twitter
    For Quick Alerts
    ALLOW NOTIFICATIONS  
    For Daily Alerts

    ಹೈದ್ರಾಬಾದ್ ಯುವತಿ ಅತ್ಯಾಚಾರ:: ಮರುಗಿದ ಜಗ್ಗೇಶ್, ಹೆಣ್ಣು ಕುಲಕ್ಕೊಂದು ಸಲಹೆ

    |

    Recommended Video

    Jaggesh reacts on Vet Doctor's heartbreaking case | Oneindia Kannada

    ಪಶು ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. 26 ವರ್ಷದ ಯುವತಿ ಕ್ಲೀನಿಕ್ ನಲ್ಲಿ ಕೆಲಸ ಮುಗಿಸಿ, ಮನೆಗೆ ವಾಪಸ್ ಬರುತ್ತಿದ್ದ ಸಮಯದಲ್ಲಿ ದುಷ್ಕರ್ಮಿಗಳು ಆಕೆಯನ್ನು ಬಲತ್ಕಾರ ಮಾಡಿ, ಜೀವಂತವಾಗಿ ಸುಟ್ಟು ಹಾಕಿದ್ದಾರೆ.

    ಪಶು ವೈದ್ಯೆ ಸಾವಿಗೆ ಕಾರಣವಾದ ನಾಲ್ಕು ಜನ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಖಂಡಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆರೋಪಿಗಳಿಗೆ ಸಾಮಾನ್ಯವಾಗಿ ಶಿಕ್ಷೆ ವಿಧಿಸಿದರೆ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿರುತ್ತೆ. ಹಾಗಾಗಿ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ.

    ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಹತ್ಯೆ: ಆ ಕರಾಳ ರಾತ್ರಿ ನಡೆದಿದ್ದೇನು?

    ಇದೀಗ, ಪಶು ವೈದ್ಯೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಟ್ವೀಟ್ ಮಾಡಿದ್ದು, ಹೆಣ್ಣು ಕುಲಕ್ಕೆ ರಕ್ಷಣೆ ಇಲ್ಲ ಎಂದು ಕಿಡಿಕಾರಿದ್ದಾರೆ. ಜಗ್ಗೇಶ್ ಏನಂದ್ರು ಮುಂದೆ ಓದಿ...

    ಗಲ್ಲು ಶಿಕ್ಷೆ ಒಂದೇ ಪರಿಹಾರ

    ಗಲ್ಲು ಶಿಕ್ಷೆ ಒಂದೇ ಪರಿಹಾರ

    ನಮ್ಮ ದೇಶದ ಕಾನೂನಿನಲ್ಲಿ ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆ ಇಲ್ಲ. ಭಯ ಪಡಿಸುವ ಶಿಕ್ಷೆ ನೀಡಿದ್ರೆ ಇಂತಹ ಘಟನೆಗಳು ಮರುಕಳಿಸಲ್ಲ. ಇದಕ್ಕೆಲ್ಲಾ ಮರಣ ದಂಡನೆ ಮಾತ್ರ ಸೂಕ್ತ ಪರಿಹಾರ ಎಂದು ಜನಸಾಮಾನ್ಯರು ಅಭಿಪ್ರಾಯಪಡುತ್ತಿದ್ದಾರೆ. ಇದೀಗ, ಇದೇ ಅಂಶವನ್ನ ನಟ ಜಗ್ಗೇಶ್ ಕೂಡ ಎತ್ತಿಹಿಡಿದಿದ್ದಾರೆ. ''ಎಂದು ನಮ್ಮ ದೇಶದಲ್ಲಿ ಇಂಥ ಹೇಯಕೃತ್ಯದ ರಾಕ್ಷಸರಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ಬರುತ್ತದೋ ಅಲ್ಲಿಯವರೆಗು ಇಂಥ ಕೃತ್ಯ ತಡೆಯಲಾಗದು!'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಹೆಣ್ಣು ಕುಲಕ್ಕೆ ಜಗ್ಗೇಶ್ ಸಲಹೆ

