ಈ ವಾರ 'ಜಗತ್ ಕಿಲಾಡಿ' ಜೊತೆ 'ಎಂ.ಎಲ್.ಎ' ಆಗಮನ
ಈ ವಾರ ಕನ್ನಡ ಪ್ರೇಕ್ಷಕರೆದುರು ಮೂರು ವಿಭಿನ್ನ ಕನ್ನಡ ಸಿನಿಮಾಗಳು ಬರ್ತಿದೆ. ಟ್ರೈಲರ್, ಹಾಡುಗಳು ಮೂಲಕ ಹಾವಳಿ ನೀಡುತ್ತಿದ್ದ ಪ್ರಥಮ್ ಎಂ.ಎಲ್.ಎ ಕೊನೆಗೂ ಈ ವಾರ ತೆರೆಗೆ ಬರ್ತದೆ.
'ಎಂ.ಎಲ್.ಎ' ಜೊತೆ ನಿರಂಜನ್ ಶೆಟ್ಟಿ 'ಜಗತ್ ಕಿಲಾಡಿ' ಅವತಾರದಲ್ಲಿ ಬಿಗ್ ಸ್ಕ್ರೀನ್ ಮೇಲೆ ಎಂಟ್ರಿ ಕೊಡ್ತಿದ್ದಾರೆ. ಇವೆರಡು ಸಿನಿಮಾಗಳ ಜೊತೆ ಹೊಸಬರ 'ಗಲ್ಲಿ ಬೇಕರಿ' ಕೂಡ ಚಿತ್ರಮಂದಿರಕ್ಕೆ ಲಗ್ಗೆಯಿಡ್ತಿದೆ.
ನಿಮ್ಮ ಮುಂದೆ 'ಜಗತ್ ಕಿಲಾಡಿ'
ಲಯನ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಲಯನ್ ಆರ್ ರಮೇಶ್ ಬಾಬು ಅವರು ನಿರ್ಮಿಸಿರುವ 'ಜಗತ್ ಕಿಲಾಡಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಧೀರೇಂದ್ರ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿನಾಯಕರಾಮ ಕಲಗಾರು ಹಾಗೂ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ.

ಸಿನಿಟೆಕ್ ಸೂರಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗಿರಿಧರ್ ದಿವಾನ್ ಅವರ ಸಂಗೀತ ನಿರ್ದೇಶನವಿದೆ. ವಿ.ಮನೋಹರ್ ಹಾಗೂ ಉಮೇಶ್ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು, ವಿಶ್ವ ಅವರ ಸಂಕಲನ ಜಗತ್ ಕಿಲಾಡಿ ಚಿತ್ರಕ್ಕಿದೆ. ನಿರಂಜನ್ ಕುಮಾರ್ ಶೆಟ್ಟಿ ಅವರು ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅಮಿತಾ ಕುಲಾಳ್, ಜೈಜಗದೀಶ್, ವಿಶ್ವ, ರವಿಚೇತನ್, ಕೌಂಡಿನ್ಯ, ಮೈಕೋ ನಾಗರಾಜ್ ಮುಂತಾದವರಿದ್ದಾರೆ.

ಈ ವಾರ ತೆರೆಗೆ 'ಎಂ ಎಲ್ ಎ'
ತ್ರಿವೇಣಿ ಲಾಂಛನದಲ್ಲಿ ವೆಂಕಟೇಶ್ ರೆಡ್ಡಿ ಅವರು ನಿರ್ಮಿಸಿರುವ 'ಎಂ ಎಲ್ ಎ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವೆಂಕಿ ಪಾಲುಗುಳ್ಳ ಈ ಚಿತ್ರದ ಸಹ ನಿರ್ಮಾಪಕರು. ಮೌರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಪ್ರಥಮ್ ಅಭಿನಯಿಸಿದ್ದಾರೆ. ಸೋನಾಲ್ ಮಾಂಟೆರೊ ಈ ಚಿತ್ರದ ನಾಯಕಿ.
ಸ್ಪರ್ಶ ರೇಖಾ, ಕುರಿ ಪ್ರತಾಪ್, ರಾಜಶೇಖರ್, ನವೀನ್, ಚಂದ್ರಕಲಾ ಮೋಹನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮಾಜಿ ಸಚಿವ ಎಚ್.ಎಂ.ರೇವಣ್ಣ ವಿಶೇಷಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿಕ್ರಂಸುಬ್ರಮಣ್ಯ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕೃಷ್ಣಸಾರಥಿ ಅವರ ಛಾಯಾಗ್ರಹಣವಿದೆ. ಕೆ.ಆರ್.ಲಿಂಗರಾಜು ಸಂಕಲನ, ಕಲೈ ನೃತ್ಯ ನಿರ್ದೇಶನ ಹಾಗೂ ದೇವಿಪ್ರಕಾಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

'ಗಲ್ಲಿ ಬೇಕರಿ' ಈ ವಾರ ಬಿಡುಗಡೆ
ಟ್ವಿನ್ ಟವರ್ ಎಂಟರ್‍ಟೈನ್ ಮೆಂಟ್ ಪ್ರೈ. ಲಿ ಲಾಂಛನದಲ್ಲಿ ಎಂ.ಎಂ.ನಿರ್ಮಾಣದ 'ಗಲ್ಲಿ ಬೇಕರಿ' ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿ.ಆರ್.ಕೆ. ರಾಧಾಕೃಷ್ಣನ್ ನಿರ್ದೇಶನದ ಚಿತ್ರದ ಛಾಯಾಗ್ರಹಣ -ರಮೇಶ್ ಕೊಯಿರಾ, ಸಂಗೀತ - ಸುನಾದ್ ಗೌತಮ್, ಚಿತ್ರಕತೆ-ರಾಧಾಕೃಷ್ಣ.ಕೆ, ಸಾಹಸ-ಕೌರವ ವೆಂಕಟೇಶ್, ಕಲೆ-ಬಾಬುಖಾನ್, ನೃತ್ಯ-ಮದನ್ ಹರಿಣಿ, ನಿರ್ವಹಣೆ-ಥಾಮಸ್-ಮೈಸೂರು ಕೃಷ್ಣ, ತಾರಾಗಣದಲ್ಲಿ - ಸಂತೋಷ್‍ಕಿರಣ, ಪ್ರಜ್ವಲ್ ಪೂವಯ್ಯ, ಆರ್ಯನ್, ಉಗ್ರಂ ರೆಡ್ಡಿ, ಸೂರ್ಯ, ರಮೇಶ್ ಭಟ್, ಸುಚೀಂದ್ರ ಪ್ರಸಾದ್, ಯಮುನಾ ಶ್ರೀನಿಧಿ, ಪ್ರದೀಪ್ ಮುಂತಾದವರಿದ್ದಾರೆ.


Click it and Unblock the Notifications











