ವಿಜಯ್ ಸೇತುಪತಿ ಅಥವಾ ಜಗಪತಿ ಬಾಬು: 'ಮದಗಜ'ನಿಗೆ ಯಾರಾಗಲಿದ್ದಾರೆ ವಿಲನ್?

ರೋರಿಂಗ್ ಸ್ಟಾರ್ ಶ್ರೀಮುರಳಿ ಸದ್ಯ ಮದಗಜ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿ 30ರಷ್ಟು ಚಿತ್ರೀಕರಣ ಮಾಡಿ ಮುಗಿಸಿದೆ. ಅಷ್ಟರಲ್ಲೆ ಕೊರೊನಾ ಲಾಕ್ ಡೌನ್ ಪರಿಣಾಮ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದ್ದು ಸದ್ಯ ಸಿನಿಮಾತಂಡ ಮನೆಯಲ್ಲಿಯೆ ಕಾಲಕಳೆಯುತ್ತಿದೆ.

Recommended Video

ಸುಶಾಂತ್ ಸಾವು ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದ ಕಂಗನ | Kangana Ranaut | Oneindia Kannada

ಈ ನಡುವೆ ಚಿತ್ರದಿಂದ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಮದಗಜ ಚಿತ್ರಕ್ಕೆ ವಿಲನ್ ಆಗಿ ದಕ್ಷಿಣ ಭಾರತದ ಖ್ಯಾತ ನಟನನ್ನು ಕರೆತರಲಾಗಿದೆಯಂತೆ. ಮೂಲಗಳ ಪ್ರಕಾರ ಚಿತ್ರಕ್ಕೆ ಜಗಪತಿ ಬಾಬು ಅಥವಾ ವಿಜಯ್ ಸೇತುಪತಿ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜಗಪತಿ ಬಾಬು ಈಗಾಗಲೆ ಕನ್ನಡದಲ್ಲಿ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಹಾಗಾಗಿ ಸ್ಯಾಂಡಲ್ ವುಡ್ ಅವರಿಗೇನು ಹೊಸದೇನಲ್ಲ. ಆದರೆ ವಿಜಯ್ ಸೇತುಪತಿ ಇನ್ನೂ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿಲ್ಲ. ಕನ್ನಡ ಹೊರತು ಪಡಿಸಿ ಸೇತುಪತಿ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿಯೂ ಅಭಿನಯಿಸಿದ್ದಾರೆ. ಮದಗಜ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರೆ ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

Jagapati Babu Or Vijay Sethuppathy Will Play Villain Role n Madagaja

ಅಂದ್ಹಾಗೆ ಇಬ್ಬರಲ್ಲಿ ಒಬ್ಬರು ಅಧಿಕೃತವಾಗಿದ್ದು ಶ್ರೀಮುರಳಿ ವಿರುದ್ಧ ತೊಡೆತಟ್ಟಲು ಸಿದ್ಧರಾಗಿದ್ದಾರಂತೆ. ವಿಲನ್ ಪಾತ್ರಕ್ಕಾಗಿ ಚಿತ್ರತಂಡ 1.72 ಕೋಟಿ ಸಂಭಾವನೆ ಕೊಟ್ಟಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ದೊಡ್ಡ ಮಟ್ಟದಲ್ಲಿ ಸಂಭಾವನೆ ಪಡೆದು ಮದಗಜ ಚಿತ್ರಕ್ಕೆ ಎಂಟ್ರಿ ಕೊಡುತ್ತಿರುವುದು ಯಾರು ಎನ್ನುವುದೆ ಸದ್ಯದ ಕುತೂಹಲ.

ವಿಲನ್ ಯಾರು ಎನ್ನುವ ಕುತೂಹಲಕ್ಕೆ ಟೀಸರ್ ಮೂಲಕ ಉತ್ತರ ನೀಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಮುಂದಿನ ತಿಂಗಳು ಚಿತ್ರದ ಟೀಸರ್ ರಿಲೀಸ್ ಆಗುವ ಸಾಧ್ಯತೆ ಇದ್ದು ಈ ಮೂಲಕ ವಿಲನ್ ಯಾರು ಎನ್ನುವುದನ್ನು ಬಹಿರಂಗ ಪಡಿಸಲಿದ್ದಾರಂತೆ.

More from Filmibeat

English summary
Actor Jagapati Babu or Vijay Sethuppathy will play villain role in Madagaja film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X