For Quick Alerts
  ALLOW NOTIFICATIONS  
  For Daily Alerts

  'ತೋತಾಪುರಿ' ಚಿತ್ರೀಕರಣ ಆರಂಭಿಸಿದ ಜಗ್ಗೇಶ್-ಅದಿತಿ ಪ್ರಭುದೇವ

  |

  ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ನಟಿಸಿರುವ ಪೆಟ್ರೋಮ್ಯಾಕ್ಸ್ ಚಿತ್ರೀಕರಣ ಮುಗಿಸಿದ ನಿರ್ದೇಶಕ ವಿಜಯ್ ಪ್ರಸಾದ್ ಈಗ ಮತ್ತೊಂದು ಚಿತ್ರದ ಕೆಲಸ ಪ್ರಾರಂಭಿಸಿದ್ದಾರೆ.

  ನವರಸ ನಾಯಕ ಜಗ್ಗೇಶ್ ನಟನೆಯಲ್ಲಿ ತಯಾರಾಗುತ್ತಿರುವ ತೋತಾಪುರಿ ಸಿನಿಮಾದ ಮತ್ತೆ ಶೂಟಿಂಗ್ ಆರಂಭಿಸಿದೆ. ಸೋಮವಾರದಿಂದ ಮೈಸೂರಿನಲ್ಲಿ ತೋತಾಪುರಿ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ.

  ಹಣೆ ಬರಹ ಚೆನ್ನಾಗಿದ್ದು ಚಪ್ಪಾಳೆ ಬೀಳುವವರೆಗು ಮಾತ್ರ ಕಲಾವಿದ ಕೈಲಾಸದಲ್ಲಿರುತ್ತಾನೆ; ನಟ ಜಗ್ಗೇಶ್

  ಲಾಕ್‌ಡೌನ್‌ ಆದ್ಮೇಲೆ ನಟ ಜಗ್ಗೇಶ್ ಶೂಟಿಂಗ್ ಮಾಡುತ್ತಿರುವ ಮೊದಲ ಚಿತ್ರ ಇದಾಗಿದೆ. ಇದಕ್ಕೂ ಮುಂಚೆ ವಿಜಯ್ ಪ್ರಸಾದ್ ಜೊತೆ ನೀರ್‌ದೋಸೆ ಸಿನಿಮಾ ಮಾಡಿದ್ದರು ಜಗ್ಗೇಶ್. ತೋತಾಪುರಿ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಮೊದಲ ಸಲ ಜಗ್ಗೇಶ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

  ಕೆಎ ಸುರೇಶ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಎರಡು ಭಾಗಗಳಲ್ಲಿ ಸಿನಿಮಾ ಮೂಡಿಬರಲಿದೆ ಎಂದು ಹೇಳಲಾಗಿದೆ. ಈಗಾಗಲೇ ಚಿತ್ರದ 80 ರಷ್ಟು ಭಾಗ ಶೂಟಿಂಗ್ ಮುಗಿದಿದೆ. ಉಳಿದ ಚಿತ್ರೀಕರಣಕ್ಕೆ ಮರು ಚಾಲನೆ ಸಿಕ್ಕಿದೆ.

  ಅಂದ್ಹಾಗೆ, ತೋತಾಪುರಿ ಸಿನಿಮಾದಲ್ಲಿ ಜಗ್ಗೇಶ್ ರೈತನ ಪಾತ್ರದಲ್ಲಿ ನಟಿಸಿದ್ದು, ಅದಿತಿ ಪ್ರಭುದೇವ ಮುಸ್ಲಿಂ ಯುವತಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಧನಂಜಯ್ ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸುಮನ ರಂಗನಾಥ್ ಸಹ ಪ್ರಧಾನ ಪಾತ್ರದಲ್ಲಿ ಇರಲಿದ್ದಾರೆ.

  ನನ್ನ ಸತ್ಯದ ಸೊಲ್ಲು ಅಡಗಿಸಲು ಅಪಪ್ರಚಾರ ತಂತ್ರರೂಪಿಸಿದರು- ಜಗ್ಗೇಶ್ ಬೇಸರ

  ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದ್ದು, ತೋತಾಪುರಿ ಸಿನಿಮಾ ಮುಗಿಯುತ್ತಿದ್ದಂತೆ ಮಠ ಗುರುಪ್ರಸಾದ್ ನಿರ್ದೇಶನದ ರಂಗನಾಯಕ ಚಿತ್ರೀಕರಣ ಆರಂಭಿಸಲಿದ್ದಾರೆ ಜಗ್ಗೇಶ್.

  ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಅಖಿಲಾ ಪಜಿಮಣ್ಣು | Akhila Pajimannu
  English summary
  Kannada Actor Jaggesh and aditi prabhudeva resume shoot for Vijaya Prasad’s Totapuri in Mysore. This is Navarasa Nayaka's first film to resume after the lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X