For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿ 12ಕ್ಕೆ ಜಗಪತಿ ಬಾಬು 'ಮದಗಜ' ಫಸ್ಟ್ ಲುಕ್ ಬಿಡುಗಡೆ

  |

  ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾ ಕೊನೆಯ ಹಂತದ ಚಿತ್ರೀಕರಣ ಮಾಡ್ತಿದೆ. ಸಾಕಷ್ಟು ನಿರೀಕ್ಷೆಗಳೊಂದಿಗೆ ತಯಾರಾಗುತ್ತಿರುವ ಈ ಚಿತ್ರ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗುತ್ತಿದೆ.

  ಮೂರು ಭಾಷೆಯಲ್ಲಿ ಈಗಾಗಲೇ ಟೀಸರ್ ಮೂಲಕ ಸದ್ದು ಮಾಡುತ್ತಿರುವ ಮದಗಜ ಸಿನಿಮಾ ಈಗ ಖಳನಾಯಕನ ಫಸ್ಟ್ ಲುಕ್ ಅನಾವರಣಗೊಳಿಸಲಿದೆ.

  'ಮದಗಜ' ಚಿತ್ರತಂಡ ನೀಡಲಿದೆ ಹೊಸ ಅಪ್‌ಡೇಟ್: ಏನು ಆ ಸರ್ಪ್ರೈಸ್?'ಮದಗಜ' ಚಿತ್ರತಂಡ ನೀಡಲಿದೆ ಹೊಸ ಅಪ್‌ಡೇಟ್: ಏನು ಆ ಸರ್ಪ್ರೈಸ್?

  ಫೆಬ್ರವರಿ 12 ರಂದು ಬೆಳಗ್ಗೆ 9.09 ಗಂಟೆಗೆ ಮದಗಜ ಚಿತ್ರದಲ್ಲಿ ಜಗಪತಿ ಬಾಬು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಪೋಸ್ಟರ್ ಬಿಡುಗಡೆಯಾಗುತ್ತಿದೆ. ಈ ಕುರಿತು ಉಮಾಪತಿ ಫಿಲಂಸ್ ಟ್ವೀಟ್ ಮಾಡಿ ಮಾಹಿತಿ ನೀಡಿದೆ.

  ಅಂದ್ಹಾಗೆ, ಮದಗಜ ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಪ್ರಮುಖ ಖಳನಾಯಕನಾಗಿ ನಟಿಸಿದ್ದಾರೆ. ವಿಶೇಷ ಅಂದ್ರೆ ಫೆಬ್ರವರಿ 12 ಜಗಪತಿ ಬಾಬು ಅವರ ಹುಟ್ಟುಹಬ್ಬ. ಬರ್ತಡೇ ವಿಶೇಷವಾಗಿ ಮದಗಜ ಚಿತ್ರತಂಡ ತೆಲುಗು ನಟನಿಗೆ ಭರ್ಜರಿ ಉಡುಗೊರೆ ನೀಡಲಿದೆ.

  ಇನ್ನುಳಿದಂತೆ ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡುತ್ತಿದ್ದಾರೆ. ಶ್ರೀಮುರಳಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ಅಭಿನಯಿಸುತ್ತಿದ್ದಾರೆ.

  Recommended Video

  ಯಾಕಣ್ಣ..? ಅಂದೋರೆಲ್ಲ ಈ ಕಿರುಚಿತ್ರ ನೋಡಿ | Public Toilet
  English summary
  Telugu Actor Jagapathi Babu's Character Look From SriMurali MadhaGaja will be out february 12th.
  Tuesday, February 9, 2021, 19:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X