ಅಂದು ಸುದೀಪ್ ಗೆ ವಿಲನ್ ಆಗಿದ್ದ 'ಈ ನಟ' ಇಂದು ದರ್ಶನ್ ಗೆ ವಿಲನ್

Recommended Video

Robert Kannada Movie: ಜೋರಾಗಿಯೇ ನಡೀತಿದೆ ರಾಬರ್ಟ್ ತಯಾರಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ರಾಬರ್ಟ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟ 'ರಾಬರ್ಟ್' ಸಿನಿಮಾ ಮುಹೂರ್ತ ಮಾಡಿಕೊಂಡು ಚಿತ್ರೀಕರಣಕ್ಕೆ ಇಳಿದಿದೆ. ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ 'ರಾಬರ್ಟ್' ಸಿನಿಮಾ ಸದ್ಯ ಸಾಕಷ್ಟು ಕೌತುಕಗಳಿಂದ ಚಿತ್ರಾಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿದೆ.

'ರಾಬರ್ಟ್' ಮೂಲಕ ದಾಸ ವಿಭಿನ್ನ ಲುಕ್ ನಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. 'ಚೌಕ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನ ಬರವಸೆಯ ನಿರ್ದೇಶಕನಾಗಿರುವ ತರುಣ್ ಸುಧೀರ್ ರಾಬರ್ಟ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ರಾಬರ್ಟ್' ಅಭಿಮಾನಿಗಳ ನಿರೀಕ್ಷೆ ಮಟ್ಟವನ್ನು ಹೆಚ್ಚಿಸಿದ್ದಾರೆ.

ಸದ್ಯ 'ರಾಬರ್ಟ್' ಚಿತ್ರದ ಕಲಾವಿದರ ಆಯ್ಕೆ ವಿಚಾರ ಭಾರಿ ಕುತೂಹಲ ಮೂಡಿಸಿದೆ. ಚಿತ್ರತಂಡ ಇನ್ನು ಅಧಿಕೃತವಾಗಿ ಯಾವ ಕಲಾವಿದರ ಹೆಸರನ್ನು ಬಹಿರಂಗ ಪಡಿಸಿಲ್ಲ. ಆದ್ರೆ ದಿನಕೊಬ್ಬರ ಹೆಸರು ಕೇಳಿ ಬರುತ್ತಿದೆ. ವಿಶೇಷ ಅಂದ್ರೆ ಅಂದು ಕಿಚ್ಚ ಸುದೀಪ್ ಜೊತೆ ಫೈಟ್ ಮಾಡಿದ್ದ ಸೌತ್ ಸಿನಿ ಇಂಡಸ್ಟ್ರಿಯ ಖ್ಯಾತ ನಟ ಜಗಪತಿ ಬಾಬು ಇಂದು ದರ್ಶನ್ ವಿರುದ್ಧ ಅಖಾಡಕ್ಕೆ ಇಳಿದ್ದಾರೆ. ಮುಂದೆ ಓದಿ..

ದರ್ಶನ್ ಎದುರು ಅಖಾಡಕ್ಕೆ ಇಳಿದ ಜಗಪತಿ ಬಾಬು

ದರ್ಶನ್ ಎದುರು ಅಖಾಡಕ್ಕೆ ಇಳಿದ ಜಗಪತಿ ಬಾಬು

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಜಗಪತಿಬಾಬು 'ರಾಬರ್ಟ್' ಚಿತ್ರದಲ್ಲಿ ಅಭಿನಯಿಸುತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮೊದಲ ಬಾರಿಗ ಜಗಪತಿ ಬಾಬು ಮತ್ತು ದರ್ಶನ್ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಸೌತ್ ಇಂಡಸ್ಟ್ರಿಯ ಬಹು ಬೇಡಿಕೆಯ ಸ್ಟಾರ್ ವಿಲನ್ ಜಗಪತಿ ಬಾಬು. 'ರಾಬರ್ಟ್' ಚಿತ್ರಕ್ಕೆ ಎಂಟ್ರಿ ಕೊಟ್ಟಿರುವುದು ಕನ್ನಡ ಚಿತ್ರಾಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಜಗಪತಿ ಬಾಬು ಎಂಟ್ರಿ ಇಂದ ಚಿತ್ರದಲ್ಲಿ ಇಬ್ಬರು ಘಟಾನುಘಟಿ ನಾಯಕರ ಖಾದಾಟ ಮತ್ತಷ್ಟು ರೋಚಕವಾಗಿರಲಿದೆ.

ಅಂದು ಸುದೀಪ್ ಗೆ ವಿಲನ್, ಇಂದು ದರ್ಶನ್ ಗೆ ವಿಲನ್

ಅಂದು ಸುದೀಪ್ ಗೆ ವಿಲನ್, ಇಂದು ದರ್ಶನ್ ಗೆ ವಿಲನ್

ಜಗಪತಿ ಬಾಬು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ತೀರ ಅಪರೂಪ. ಬಹು ಬೇಡಿಕೆಯ ನಟ ಮೊದಲು ಕಿಚ್ಚ ಸುದೀಪ್ ಅಭಿನಯದ 'ಬಚ್ಚನ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 'ಬಚ್ಚನ್' ನಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ಜಗಪತಿ ಬಾಬು ಕನ್ನಡ ಚಿತ್ರಾಭಿಮಾನಿಗಳ ಮನಗೆದ್ದಿದ್ದರು. ಈಗ ಮತ್ತೆ ದರ್ಶನ್ ಸಿನಿಮಾ ಮೂಲಕ ಕನ್ನಡಕ್ಕೆ ಬರುತ್ತಿರುವುದು 'ರಾಬರ್ಟ್' ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಜಾಗ್ವಾರ್ ಚಿತ್ರದಲ್ಲಿ ಅಬ್ಬರಿಸಿದ್ದ ಜಗಪತಿ ಬಾಬು

ಜಾಗ್ವಾರ್ ಚಿತ್ರದಲ್ಲಿ ಅಬ್ಬರಿಸಿದ್ದ ಜಗಪತಿ ಬಾಬು

ಕನ್ನಡದಲ್ಲಿ ಗಜಪತಿ ಬಾಬು 'ಬಚ್ಚನ್' ನಂತರ 'ಜಾಗ್ವಾರ್' ಚಿತ್ರದಲ್ಲಿ ಕಾಣಿಸಿಕೊಡಿದ್ದಾರೆ. ನಿಖಿಲ್ ಕುಮಾರ ಸ್ವಾಮಿ ಅಭಿನಯದ 'ಜಾಗ್ವಾರ್' ಮೂಲಕ ಮತ್ತೊಮ್ಮೆ ಕನ್ನಡ ಚಿತ್ರಪ್ರಿಯರ ಮುಂದೆ ಬಂದಿದ್ದರು. ಇನ್ನು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಉಪ್ಪಿ ರುಪಿ' ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರಂತೆ. ಆದ್ರೆ ಎರಡೇ ಸಿನಿಮಾ ಮೂಲಕ ಕನ್ನಡಿಗರ ಫೇವರಿಟ್ ವಿಲನ್ ಆಗಿರುವ ಜಗಪತಿ ಬಾಬು ಚಾಲೆಂಜಿಂಗ್ ಸ್ಟಾರ್ ವಿರುದ್ಧ ಫೈಟ್ ಮಾಡುತ್ತಿರುವುದು ಕುತೂಹಲ ಹೆಚ್ಚಿಸಿದೆ.

ಕುತೂಹಲ ಮೂಡಿಸಿದ ರಾಬರ್ಟ್ ಕಲಾವಿದರ ಆಯ್ಕೆ

ಕುತೂಹಲ ಮೂಡಿಸಿದ ರಾಬರ್ಟ್ ಕಲಾವಿದರ ಆಯ್ಕೆ

ಕಲಾವಿರದ ಆಯ್ಕೆ ವಿಚಾರದಲ್ಲಿ 'ರಾಬರ್ಟ್' ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ದರ್ಶನ್ ಗೆ ನಾಯಕಿ ಯಾರು ಆಗುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ನಟಿಮಣಿಯ ಹೆಸರುಗಳು ಕೇಳಿ ಬರುತ್ತಿದೆ. ತೆಲುಗು ನಟಿ ರಾಕುಲ್ ಪ್ರೀತಿ ಸಿಂಗ್, ಸಾಯಿ ಪಲ್ಲವಿ ಸೇರಿದಂತೆ ಸಾಕಷ್ಟು ನಟಿಯರ ಹೆಸರು ಹರಿದಾಡುತ್ತಿದೆ. ಆದ್ರೆ ಚಿತ್ರತಂಡ ಇನ್ನು ಯಾವ ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ಪ್ರಮುಖ ಪಾತ್ರದಲ್ಲಿ ಪ್ರಣಿತಾ ಮಿಂಚಿಗ್

ಪ್ರಮುಖ ಪಾತ್ರದಲ್ಲಿ ಪ್ರಣಿತಾ ಮಿಂಚಿಗ್

ಚಿತ್ರದ ಪ್ರಮುಖ ಪಾತ್ರದಲ್ಲಿ ಸ್ಯಾಂಡಲ್ ವುಡ್ ನಟಿ ಪ್ರಣೀತಾ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಪಾತ್ರದ ಬಗ್ಗೆ ಬಹಿರಂಗ ಪಡಿಸಿಲ್ಲ. ಇನ್ನು ಉಳಿದಂತೆ ಚಿತ್ರದಲ್ಲಿ ಯಾರೆಲ್ಲ ಕಲಾವಿದರು ಇರಲಿದ್ದಾರೆ ಎನ್ನುವ ಕುತೂಹಲ ಕೂಡ ಹೆಚ್ಚಾಗಿದೆ. ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟು ಕೊಡದ ನಿರ್ದೇಶಕ ತರುಣ್ ಸೈಲೆಂಟ್ ಆಗಿ ಚಿತ್ರೀಕರಣ ಮಾಡಿ ಮುಗಿಸುವ ಪ್ಲಾನ್ ನಲ್ಲಿದ್ದಾರೆ.

ಸೆಟ್ ನಲ್ಲಿ ಮೊಬೈಲ್ ಬ್ಯಾನ್

ಸೆಟ್ ನಲ್ಲಿ ಮೊಬೈಲ್ ಬ್ಯಾನ್

ರಾಬರ್ಟ್ ಶೂಟಿಂಗ್ ಸೆಟ್ ನಲ್ಲಿ ಮೊಬೈಲ್ ಬ್ಯಾನ್ ಮಾಡಿದೆ ಚಿತ್ರತಂಡ. ಕಲಾವಿದರು ಮತ್ತು ಮತ್ತು ತಂತ್ರಜ್ಞರು ಚಿತ್ರೀಕರಣ ವೇಳೆ ಮೊಬೈಲ್ ಫೋನ್ ಬಳಸದಂತೆ ತಾಕೀತು ಮಾಡಿದೆ. ರಾಬರ್ಟ್ ಚಿತ್ರದ ಫೋಟೋ ಮತ್ತು ವೀಡಿಯೋಗಳು ಲೀಕ್ ಆಗುವ ಸಾದ್ಯತೆ ಹೆಚ್ಚಾಗಿರುತ್ತೆ. ಕುತೂಹಲ ಮೂಡಿಸುವ ಕೆಲವು ದೃಶ್ಯಗನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಾರೆ ಎನ್ನುವ ಉದ್ದೇಶದಿಂದ ರಾಬರ್ಟ್ ಶೂಟಿಂಗ್ ಸೆಟ್ ನಲ್ಲಿ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದೆ ಚಿತ್ರತಂಡ.

More from Filmibeat

English summary
South film industry famous villain actor Jagapathi Babu is playing a villain in 'Robert' movie. Challenging star Darshan starrer Robert film. This movie is directed by Tarun Sudhir.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X