    ಹೆಣ್ಣು ಕುಲಕ್ಕೆ ಜಗ್ಗೇಶ್ ಸಲಹೆ

    ಇಂತಹ ಘಟನೆಗಳನ್ನು ಗಮನಿಸಿದಾಗ, ಹೆಣ್ಣು ಕುಲಕ್ಕೆ ಸುರಕ್ಷತೆ ಎಲ್ಲಿದೆ ಎಂಬ ಪ್ರಶ್ನೆ ಈಗ ಉದ್ಬವವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಗ್ಗೇಶ್ ಕೂಡ ಮಾತನಾಡಿದ್ದಾರೆ. "ಹೆಣ್ಣು ಕುಲವೆ ಸಾರ್ವಜನಿಕವಾಗಿ ಒಬ್ಬಂಟಿ ಪ್ರಯಾಣ ಕ್ಷೇಮವಲ್ಲಾ ಕಂದಮ್ಮಗಳೆ ಎಚ್ಚರ" ಸಾಧ್ಯವಾದಷ್ಟು ನಿರ್ಜನ ಪ್ರದೇಶದಲ್ಲಿ ಒಂಟಿ ಸಂಚಾರ ಮಾಡದಿರಿ! ನಿಮ್ಮ ರಕ್ಷಣೆಗೆ ಆಧುನಿಕ ಅವಿಷ್ಕಾರ ಬಳಸಿ! ಹರಿಓಂ.'' ಎಂದಿದ್ದಾರೆ.

    ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಹತ್ಯೆ: ಆ ಕರಾಳ ರಾತ್ರಿ ನಡೆದಿದ್ದೇನು?

    ಅಕ್ಷಯ್ ಕುಮಾರ್ ಟ್ವೀಟ್

    ಅಕ್ಷಯ್ ಕುಮಾರ್ ಟ್ವೀಟ್

    ''ಹೈದರಾಬಾದ್ನಲ್ಲಿ ಪ್ರಿಯಾಂಕಾ, ತಮಿಳುನಾಡಿನಲ್ಲಿ ರೋಜಾ, ರಾಂಚಿಯಲ್ಲಿ ಲಾ ವಿದ್ಯಾರ್ಥಿ ಪ್ರಕರಣಗಳನ್ನು ನೋಡುತ್ತಿದ್ದರೆ ಇದು ಸಮಾಜನಾ ಎಂಬ ಅನುಮಾನ? ನಿರ್ಭಯಾ ಪ್ರಕರಣ ನಡೆದು ಏಳು ವರ್ಷ ಆಗಿದೆ. ಆದರೂ ಇಂತಹ ಪ್ರಕರಣಗಳು ನಡೆಯುತ್ತಲೇ ಇದೆ. ಕಠಿಣವಾದ ಕ್ರಮ ಜಾರಿಯಾಗಬೇಕು'' ಎಂದು ಅಕ್ಷಯ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

    ವರುಣ್ ತೇಜ ಬೇಸರ

    ವರುಣ್ ತೇಜ ಬೇಸರ

    ''ಡಾ ಪ್ರಿಯಾಂಕಾ ಅವರ ಸಾವಿನ ಸುದ್ದಿ ಕೇಳಿ ನಿಜಕ್ಕೂ ಬೇಸರವಾಗಿದೆ. ಈ ಅತ್ಯಾಚಾರಿಗಳಿ ಕಾನೂನು ಬಲವಾದ ಶಿಕ್ಷೆ ನೀಡುತ್ತೆ ಎಂಬ ಭರವಸೆ ಇದೆ. ಭವಿಷ್ಯದಲ್ಲೂ ಇಂತಹ ಪ್ರಕರಣಗಳು ನಡೆಯದಂತೆ ಕಠಿಣ ಕ್ರಮ ಜಾರಿಯಾಗಬೇಕು'' ಎಂದು ಮೆಗಾ ಹೀರೋ ವರುಣ್ ತೇಜ ಟ್ವೀಟ್ ಮಾಡಿದ್ದಾರೆ.

    English summary
    Kannada actor Jaggesh, Hindi actor Akshay Kumar and some of the celebrities are react about priyanka reddy rape and murder incident.
    Monday, December 2, 2019, 13:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X