»   » ಅಮೂಲ್ಯ ಹುಟ್ಟುಹಬ್ಬಕ್ಕೆ ಪತಿ ಜಗದೀಶ್ ಕೊಟ್ಟ ದುಬಾರಿ ಗಿಫ್ಟ್!

ಅಮೂಲ್ಯ ಹುಟ್ಟುಹಬ್ಬಕ್ಕೆ ಪತಿ ಜಗದೀಶ್ ಕೊಟ್ಟ ದುಬಾರಿ ಗಿಫ್ಟ್!

Posted By:
Subscribe to Filmibeat Kannada

ಮದುವೆಯ ನಂತರ ಗೋಲ್ಡನ್ ಕ್ವೀನ್ ಅಮೂಲ್ಯ ಅವರ ಮೊದಲ ಹುಟ್ಟುಹಬ್ಬ ನಿನ್ನೆ (ಸೆಪ್ಟಂಬರ್ 14) ಅದ್ಧೂರಿಯಾಗಿ ಆಚರಿಸಲಾಯಿತು. ತಮ್ಮ ಪತಿ ಜಗದೀಶ್ ಅವರ ಜೊತೆಗೂಡಿ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು.

ಪ್ರತಿವರ್ಷದಂತೆ ಅಭಿಮಾನಿಗಳ ಕಡೆಯಿಂದ, ಸ್ನೇಹಿತರ ಕಡೆಯಿಂದ ಅಮೂಲ್ಯ ಅವರಿಗೆ ವಿಶೇಷವಾದ ಉಡುಗೊರೆಗಳನ್ನ ಸಿಕ್ಕಿದೆ. ಆದ್ರೆ, ಪತಿ ಜಗದೀಶ್ ಅವರ ಅಮೂಲ್ಯಗೆ ಏನ್ ಗಿಫ್ಟ್ ಕೊಡ್ತಾರೆ ಎಂಬುದು ಕುತೂಹಲ ಮೂಡಿಸಿತ್ತು.

ಇದೀಗ, ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು, ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ್ದಾರೆ. ಹಾಗಿದ್ರೆ, ಅಮೂಲ್ಯ ಬರ್ತ್ ಡೇಗೆ ಜಗದೀಶ್ ಗಿಫ್ಟ್ ಕೊಟ್ಟ ಕಾರ್ ಯಾವುದು ಎಂದು ಮುಂದೆ ಓದಿ.....

'ದುಬಾರಿ' ಕಾರ್

ನಟಿ ಅಮೂಲ್ಯ ಅವರ ಬರ್ತ್ ಡೇ ಸ್ಪೆಷಲ್ ಪತಿ ಜಗದೀಶ್ ಅವರಿಂದ ದುಬಾರಿ ಕಾರ್ ಉಡುಗೊರೆಯಾಗಿ ಸಿಕ್ಕಿದೆ. ಈ ಕಾರಿನ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆ ದುಬಾರಿ ಕಾರ್ ಯಾವುದು?

ಪತ್ನಿಯ ಹುಟ್ಟುಹಬ್ಬಕ್ಕೆ ಪತಿ ಜಗದೀಶ್ ಕೊಡಿಸಿರುವ ದುಬಾರಿ ಕಾರ್ ಮರ್ಸಿಡಿಸ್ ಬೆಂಜ್ (Mercedes Benz). ಬಿಳಿ ಬಣ್ಣದ ಕಾರು ಇದು.

ಡ್ರೈವಿಂಗ್ ಮಾಡಿ ಖುಷಿ ಪಟ್ಟ ಅಮ್ಮು

ಜಗದೀಶ್ ಅವರು ಉಡುಗೊರೆಯಾಗಿ ನೀಡಿದ Mercedes Benz ಕಾರನ್ನ ಅಮೂಲ್ಯ ಸ್ವತಃ ಡ್ರೈವ್ ಮಾಡಿ ಖುಷಿ ಪಟ್ಟರು.

24ನೇ ಹುಟ್ಟುಹಬ್ಬ

ಸೆಪ್ಟಂಬರ್ 14ಕ್ಕೆ, ಅಮೂಲ್ಯ ತಮ್ಮ 24ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಮದುವೆಯ ನಂತರ ಇದು ಗೋಲ್ಡನ್ ಕ್ವೀನ್ ಸಲೆಬ್ರೇಟ್ ಮಾಡಿದ ಚೊಚ್ಚಲ ಬರ್ತ್ ಡೇ.

English summary
Jagadish has Gifted a Mercedes Benz car to His Wife Amulya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada