For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಚಿತ್ರದಲ್ಲಿ ತೆಲುಗು ಸ್ಟಾರ್ ಜಗಪತಿ ಬಾಬು

  By Rajendra
  |

  ತೆಲುಗು ಚಿತ್ರರಂಗದ ಜನಪ್ರಿಯ ನಟ ಜಗಪತಿ ಬಾಬು ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ 'ಬಚ್ಚನ್' ಚಿತ್ರದಲ್ಲಿ ಜಗಪತಿ ಬಾಬು ಅಭಿನಯಿಸಲಿದ್ದಾರೆ. ಶಶಾಂಕ್ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದೆ.

  ಇದುವರೆಗೂ ಜಗಪತಿ ಬಾಬು ಕನ್ನಡ ಚಿತ್ರಗಳಲ್ಲಿ ಅಭಿನಯಿಸದೇ ಇದ್ದರೂ ಕನ್ನಡ ಚಿತ್ರರಂಗದ ಸಭೆ ಸಮಾರಂಭಗಳಲ್ಲಿ ಆಗಾಗ ಕಾಣಿಸಿಕೊಂಡದ್ದುಂಟು. ಆಗೆಲ್ಲಾ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಆಸೆಯನ್ನು ವ್ಯಕ್ತಪಡಿಸುತ್ತಿದ್ದರು. ಬಚ್ಚನ್ ಚಿತ್ರದ ಮೂಲಕ ಈಗ ಅವರ ಆಸೆ ಈಡೇರುತ್ತಿದೆ.

  ಶಶಾಂಕ್ ನಿರ್ದೇಶಿಸುತ್ತಿರುವ 'ಬಚ್ಚನ್' ಚಿತ್ರದಲ್ಲಿ ಜಗಪತಿ ಬಾಬು ಅವರದು ಖಡಕ್ ಪೊಲೀಸ್ ಅಧಿಕಾರಿ ಪಾತ್ರ. ಒಟ್ಟು ಹನ್ನೆರಡು ದಿನಗಳ ಕಾಲ ಜಗಪತಿ ಬಾಬು ಪಾತ್ರದ ಚಿತ್ರೀಕರಣ ನಡೆಯಲಿದೆ ಎಂದಿದ್ದಾರೆ ಚಿತ್ರದ ನಿರ್ದೇಶಕರು. ಮೇ 31ರಂದು ಬೆಂಗಳೂರಿನಲ್ಲಿ ಚಿತ್ರ ಸೆಟ್ಟೇರಲಿದ್ದು ಜೂ. 25ರಿಂದ ಚಿತ್ರೀಕರಣ ಆರಂಭವಾಲಿದೆ. (ಏಜೆನ್ಸೀಸ್)

  English summary
  Telugu actor Jagapathi Babu debut in Kichcha Sudeep lead Kannada film Bachchan directing by Shashank. Jagapathi Babu plays a dynamic police officer in this film. The movie will be launched on 31st May

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X