twitter
    For Quick Alerts
    ALLOW NOTIFICATIONS  
    For Daily Alerts

    ಶಿವಣ್ಣ ಬಗ್ಗೆ ಪುನೀತ್‌ಗೆ ಎರಡು ತಿಂಗಳ ಹಿಂದೆ ಸಲಹೆ ನೀಡಿದ್ದರು ಜಗ್ಗೇಶ್

    |

    ನಿನ್ನೆಯಷ್ಟೆ ಶಿವರಾಜ್ ಕುಮಾರ್ ನಿವಾಸದಲ್ಲಿ ಚಂದನವನದ ಸ್ಟಾರ್ ನಟರೆಲ್ಲಾ ಸೇರಿ ಚಿತ್ರೋದ್ಯಮದ ಭವಿಷ್ಯದ ಕುರಿತು ಮಹತ್ವದ ಸಭೆ ನಡೆಸಿದರು.

    Recommended Video

    ಡಿಬಾಸ್ ದರ್ಶನ್ ಮುಂದಿನ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ | Filmibeat Kannada

    ರವಿಚಂದ್ರನ್, ರಮೇಶ್ ಅರವಿಂದ್ ಆದಿಯಾಗಿ ಯಶ್, ದುನಿಯಾ ವಿಜಯ್, ಗಣೇಶ್ ಇನ್ನೂ ಹತ್ತು ಹಲವು ಸ್ಟಾರ್ ನಟರು ಸಭೆಯಲ್ಲಿದ್ದರು. ಆದರೆ ಸಭೆಯಲ್ಲಿ ಮೂವರು ಪ್ರಮುಖ ಗೈರುಹಾಜರಿ ಎದ್ದು ಕಾಣುತ್ತಿತ್ತು. ಅದುವೇ ನಟ ಜಗ್ಗೇಶ್, ಸುದೀಪ್ ಮತ್ತು ದರ್ಶನ್.

    ಸುದೀಪ್ ಹಾಗೂ ದರ್ಶನ್ ವಿಷಯಗೊತ್ತಿಲ್ಲವಾದರೂ ನಟ ಜಗ್ಗೇಶ್ ಅವರು ತಾವೇಕೆ ಸಭೆಗೆ ಬರಲಿಲ್ಲವೆಂಬುದರ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಎರಡು ತಿಂಗಳ ಹಿಂದೆ ಇದೇ ವಿಷಯವಾಗಿ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಿದ್ದ ಸಲಹೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

    ಎರಡು ತಿಂಗಳ ಹಿಂದೆ ಸಲಹೆ ನೀಡಿದ್ದರು

    ಎರಡು ತಿಂಗಳ ಹಿಂದೆ ಸಲಹೆ ನೀಡಿದ್ದರು

    ಎರಡು ತಿಂಗಳ ಹಿಂದೆ ಶಿವರಾಜ್ ಕುಮಾರ್ ಸಹೋದರ ಪುನೀತ್ ರಾಜ್‌ಕುಮಾರ್ ಜಗ್ಗೇಶ್ ಅವರಿಗೆ ಕರೆ ಮಾಡಿ ಮಾತನಾಡಿದ್ದರಂತೆ. 'ಶಿವಣ್ಣ ಅವರು ಚಿತ್ರರಂಗದ ಜವಾಬ್ದಾರಿ ಹೊರುವಂತೆ ಹೇಳಿ' ಎಂದು ಅಂದೇ ಸಲಹೆ ನೀಡಿದ್ದರಂತೆ ಜಗ್ಗೇಶ್.

    ರಾಜಣ್ಣ ಇದ್ದಾರೆ ಜವಾಬ್ದಾರಿ ಹೊತ್ತಿದ್ದರು: ಜಗ್ಗೇಶ್

    ರಾಜಣ್ಣ ಇದ್ದಾರೆ ಜವಾಬ್ದಾರಿ ಹೊತ್ತಿದ್ದರು: ಜಗ್ಗೇಶ್

    ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, 'ತಿಂಗಳ ಹಿಂದೆ ಪುನೀತ್ ಕರೆಮಾಡಿದಾಗ, ರಾಜಣ್ಣ ಇದ್ದಾಗ ಚಿತ್ರರಂಗದ ಜವಾಬ್ದಾರಿ ಹೊತ್ತಿದ್ದರು, ಇನ್ನುಮುಂದೆ ಶಿವಣ್ಣ ಆ ಕಾರ್ಯ ಮಾಡಲು ಹೇಳಿ ಎಂದು ಸಲಹೆ ನೀಡಿದ್ದೆ, ಇಂದು ಶಿವಣ್ಣ ಆ ಕಾರ್ಯ ಮಾಡುತ್ತಿದ್ದಾರೆ ಸ್ವಾಗತಾರ್ಹ' ಎಂದಿದ್ದಾರೆ.

    ನಾವೆಲ್ಲರೂ ಭುಜಬಲವಾಗಿ ನಿಲ್ಲುತ್ತೇವೆ: ಜಗ್ಗೇಶ್

    ನಾವೆಲ್ಲರೂ ಭುಜಬಲವಾಗಿ ನಿಲ್ಲುತ್ತೇವೆ: ಜಗ್ಗೇಶ್

    ತಮ್ಮ ಆತ್ಮೀಯ ಗೆಳೆಯ ಶಿವರಾಜ್ ಕುಮಾರ್ ಅವರ ಪರ ನಾನಿದ್ದೇನೆ ಎಂಬುದನ್ನು ಒತ್ತಿ ಹೇಳಿರುವ ಜಗ್ಗೇಶ್, 'ಆತನ ಉತ್ಸಾಹಕ್ಕೆ ನಾವೆಲ್ಲರು ಭುಜಬಲವಾಗಿ ನಿಲ್ಲುತ್ತೇವೆ' ಎಂದಿದ್ದಾರೆ.

    ಗೈರಾಗಿದ್ದಕ್ಕೆ ಕಾರಣ ನೀಡಿದ ಜಗ್ಗೇಶ್

    ಗೈರಾಗಿದ್ದಕ್ಕೆ ಕಾರಣ ನೀಡಿದ ಜಗ್ಗೇಶ್

    ತಾವು ಸಭೆಗೆ ಗೈರಾಗಿದ್ದಕ್ಕೆ ಕಾರಣ ನೀಡಿರುವ ಜಗ್ಗೇಶ್, ಕೊರೊನಾ ಇರುವ ಕಾರಣದಿಂದ ತಾವು ಸಭೆಗೆ ಹಾಜರಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು. 'ಈ ದರಿದ್ರ ಕೊರೋನ ಹೆದರಿಸುತ್ತಿದೆ! ನನಗೆ 57 ಸ್ವಲ್ಪ ಜಾಗೃತವಾಗಿರುವೆ' ಎಂದಿದ್ದಾರೆ.

    English summary
    Jaggesh adviced Puneeth Rajkumar about Shiva Rajkumar to take leadership of sandalwood.
    Thursday, July 30, 2020, 20:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X