»   » ಬಾಲಿವುಡ್ ನಟಿ ಬಿದಿಶಾ ನಿಗೂಢ ಸಾವು

ಬಾಲಿವುಡ್ ನಟಿ ಬಿದಿಶಾ ನಿಗೂಢ ಸಾವು

Posted By:
Subscribe to Filmibeat Kannada

ಅಸ್ಸಾಂ ಮೂಲದ ನಟಿ ಹಾಗೂ ಗಾಯಕಿ 'ಬಿದಿಶಾ' (Bidisha Bezbaruah) ದೆಹಲಿಯ ಗುರುಗ್ರಾಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 30 ವರ್ಷ ನಟಿ ಕಿರುತೆರೆಯ ಹಲವು ಕಾರ್ಯಕ್ರಮಗಳ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಇತ್ತೀಚೆಗಷ್ಟೇ ಮುಂಬೈನಿಂದ ದೆಹಲಿಗೆ ಸ್ಥಳಾಂತರವಾಗಿದ್ದ ನಟಿ ಈಗ ಅನುಮಾನಸ್ಪದವಾಗಿ ಸಾವುಗೀಡಾಗಿದ್ದಾರೆ.

ಅಸ್ಸಾಂನಲ್ಲಿದ್ದ ಬಿದಿಶಾ ಅವರ ತಂದೆ ಮಗಳ ಫೋನ್‌ ಸ್ವೀಕರಿಸುತ್ತಿಲ್ಲ ಎಂದು ಇಲ್ಲಿನ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೇ, ವಿಚಾರಣೆಗೆಂದು ಆಕೆಯ ಮನೆ ವಿಳಾಸವನ್ನು ಪೊಲೀಸರಿಗೆ ಬಿದಿಶಾರ ತಂದೆ ನೀಡಿದ್ದರು. ಅಂತೆಯೇ ಪೊಲೀಸರು ಮನೆಗೆ ಬಂದು ನೋಡಿದಾಗ ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಬಿದಿಶಾ ಶವ ಪತ್ತೆಯಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

Jagga Jasoos Actress Bidisha Bezbaruah commits suicide

ನಟಿಯ ಸಾವಿಗೆ ನಿಖರವಾದ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ, ಬಿದಿಶಾಳ ವೈವಾಹಿಕ ಜೀವನದಲ್ಲಿ ಸಮಸ್ಯೆ ಇತ್ತು. ಪ್ರೀತಿಸಿ ಮದುವೆಯಾಗಿದ್ದಳು. ಪತಿಯೊಡನೆ ಮನಸ್ತಾಪ ಹೊಂದಿದ್ದರು. ಅದರಿಂದ ಮನನೊಂದು ಆಕೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇತ್ತೀಚೆಗೆ ರಣ್ಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಅಭಿನಯದ 'ಜಗ್ಗ ಜಗ್ಗೂಸ್' ಚಿತ್ರದಲ್ಲೂ ಬಿದಿಶಾ ಅಭಿನಯಿಸಿದ್ದರು. ಸದ್ಯ, ಬಿದಿಶಾ ಅವರ ತಂದೆ ಹೇಳಿಕೆ ಪಡೆದಿರುವ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.

ಕೊಳೆತ ಶವವಾಗಿ ಪತ್ತೆಯಾದ ಬಾಲಿವುಡ್ ನಟಿ

English summary
Jagga Jasoos actress suicide: "Bidisha Bezbaruah was found hanging from a ceiling fan in her rented accommodation which she had taken recently," Deputy Commissioner of Police (East) Deepak Saharan said

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada