ಅಂದು ದರ್ಶನ್ ಬಗ್ಗೆ ಜಗ್ಗೇಶ್ ಹೇಳಿದ್ದ ಮಾತು ನಿಜವಾಯ್ತಾ? ವಿಡಿಯೋ ವೈರಲ್

Recommended Video

ಒಂದು ವರ್ಷದ ಬಳಿಕ ನಿಜವಾದ ಜಗ್ಗೇಶ್ ಭವಿಷ್ಯ..? | Darshan | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ನವರಸ ನಾಯಕ ಜಗ್ಗೇಶ್ ಅಪಾರ ಅಭಿಮಾನ ಹೊಂದಿದ್ದಾರೆ. ಸುಮಾರು ಒಂದೂವರೆ ವರ್ಷ ಆಗಿರಬಹುದು. ಹೀಗೆ ಟಿವಿ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಜಗ್ಗಣ್ಣ, ಡಿ ಬಾಸ್ ಬಗ್ಗೆ ಒಂದು ಮಾತು ಹೇಳಿದ್ದರು.

ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ದರ್ಶನ್ ಫ್ಯಾನ್ಸ್ ಶೇರ್ ಮಾಡುತ್ತಿದ್ದಾರೆ. ಈ ವಿಡಿಯೋ ಈಗ ಜಗ್ಗೇಶ್ ಅವರ ಕಣ್ಣಿಗೂ ಬಿದ್ದಿದೆ.

ಇದನ್ನ ಕಂಡು ಸಂತಸಗೊಂಡ ಜಗ್ಗೇಶ್ ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನವರಸ ನಾಯಕನ ಈ ಟ್ವೀಟ್ ಗೆ ಡಿ ಬಾಸ್ ಕೂಡ ಪ್ರತಿಕ್ರಿಯಿಸಿದ್ದಾರೆ. ಏನಿದು ಜಗ್ಗೇಶ್-ದರ್ಶನ್ ಸ್ಟೋರಿ? ಮುಂದೆ ಓದಿ...

100 ಕೋಟಿ ಕ್ಲಬ್ ಗೆ ದರ್ಶನ್ ಹೋಗ್ತಾನೆ

100 ಕೋಟಿ ಕ್ಲಬ್ ಗೆ ದರ್ಶನ್ ಹೋಗ್ತಾನೆ

ಒಂದೂವರೆ ವರ್ಷದ ಹಳೆಯ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಜಗ್ಗೇಶ್ ''ದರ್ಶನ್ ಹಾಕ್ಕೊಂಡು ಕರೆಕ್ಟ್ ಆಗಿ ಸಿನಿಮಾ ಮಾಡಿದ್ರೆ ಕನ್ನಡದಲ್ಲಿ ಸಲ್ಮಾನ್ ಖಾನ್ ರೇಂಜ್ ಗೆ 100 ಕೋಟಿ ಕ್ಲಬ್ ಗೆ ಹೋಗ್ತಾನೆ'' ಎಂದು ಭವಿಷ್ಯ ನುಡಿದಿದ್ದರು. ಆ ವಿಡಿಯೋಗೆ ವೈರಲ್ ಆಗಿದೆ.

ಟ್ವೀಟ್ ಮಾಡಿದ ಜಗ್ಗೇಶ್

ಟ್ವೀಟ್ ಮಾಡಿದ ಜಗ್ಗೇಶ್

ಜಗ್ಗೇಶ್ ಅವರ ಆ ಮಾತಿನ ಜೊತೆ ಕುರುಕ್ಷೇತ್ರ ಚಿತ್ರದ ಕ್ರೇಜ್ ಹೇಗಿದೆ ಎಂಬುದನ್ನ ಅಭಿಮಾನಿಗಳು ಎಡಿಟ್ ಮಾಡಿ ಹಾಕಿದ್ದಾರೆ. ಈ ವಿಡಿಯೋಗೆ ಟ್ವೀಟ್ ಮಾಡಿರುವ ಜಗ್ಗೇಶ್ ''ನನ್ನ ಆನಂದಕ್ಕೆ ಪಾರವೇ ಇಲ್ಲಾ! ಅನ್ಯರಾಜ್ಯದವರ ಆರ್ಭಟ ನೋಡಿ ನೋಡಿ ಸಾಕಾಗಿ ಮನಸಿನಲ್ಲಿ ಒಬ್ಬನೆ ನೋವುನುಂಗಿ ಬದುಕುತ್ತಿದ್ದೆ! ಭಾರಿಸಲಿ ನಮ್ಮ ಹುಡುಗರು ಕನ್ನಡ ಡಿಂಡಿಮವ! ನಮ್ಮ ಹೆಮ್ಮೆಯ ಕನ್ನಡ ಕನ್ನಡಿಗರು ಕನ್ನಡಚಿತ್ರರಂಗ ರಾಯರದಯೆಯಿಂದ ಹೀಗೆ ಕನ್ನಡತನವನ್ನು ರಾಷ್ಟ್ರಮಟ್ಟದಲ್ಲಿ ಮೆರೆಸಲಿ ಎಂದು ಆಶಿಸುವೆ..ಶುಭಮಸ್ತು'' ಎಂದಿದ್ದಾರೆ.

