಮೂರು ದಿನಗಳ ಹಿಂದಷ್ಟೆ ಸೆಲೀನಾ ಕಾಲ್‌ಷೀಟ್‌ ಪಡೆಯುವಲ್ಲಿ ನಿರ್ಮಾಪಕ ಪಮ್ಮಿ ಸಂಧು ಯಶಸ್ವಿಯಾಗಿದ್ದಾರೆ. ಈಗಾಗಲೇ ಸುನಿಲ್‌ ಶೆಟ್ಟಿ ಶಿಫಾರಸ್ಸಿನ ಮೇರೆಗೆ ಜಡೇಜಾ ಅವರನ್ನು ತಮ್ಮ ಸಿನಿಮಾಕ್ಕೆ ನಾಯಕನನ್ನಾಗಿ ಸಂಧು ಆರಿಸಿದ್ದರು. ಹೊಸ ನಾಯಕನನ್ನು ನೆಚ್ಚಿದ್ದ ಸಂಧು ನಾಯಕಿಯ ಪಾತ್ರಕ್ಕೂ ತಾಜಾ ಮುಖದ ಹುಡುಕಾಟದಲ್ಲಿದ್ದರು, ಸಿಕ್ಕಿದ್ದು ಸೆಲೀನಾ. 'ಆಕೆ ಭಾರತ ಸುಂದರಿ! ನನ್ನ ಸಿನಿಮಾಕ್ಕೆ ನಾಯಕಿಯಾಗಲು ಇನ್ನೇನು ಬೇಕು" ಎನ್ನುತ್ತಾರೆ ಸೆಲೀನಾ ಕಾಲ್‌ಷೀಟ್‌ ಗಿಟ್ಟಿಸಿರುವ ಖುಷಿಯಲ್ಲಿರುವ ಸಂಧು.

ಸಿನಿಮಾ ಎರಡು ತಿಂಗಳ ಹಿಂದೆಯೇ ಅಧಿಕೃತವಾಗಿ ಸೆಟ್ಟೇರಿದೆ. ನಾಯಕಿ ಆಯ್ಕೆಯಾಗಿರುವುದು ಈಗ. ಸಿನಿಮಾಕ್ಕೆ ಇನ್ನು ಹೆಸರಿಟ್ಟಿಲ್ಲ . ಬರುವ ಜೂನ್‌ ಹೊತ್ತಿಗೆ ಸಿನಿಮಾ ತೆರೆ ಕಾಣುವ ನಿರೀಕ್ಷೆ ನಿರ್ಮಾಪಕರದು. ಅಂದಮೇಲೆ ಅಭಿಮಾನಿಗಳು ಜಡೇಜಾ- ಸೆಲೀನಾ ಡ್ಯುಯೆಟ್‌ಗಾಗಿ ವರ್ಷ ಕಾಯಬೇಕು.

ಜಡೇಜಾ- ಸೆಲೀನಾ : ಜೊತೆಯಾದ ಸಮಾನ ದುಃಖಿಗಳು

ಭಾರತ ಸುಂದರಿಯಾಗಿ ಆಯ್ಕೆಯಾದ ನಂತರ ಯಶಸ್ಸಿನಿಂದ ದೂರವಾಗಿರುವ ಸೆಲೀನಾಗೆ ಇದು ಚೊಚ್ಚಿಲ ಚಿತ್ರ. ವಿಶ್ವಸುಂದರಿ ಸ್ಪರ್ಧೆಯಲ್ಲಿ 5 ನೇ ಸ್ಥಾನ ಗಳಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ಸುಂದರಿಯರೇ ಮೇಲುಗೈ ಸಾಧಿಸಿದ ಹಿನ್ನೆಲೆಯಲ್ಲಿ ಸೆಲೀನಾ ತೀವ್ರ ಹಿನ್ನಡೆ ಅಘಾತಕರವೇ. ಆಕೆಯೀಗ ಕಹಿಯನ್ನು ಕನಸೆಂದು ಮರೆಯಲು ಪ್ರಯತ್ನಿಸುತ್ತಿದ್ದಾರೆ. ಬಾಲಿವುಡ್‌ನಲ್ಲಾದರೂ ಸೆಲೀನಾ ನಂಬರ್‌ 1 ಅಗುವರೇ ಅನ್ನುವುದು ಕುತೂಹಲಕರ ಪ್ರಶ್ನೆ .

ಸೆಲೀನಾ ಅವರದ್ದು ಸೋಲಿನ ಕಥೆಯಾದರೆ, ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ವಂಚನೆಯ ಆರೋಪದಲ್ಲಿ ಕ್ರಿಕೆಟ್‌ನಿಂದ ಕತ್ತಿಡಿದು ದಬ್ಬಿಸಿಕೊಂಡ ದುರಂತ ಜಡೇಜಾರದು. ಬಿಸಿಸಿಐನಿಂದ 5 ವರ್ಷಗಳ ನಿಷೇಧ ಹೇರಿಸಿಕೊಂಡು ಹೆಚ್ಚೂ ಕಡಿಮೆ ಕ್ರಿಕೆಟ್‌ ಮರೆತಿರುವ ಜಡೇಜಾ ಈಗ ಸಂಧು ಸಿನಿಮಾದಲ್ಲಿ ನಟಿಸುವುದಕ್ಕಾಗಿ ನಟನೆ ಹಾಗೂ ಸಾಹಸ ದೃಶ್ಯಗಳಲ್ಲಿ ಭಾಗಿಯಾಗುವ ತರಬೇತಿ ಪಡೆಯುತ್ತಿದ್ದಾರೆ. ಅವರಿಗೆ ಯಶಸ್ಸು ಸಿಕ್ಕಲಿ.

( ಇನ್ಫೋ ವಾರ್ತೆ)

English summary
Celina Jaitley will be the heroine for jadeja in a new film

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada