For Quick Alerts
  ALLOW NOTIFICATIONS  
  For Daily Alerts

  'ತೋತಾಪುರಿ' ತಿನ್ನಿಸಲು ರೆಡಿಯಾದ್ರು ಜಗ್ಗೇಶ್, ಅದಿತಿ ಪ್ರಭುದೇವ!

  |

  'ನೀರ್ ದೋಸೆ' ಜೋಡಿ ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ ಪ್ರಸಾದ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಬರ್ತಿದೆ. ಅದುವೇ 'ತೋತಾಪುರಿ'. ಈಗಾಗಲೇ 'ನೀರ್ ದೋಸೆ' ಮೂಲಕ ಈ ಜೋಡಿ ದೊಡ್ಡ ದಾಖಲೆ ಬರೆದಿದೆ. ಇದೇ ಜೋಡಿ 'ತೋತಾಪುರಿ' ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಲು ಸಿದ್ಧವಾಗಿದೆ. ತೋತಾಪುರಿ ಚಿತ್ರದ ಬಗ್ಗೆ ಅಪ್ಟೇಡ್‌ಗಾಗಿ ಕಾಯ್ತಾ ಇರುವವರಿಗೆ ಚಿತ್ರ ತಂಡ ಹೊಸ ಮಾಹಿತಿ ನೀಡಿದೆ.

  Navarasa Nayaka Jaggesh complete cine and political history.

  'ತೋತಾಪುರಿ' ಆಡಿಯೋ ಟೀಸರ್ ರಿಲೀಸ್‌ ಮಾಡಲು ಚಿತ್ರ ತಂಡ ಯೋಜನೆ ರೂಪಿಸಿದೆ. ಇದೇ ಜನವರಿ 24ರಂದು ಆಡಿಯೋ ಟೀಸರ್ ಮೂಲಕ ಎದುರುಗೊಳ್ಳಲು ಸಜ್ಜಾಗಿದೆ.

  ಪ್ರಾರಂಭದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿದೆ 'ತೋತಾಪುರಿ'. ಈ ಚಿತ್ರ ಚಿತ್ರರಂಗದಲ್ಲೂ, ಪ್ರೇಕ್ಷಕ ಬಳಗದಲ್ಲೂ ನಿರೀಕ್ಷೆ ಗರಿಗೆದರುವಂತೆ ಮಾಡಿದೆ. ಇದೇ ಮಾದಲ ಬಾರಿಗೆ ಕನ್ನಡ ಕಾಮಿಡಿ ಸಿನಿಮಾವೊಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ.

  ಇನ್ನು ತಾರಾಗಣದ ವಿಚಾರಕ್ಕೆ ಬಂದರೆ 'ತೋತಾಪುರಿ' ಚಿತ್ರದಲ್ಲಿ, ನವರಸ ನಾಯಕ ಜಗ್ಗೇಶ್ ಅವರ ಜೊತೆಗೆ ಡಾಲಿ ಧನಂಜಯ್, ಸುಮನ್ ರಂಗನಾಥ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್, ರೋಹಿತ್ ಪದಕಿ ಸೇರಿದಂತೆ ನೂರಾರು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಕೆ.ಎ.ಸುರೇಶ್ 'ಮೋನಿಫ್ಲಿಕ್ಸ್ ಸ್ಟುಡಿಯೋಸ್' ಬ್ಯಾನರ್ ಅಡಿಯಲ್ಲಿ 'ತೋತಾಪುರಿ' ಚಿತ್ರವನ್ನು ನಿರ್ಮಾಣ ಮಾಡಲಾಗಿದೆ.

  Jaggesh And Aditi Prabhudeva Starrer Totapuri Audio teaser Will Be Out On January 24th

  'ತೋತಾಪುರಿ' ಸಿನಿಮಾ 2 ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ಈ ಚಿತ್ರದ ಹಾಡುಗಳಿಗೆ ವಿಜಯಪ್ರಸಾದ್ ಸಾಹಿತ್ಯವಿದೆ. ನಿರಂಜನ್ ಬಾಬು ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ.

  English summary
  Jaggesh Starrer Totapuri Audio teaser Will Be Out On January 24th, Know More Updates

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion