ಟ್ರೋಲ್ ಪೇಜ್ ಗಳ ಬೆಂಬಲಕ್ಕೆ ನಿಂತ ಜಗ್ಗೇಶ್ ಮತ್ತು ಪ್ರಥಮ್
ಸಿನಿಮಾ ಸ್ಟಾರ್ಸ್ ಗಳ ಫೋಟೋ ಗಳನ್ನ ಬಳಸಿಕೊಂಡು ರಾಜಕೀಯ ವ್ಯಕ್ತಿಗಳನ್ನ ವಿಡಂಬನೆ ಮಾಡೋದು ಸರಿಯಲ್ಲ ಎಂದು ರಾಜ್ಯದ ಪೊಲೀಸರು ಟ್ರೋಲ್ ಪೇಜ್ ಗಳಿಗೆ ಎಚ್ಚರಿಕೆ ನೀಡಿದ್ದರು. ಅತೀ ಹೆಚ್ಚು ಟ್ರೋಲ್ ಆಗಿರುವ ಕಲಾವಿದರು ಪೊಲೀಸರ ಕೆಲಸಕ್ಕೆ ಸಂತಸವನ್ನ ವ್ಯಕ್ತ ಪಡಿಸಿದ್ದರು.
ಟ್ರೋಲ್ ಗಳು ಮಾಡಲಿ ಆದರೆ ಅದಕ್ಕೂ ಇತಿ ಮಿತಿ ಇದ್ದೇ ಇರುತ್ತೆ ಎಂದಿದ್ದರು. ಕಲಾವಿದರಿಗಾಗಿ ತಮ್ಮ ಟ್ಯಾಲೆಂಟ್ ಬಳಸುತ್ತಿದ್ದ ಟ್ರೋಲ್ ಪೇಜ್ ನವರು ನಿಮಗೆ ಪ್ರಚಾರ ಬೇಡವಾದ ಮೇಲೆ ನಮಗ್ಯಾಕೆ ಅನ್ನೋ ನಿರ್ಧಾರಕ್ಕೆ ಬಂದು ಕಲಾವಿದರನ್ನ ಹಾಗೂ ಅವರ ಸಿನಿಮಾಗಳನ್ನ ಪ್ರಮೋಷನ್ ಮಾಡುವುದನ್ನ ನಿಲ್ಲಿಸಿದ್ದಾರೆ. ಈ ಬಗ್ಗೆ ಫಿಲ್ಮೀಬಿಟ್ ನಲ್ಲಿ ವರದಿ ಪ್ರಕಟವಾಗಿತ್ತು. ಇದನ್ನ ನೋಡಿದ ನಟ ಜಗ್ಗೇಶ್ ಹಾಗೂ ಪ್ರಥಮ್ ಟ್ರೋಲ್ ಮಾಡುವವರ ಪರವಾಗಿ ನಿಂತಿದ್ದಾರೆ. ಮುಂದೆ ಓದಿ...

ಪಾಸಿಟಿವ್ ಆಗಿ ಯೋಚಿಸಿ
ಟ್ರೋಲ್ ಪೇಜ್ ಗಳ ಪರವಾಗಿ ನಿಂತಿರುವ ಜಗ್ಗೇಶ್ "ಟ್ರೋಲ್ ಪೇಜ್ ಗಳು ತಮಾಷೆಯಾಗಿ ಸಾಮಾಜಿಕ ಅಂಕುಡೊಂಕು ಎತ್ತಿತೋರಿಸುತ್ತಿದ್ದರು.ಅದನ್ನ ತಪ್ಪು ಎಂದು ಭಾವಿಸುವುದರಲ್ಲಿ ಅರ್ಥವಿಲ್ಲಾ. ಇದರಲ್ಲಿ ಪೋಲಿಸರು ಯಾಕೆ ಮೂಗು ತೂರಿಸಿದರು ಅರ್ಥವಾಗಲಿಲ್ಲಾ. ಕನ್ನಡದ ಟ್ರೋಲ್ ಪೇಜ್ ಮಾತ್ರ ಯಾಕೆ target ಕರ್ನಾಟಕ ಪೋಲಿಸ್. ಇದು ಕೂಡ ಪ್ರಚಾರದ ಅಂಗ" ಎಂದು ಟ್ವೀಟ್ ಮಾಡಿದ್ದಾರೆ

ಪರ ವಿರೋಧಗಳ ಚರ್ಚೆಗೆ ಜಗ್ಗೇಶ್ ಉತ್ತರ
ನವರಸ ನಾಯಕ ಈ ಬಗ್ಗೆ ಟ್ವೀಟ್ ಮಾಡುತ್ತಿದ ಹಾಗೆ ಸಾಕಷ್ಟು ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ. ಅಸಹ್ಯ ಹುಟ್ಟಿಸುವ ಪದಗಳನ್ನ ಬಳಸಿ ಟ್ರೋಲ್ ಮಾಡಿದ್ರೆ ನೋವಾಗುತ್ತೆ, ನಿಮಗೆ ಟ್ರೋಲ್ ಮಾಡಿಲ್ಲ ಅದಕ್ಕೆ ಅವರ ಪರ ನಿಂತಿದ್ದೀರ ? ಈ ರೀತಿಯ ಪ್ರಶ್ನೆಗಳನ್ನ ಜಗ್ಗೇಶ್ ಅವರಿಗೆ ಕೇಳಿದ್ದಾರೆ. ಇದಕ್ಕೆಲ್ಲಾ ಉತ್ತರ ನೀಡಿರುವ ಜಗ್ಗೇಶ್ "ನನ್ನ ಬಗ್ಗೆಯೂ ಟ್ರೋಲ್ ಮಾಡಿದ್ದಾರೆ. ನನ್ನನ್ನು ಬಿಟ್ಟಿಲ್ಲಾ. ನಾನು ಅದನ್ನ positive ಆಗಿ ತೆಗೆದುಕೊಂಡೆ..think and take everything positive life will be beautifull" ಎಂದಿದ್ದಾರೆ.

ಪ್ರಥಮ್ ಟ್ರೋಲ್ ಮಾಡುವವರಿಗೆ ಸಪೋರ್ಟ್
ಟ್ರೋಲ್ ಮಾಡುತ್ತಾ ಸಿನಿಮಾ ಪ್ರಚಾರ ಮಾಡುತ್ತಿದ್ದವರ ಪರವಾಗಿ ನಿಂತಿರುವ ನಟ ಪ್ರಥಮ್ " troll ಗಳ ಮೇಲೆ ಕಡಿವಾಣ ನಿಜಕ್ಕೂ ಬೇಜಾರಾಯ್ತು. troll ಗಳಿಂದ ಆಗಿರುವ ಸಹಾಯಕ್ಕೆ ಒಂದು thanks ಹೇಳಿ ಕೈತೊಳೆದುಕೊಳ್ಳೋಣ ಅಂದ್ರೆ ಯಾಕೋ ಮನಸ್ಸೇ ಒಪ್ಪುತ್ತಿಲ್ಲ. ಎಲ್ಲೋ ಕೆಲವೊಂದು ಸಲ ಮಿತಿ ಮೀರ್ತಾರೆ ಅನ್ನೋದು ಬಿಟ್ಟರೆ ನಮ್ಮನ್ನ ಸಕ್ಕತ್ ಆವರಿಸಿಕೊಂಡು ಬಿಟ್ಟಿದ್ರು" - ಪ್ರಥಮ್, ನಟ

ನಿಮ್ಗೂ ಸ್ವಾತಂತ್ರ್ಯವಿದೆ. ನಿಮ್ಮೊಟ್ಟಿಗೆ ನಾವಿದ್ದೇವೆ
"ಒಂತರಾ "irritating cute ತರ್ಲೆಗಳು" ತಮ್ಮ ಕೆಲಸಗಳ ಮಧ್ಯೆ ಫ್ರೀ ಮಾಡ್ಕೊಂಡು ಬೇರೆಯವರ (ನನ್ನನ್ನೂ ಸೇರಿ) ಕಾಲು ಎಳೆಯುತಾ ಮಜಾ ಮಾಡ್ಕೊಂಡಿದ್ರು... ನಾನು ಗೆಲ್ಲೋಕೆ ಇವ್ರು ಬೇಕು...ಇವಾಗ ಬೇಡ ಅಂದ್ರೆ ಹೇಗೆ? I stand with trolls...ನಿಮ್ಗೂ ಸ್ವಾತಂತ್ರ್ಯವಿದೆ. ನಿಮ್ಮೊಟ್ಟಿಗೆ ನಾವಿದ್ದೇವೆ. ಅತಿ ಮಾಡದೇ ಮಿತಿಯಾಗಿ ಮಜಾ ಮಾಡಿ" ಎಂದು ಪ್ರಥಮ್ ಟ್ರೋಲ್ ಪೇಜ್ ನವರಿಗೆ ಸಲಹೆ ನೀಡಿದ್ದಾರೆ.

ಫೇಸ್ ಬುಕ್ ನಲ್ಲಿ ಕಾಣುತ್ತಿಲ್ಲ ಟ್ರೋಲ್
ಇನ್ನು ಫೇಸ್ ಬುಕ್ ನಲ್ಲಿ ಹಿಂದಿನಂತೆ ಟ್ರೋಲ್ ಪೇಜ್ ಗಳ ಪೋಸ್ಟ್ ಗಳು ಕಾಣುತ್ತಿಲ್ಲ. ಕೆಲ ಪೇಜ್ ಗಳು ಅನ್ಯ ಭಾಷೆ ಪ್ರಚಾರ ಮಾಡುತ್ತಿದ್ದರೆ ಇನ್ನು ಕೆಲವು ಯಾವುದೇ ಟ್ರೋಲ್ ಮಾಡದೇ ಸೈಲೆಂಟ್ ಆಗಿದ್ದಾರೆ. ಈ ಮುಸುಕಿನ ಗುದ್ದಾಟ ಎಷ್ಟು ದಿನ ನಡೆಯುತ್ತದೆ ಅನ್ನೋದನ್ನ ಕಾದು ನೋಡ್ಬೇಕು.


Click it and Unblock the Notifications











