For Quick Alerts
  ALLOW NOTIFICATIONS  
  For Daily Alerts

  ಕೊನೆಗೂ 'ಮದಗಜ' ಚಿತ್ರಕ್ಕೆ ವಿಲನ್ ಆದ್ರು ಸೌತ್ ಸ್ಟಾರ್ ನಟ

  |

  ಶ್ರೀಮುರಳಿ ನಟನೆಯ 'ಮದಗಜ' ಸಿನಿಮಾ ಎರಡನೇ ಹಂತದ ಚಿತ್ರೀಕರಣ ಆರಂಭಿಸಿದೆ. ಸೆಪ್ಟೆಂಬರ್‌ ಕೊನೆಯ ವಾರದಿಂದ ಮೈಸೂರಿನಲ್ಲಿ ಶೂಟಿಂಗ್ ಆರಂಭಿಸಿರುವ ಮದಗಜ ಸೆಟ್‌ಗೆ ಇತ್ತೀಚಿಗಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದ್ದರು.

  ಇದೀಗ, ಮದಗಜ ಚಿತ್ರತಂಡದಿಂದ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ. ಶ್ರೀಮುರಳಿ ಎದುರು ಯಾರು ವಿಲನ್ ಆಗಿ ನಟಿಸಲಿದ್ದಾರೆ ಎಂದು ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಹಿಂದಿನ ವರದಿಯಂತೆ ಸೌತ್ ಇಂಡಸ್ಟ್ರಿಯ ಖ್ಯಾತ ನಟರೊಬ್ಬರು ಮದಗಜ ಚಿತ್ರಕ್ಕೆ ವಿಲನ್ ಆಗ್ತಾರೆ ಎನ್ನಲಾಗಿತ್ತು. ಅದರಂತೆ ಖ್ಯಾತ ನಟ ಶ್ರೀಮುರಳಿ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮುಂದೆ ಓದಿ...

  ಮದಗಜ ಜೊತೆ ಜಗಪತಿ ಬಾಬು

  ಮದಗಜ ಜೊತೆ ಜಗಪತಿ ಬಾಬು

  'ಅಯೋಗ್ಯ' ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿರುವ ಮದಗಜ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕುತ್ತಿದ್ದಾರೆ. ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ, ತೆಲುಗಿನ ಖ್ಯಾತ ನಟ ಹಾಗೂ ವಿಲನ್ ಪಾತ್ರಗಳಿಂದ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡಿರುವ ಜಗಪತಿ ಬಾಬು ಶ್ರೀಮುರಳಿ ಚಿತ್ರಕ್ಕೆ ಎಂಟ್ರಿಕೊಟ್ಟಿದ್ದಾರೆ.

  ವಿಜಯ್ ಸೇತುಪತಿ ಅಥವಾ ಜಗಪತಿ ಬಾಬು: 'ಮದಗಜ'ನಿಗೆ ಯಾರಾಗಲಿದ್ದಾರೆ ವಿಲನ್?ವಿಜಯ್ ಸೇತುಪತಿ ಅಥವಾ ಜಗಪತಿ ಬಾಬು: 'ಮದಗಜ'ನಿಗೆ ಯಾರಾಗಲಿದ್ದಾರೆ ವಿಲನ್?

  ಮೈಸೂರಿನ ಶೂಟಿಂಗ್‌ನಲ್ಲಿ ಭಾಗಿ

  ಮೈಸೂರಿನ ಶೂಟಿಂಗ್‌ನಲ್ಲಿ ಭಾಗಿ

  ಈ ಹಿಂದೆ ವಿಜಯ್ ಸೇತುಪತಿ ಅಥವಾ ಜಗಪತಿ ಬಾಬು ಅವರನ್ನು ಮದಗಜ ಚಿತ್ರದಲ್ಲಿ ವಿಲನ್ ಆಗಿಸಲು ಪ್ರಯತ್ನ ನಡೆದಿದ್ದವು. ಅಂತಿಮವಾಗಿ ಜಗಪತಿ ಬಾಬು ಅವರನ್ನು ಕರೆತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಮೈಸೂರಿನಲ್ಲಿ ನಡೆಯುತ್ತಿರುವ ಮದಗಜ ಚಿತ್ರೀಕರಣದಲ್ಲಿ ಜಗಪತಿ ಬಾಬು ಭಾಗಿಯಾಗಿದ್ದಾರೆ ಎನ್ನಲಾಗಿದೆ.

