For Quick Alerts
  ALLOW NOTIFICATIONS  
  For Daily Alerts

  ವಿವಾದದ ಬಳಿಕ ಮೊದಲ ಬಾರಿಗೆ ಒಟ್ಟಿಗೆ ಕಾಣಿಕೊಂಡ ಜಗ್ಗೇಶ್-ದರ್ಶನ್!

  |

  ಕನ್ನಡದ ಹಿರಿಯ ನಟ ಜಗ್ಗೇಶ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಈ ಹಿಂದೆ ವಿವಾದ ಸೃಷ್ಟಿ ಆಗಿತ್ತು. ಆ ವಿವಾದ ದೊಡ್ಡ ಮಟ್ಟಕ್ಕೆ ತಲುಪಿತ್ತು. ಮೈಸೂರಿನಲ್ಲಿ ಜಗ್ಗೇಶ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ, ಸ್ಥಳಕ್ಕೆ ಕೆಲವು ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ಜಗ್ಗೇಶ್ ಅವರ ವಿರುದ್ಧ ಧಿಕ್ಕಾರ ಕೂಗಿದ್ದರು.

  ದರ್ಶನ್ ಅಭಿಮಾನಿಗಳು ಈ ರೀತಿ ಮುತ್ತಿಗೆ ಹಾಕಲು ನಟ ಜಗ್ಗೇಶ್ ಅವರು ಮಾತನಾಡಿದ ಆಡಿಯೋ ಒಂದು ಕಾರಣ ಆಗಿತ್ತು. ಹಾಗಾಗಿ ''ದರ್ಶನ್ ಅವರ ಬಗ್ಗೆ ನೀವು ಮಾತನಾಡಿದ್ದು ಸರಿಯಿಲ್ಲ, ನೀವು ಫ್ಯಾನ್ಸ್ ಬಳಿ ಕ್ಷಮೆ ಕೇಳಿ'' ಎಂದು ದರ್ಶನ್ ಅಭಿಮಾನಿಗಳು ಜಗ್ಗೇಶ್‌ ಅವರನ್ನು ಮುತ್ತಿಕೊಂಡಿದ್ದರು.

  ಈ ಘಟನೆಯಿಂದ ನಟ ಜಗ್ಗೇಶ್ ಮನನೊಂದಿದ್ದರು. ಟ್ವಿಟ್ಟರ್ ಮೂಲಕ ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದರು. ಈಗ ವಿಚಾರದ ಬಗ್ಗೆ ಹೇಳಲು ಕಾರಣ ಇವರಿಬ್ಬರು ವಿವಾದದ ಬಳಿಕ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿರುವುದು.

  ಒಂದೇ ಸೀಟಿನಲ್ಲಿ ಪಕ್ಕ-ಪಕ್ಕ ಕೂತ ದರ್ಶನ್-ಜಗ್ಗೇಶ್!

  ಒಂದೇ ಸೀಟಿನಲ್ಲಿ ಪಕ್ಕ-ಪಕ್ಕ ಕೂತ ದರ್ಶನ್-ಜಗ್ಗೇಶ್!

  ಆಡಿಯೋ ವಿವಾದದ ಬಳಿಕ ನಟ ಜಗ್ಗೇಶ್ ಮತ್ತು ದರ್ಶನ್‌ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪುನೀತ್‌ ನಮನ ಕಾರ್ಯಕ್ರಮಕ್ಕೆ ಇಬ್ಬರು ಆಗಮಿಸಿದ್ದಾರೆ. ಈ ವೇಳೆ ಜಗ್ಗೇಶ್ ಮತ್ತು ದರ್ಶನ್‌ ಒಟ್ಟಿಗೆ ಕಾಣಿಸಿಕೊಳ್ಳುವುದರ ಜೊತೆಗೆ, ಒಂದೇ ಸೀಟಿನಲ್ಲಿ ಪಕ್ಕ ಪಕ್ಕದಲ್ಲಿ ಕುಳಿತು ಕೊಂಡಿದ್ದಾರೆ.

  ನಟ ಜಗ್ಗೇಶ್ ಪುನೀತ್‌ ನಮನ ಕಾರ್ಯಕ್ರಮದ ಸಮಯದಲ್ಲಿ ರೆಕಾರ್ಡ್ ಮಾಡಿದ ಒಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಲದಲ್ಲಿ ಜಗ್ಗೇಶ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ದರ್ಶನ್‌ ಮತ್ತು ಜಗ್ಗೇಶ್ ಒಟ್ಟಿ ಕುಳಿತಿರುವುದು ಕಂಡು ಬಂದಿದೆ.

  ಮುನಿಸು ಮರೆತ ಜಗ್ಗೇಶ್- ದರ್ಶನ್!

  ಮುನಿಸು ಮರೆತ ಜಗ್ಗೇಶ್- ದರ್ಶನ್!

  ಇಬ್ಬರು ಹೀಗೆ ಒಟ್ಟಿಗೆ ಇರುವು ನೋಡಿದರೆ ಮನಸ್ಸಿನಲ್ಲಿ ಯಾವುದೆ ರಾಗ-ದ್ವೇಷ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಸದ್ಯ ಕನ್ನಡ ಚಿತ್ರರಂಗದ ಕಲಾವಿದರು ಒಗ್ಗಟ್ಟಾಗಿ ಚಿತ್ರರಂಗದ ಏಳಿಗೆಗೆ ದುಡಿಯುವುದು ಮುಖ್ಯವಾಗಿದೆ. ಆದರೆ ಆಗಾಗ ಒಂದಷ್ಟು ವಿವಾದಗಳು ತೆಲೆ ಎತ್ತುತ್ತವೆ. ವಿವಾದಗಳು ಬಂದರೂ, ಹೋದರೂ ಕಲಾವಿದರ ಬದುಕು ಮಾರ್ಗದರ್ಶನ ಆಗುವುದು ಮುಖ್ಯ ಆಗುತ್ತದೆ.

  ವಿವಾದದ ಬಗ್ಗೆ ಮನನೊಂದಿದ್ದ ಜಗ್ಗೇಶ್!

  ವಿವಾದದ ಬಗ್ಗೆ ಮನನೊಂದಿದ್ದ ಜಗ್ಗೇಶ್!

  ದರ್ಶನ್‌ ವಿಚಾರದಲ್ಲಿ ನಡೆದ ಈ ಘಟನೆಯಿಂದ ಜಗ್ಗೇಶ್ ತೀವ್ರ ಬೇಸರಗೊಂಡಿದ್ದರು. ''ಆತ್ಮೀಯರೆ ನನಗೆ ನೀವು ನಿಮಗೆ ನಾನು ಇನ್ನು ಮುಂದೆ, ಇನ್ನು ಮುಂದೆ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ದೊಡ್ಡವರು ಬದುಕಿದಾಗಲೇ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ರಂಗ'' ಎಂದು ಟ್ವೀಟ್ ಮಾಡಿದ್ದರು.

  ಸೀನಿಯರ್​ಗಳು ಯಾವಾಗಲೂ ಮುಂದಿರಬೇಕು ಎಂದಿದ್ದ ನಟ ದರ್ಶನ್!

  ಸೀನಿಯರ್​ಗಳು ಯಾವಾಗಲೂ ಮುಂದಿರಬೇಕು ಎಂದಿದ್ದ ನಟ ದರ್ಶನ್!

  ಈ ವಿವಾದಕ್ಕೆ ನಟ ದರ್ಶನ್‌ ತೆರೆ ಎಳೆದಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದರು. "ಸೀನಿಯರ್​ಗಳು ಯಾವಾಗಲೂ ಮುಂದಿರಬೇಕು. ಕಿರಿಯರು ಹಿಂದಿರಬೇಕು. ಸೀನಿಯರ್​ಗಳು ನಮ್ಮ ಬಗ್ಗೆ ಮಾತನಾಡದೆ ಇನ್ಯಾರ ಬಗ್ಗೆ ಮಾತನಾಡಲು ಸಾಧ್ಯ. ನನ್ನ ಅಭಿಮಾನಿ ಸೆಲೆಬ್ರಿಟಿಗಳಿಂದ ಬೇಸರ ಆಗಿದ್ದರೆ ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ" ಎಂದಿದ್ದರು ನಟ ದರ್ಶನ್. ದರ್ಶನ್‌ ಈ ಹೇಳಿಕೆಯಿಂದ ವಿವಾದ ತಣ್ಣಗೆ ಆಗಿತ್ತು. ಅತ್ತ ಜಗ್ಗೇಶ್ ಕೂಡ ದರ್ಶನ್‌ಗೆ ಧನ್ಯವಾದ ತಿಳಿಸಿದ್ದರು.

  ಈ ವಿವಾದದ ಬಳಿಕ ದರ್ಶನ್ ಮತ್ತು ಜಗ್ಗೇಶ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ಇಬ್ಬರೂ ಪುನೀತ್ ನಮನ ಕಾರ್ಯಕ್ರಮದಲ್ಲಿ ಒಟ್ಟಿಗೆ ಕೂತು ಗಮನ ಸೆಳೆದಿದ್ದಾರೆ.

  English summary
  Jaggesh And Darshan Appeared Together For First Time After Audio Controversy In Puneeth Namana Programme

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X