ಥ್ಯಾಂಕ್ಸ್ ಹೇಳಿದ ದರ್ಶನ್

ಥ್ಯಾಂಕ್ಸ್ ಹೇಳಿದ ದರ್ಶನ್

ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಿ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ. ಇದನ್ನ ಕಂಡು ಜಗ್ಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ಜಗ್ಗೇಶ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ದರ್ಶನ್ ''ಹೃದಯಪೂರ್ವಕ ಧನ್ಯವಾದಗಳು ಅಣ್ಣ'' ಎಂದು ಥ್ಯಾಂಕ್ಸ್ ಹೇಳಿದ್ದಾರೆ.

ಕನ್ನಡಕ್ಕಾಗಿ ಎತ್ತಿದ ಗದೆ...

ಕನ್ನಡಕ್ಕಾಗಿ ಎತ್ತಿದ ಗದೆ...

ದರ್ಶನ್ ಅವರ ಧನ್ಯವಾದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್ ''ಹೃದಯ ತುಂಬಿ ಬಂತು..ಕನ್ನಡಕ್ಕಾಗಿ ಎತ್ತಿದ ಗದೆ ರಾಯರ ದಯೇಯಿಂದ ನಿನ್ನ ಭುಜದಮೇಲೆ ಶಾಶ್ವತವಾಗಿ ಉಳಿಯಲಿ.. ಸಾಧ್ಯವಾದಷ್ಟು ಕನ್ನಡದ ಹಳೆ ಕಲಾವಿದರಿಗೆ ನಿನ್ನ ಚಿತ್ರದಲ್ಲಿ ಅವಕಾಶ ಕೊಟ್ಟು ಅವರ ಉದರತುಂಬಿಸುವ ಕಾರ್ಯಮಾಡು ಎಂದು ವಿನಂತಿ..ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು..love you..God bless.'' ಎಂದಿದ್ದಾರೆ.

ಮೂರನೇ ವಾರವೂ ಹೌಸ್ ಫುಲ್

ಮೂರನೇ ವಾರವೂ ಹೌಸ್ ಫುಲ್

ಬಿಡುಗಡೆಯಾಗಿ ಮೂರು ವಾರ ಕಳೆದರೂ ಚಿತ್ರಕ್ಕೆ ಭಾರಿ ರೆಸ್ಪಾನ್ಸ್ ಸಿಕ್ಕಿದೆ. ವಾರಾಂತ್ಯಗಳಲ್ಲಿ ಫ್ಯಾಮಿಲಿ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಚಿತ್ರಮಂದಿರಗಳು ತುಂಬಿದ ಪ್ರದರ್ಶನ ಕಾಣುತ್ತಿದೆ. ಮೊದಲ ಮೂರು ದಿನದಲ್ಲಿ 30 ಕೋಟಿ ಗಳಿಕೆ ಕಂಡಿದ್ದ ಸಿನಿಮಾ, 50 ಕೋಟಿ ಗಡಿದಾಟಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ, 100 ಕೋಟಿ ಆಗುತ್ತಾ ಅಥವಾ ಆಗಿದೆ ಎಂಬುದರ ಬಗ್ಗೆ ಚಿತ್ರತಂಡವೇ ಪ್ರಕಟ ಮಾಡಬೇಕಿದೆ.

More from Filmibeat

English summary
Kurukshetra movie running successfully at 4th week. so, Kannada actor praised to Challenging star darshan in twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X