  ರಾಮ್-ಲಕ್ಷ್ಮಣ್ ಎಂಟ್ರಿ

  ರಾಮ್-ಲಕ್ಷ್ಮಣ್ ಎಂಟ್ರಿ

  ಮದಗಜ ಚಿತ್ರಕ್ಕೆ ತೆಲುಗಿನ ಖ್ಯಾತ ಸಾಹಸ ನಿರ್ದೇಶಕರಾದ ರಾಮ್-ಲಕ್ಷ್ಮಣ್ ಮಾಸ್ಟರ್ ಬಂದಿದ್ದಾರೆ. ಇದು ಸಹ ಚಿತ್ರದ ಆಕ್ಷನ್ ಮೇಲೆ ಹೆಚ್ಚು ನಿರೀಕ್ಷೆ ಮೂಡಿಸಿದೆ. ರಾಮ್-ಲಕ್ಷ್ಮಣ್ ಮಾಸ್ಟರ್ ತೆಲುಗಿನ ಸ್ಟಾರ್ ನಟರ ಚಿತ್ರಗಳಿಗೆ ಸ್ಟಂಟ್ ಡೈರೆಕ್ಟ್ ಮಾಡುವ ನಿರ್ದೇಶಕರು. ಇದೀಗ, ಕನ್ನಡಕ್ಕೆ ಬಂದಿರುವುದು ಚಿತ್ರಕ್ಕೆ ಹೆಚ್ಚಿನ ಶಕ್ತಿ ತುಂಬಿದೆ.

  ನಟ ಶ್ರೀಮುರಳಿಯನ್ನು ದಿಢೀರ್ ಭೇಟಿಯಾದ ಡಿ ಬಾಸ್ ದರ್ಶನ್: ಕಾರಣವೇನು?ನಟ ಶ್ರೀಮುರಳಿಯನ್ನು ದಿಢೀರ್ ಭೇಟಿಯಾದ ಡಿ ಬಾಸ್ ದರ್ಶನ್: ಕಾರಣವೇನು?

  ಅತ್ತಿಗೆಯನ್ನು ಧ್ರುವ ಎಷ್ಟು ಪ್ರೀತಿಸುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ | Filmibeat Kannada
  'ರಾಬರ್ಟ್' ಚಿತ್ರಕ್ಕೂ ಜಗಪತಿ ಬಾಬು ವಿಲನ್

  'ರಾಬರ್ಟ್' ಚಿತ್ರಕ್ಕೂ ಜಗಪತಿ ಬಾಬು ವಿಲನ್

  ಅಂದ್ಹಾಗೆ, ದರ್ಶನ್ ನಟಿಸುತ್ತಿರುವ ರಾಬರ್ಟ್ ಚಿತ್ರದಲ್ಲಿ ಜಗಪತಿ ಬಾಬು ವಿಲನ್ ಆಗಿ ನಟಿಸಿದ್ದಾರೆ. ಈ ಚಿತ್ರ ನಿರ್ಮಿಸಿರುವುದು ಉಮಾಪತಿ ಶ್ರೀನಿವಾಸ್. ಈಗ ಶ್ರೀಮುರಳಿ ನಟನೆಯ ಮದಗಜ ಚಿತ್ರ ನಿರ್ಮಿಸುತ್ತಿರುವುದು ಉಮಾಪತಿ ಶ್ರೀನಿವಾಸ್.

  English summary
  Telugu actor Jagapathi Babu to play villain in Srimurali's Madagaja Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X