ದರ್ಶನ್ ಕೈಯಿಂದ ಒಂದೊಳ್ಳೆ ಕೆಲಸ ಮಾಡಿಸಿದ ನಟ ಜಗ್ಗೇಶ್

Recommended Video

ಜಗ್ಗೇಶ್ ಮಾತಿಗೆ ಬೆಲೆಕೊಟ್ಟ ದರ್ಶನ್..! | FILMIBEAT KANNADA

ಕನ್ನಡ ನಟರ ಹಾಗೂ ಕನ್ನಡ ಚಿತ್ರಗಳ ಅಭಿವೃದ್ದಿ, ಏಳಿಗೆಯನ್ನ ಸದಾ ಬೆಂಬಲಿಸುವ ನಟ ಜಗ್ಗೇಶ್, ದರ್ಶನ್ ಮೇಲೆ ವಿಶೇಷವಾದ ಗೌರವ ಹೊಂದಿದ್ದಾರೆ. ಅವರ ಬಗ್ಗೆ ಮಾತನಾಡುವ ಸಮಯದಲ್ಲೆಲ್ಲ ದರ್ಶನ್ ಬೆಳೆದು ಬಂದ ಹಾದಿ, ಅವರ ಕಷ್ಟದ ದಿನ, ಸಿನಿಮಾಗಳು, ಈಗ ಅವರ ಸ್ಥಾನ ಎಲ್ಲವನ್ನ ಜಗ್ಗೇಶ್ ಸ್ಮರಿಸುತ್ತಾರೆ.

ದರ್ಶನ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಜಗ್ಗೇಶ್, ಇತ್ತೀಚಿಗಷ್ಟೆ ತಮ್ಮ 'ಪ್ರೀಮಿಯರ್ ಪದ್ಮಿನಿ' ಚಿತ್ರದ ಆಡಿಯೋ ಬಿಡುಗಡೆಯನ್ನ ಚಾಲೆಂಜಿಂಗ್ ಸ್ಟಾರ್ ಅವರಿಂದ ಮಾಡಿಸಿದ್ದರು.

ಇದೇ ವೇಳೆ ದರ್ಶನ್ ಅವರ ಕೈಯಿಂದ ಒಂದೊಳ್ಳೆ ಕೆಲಸ ಮತ್ತು ಅಭಿಯಾನಕ್ಕೆ ಜಗ್ಗೇಶ್ ಚಾಲನೆ ನೀಡಿದ್ರು. ಈ ಒಳ್ಳೆಯ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಕೆಲಸ ಮಾಡುವುದು ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ. ಅಷ್ಟಕ್ಕೂ, ಆ ಒಳ್ಳೆಯ ಕೆಲಸವೇನು? ಮುಂದೆ ಓದಿ.....

ಮರ ಬೆಳಸಿ, ಅರಣ್ಯ ಉಳಿಸಿ

ಮರ ಬೆಳಸಿ, ಅರಣ್ಯ ಉಳಿಸಿ

ಬಂಡೀಪುರ ಅಭಯಾರಣ್ಯದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ಸುಮಾರ ಎಕರೆ ಅರಣ್ಯ ನಾಶವಾಗಿದೆ. ಇದರಿಂದ ಪ್ರಕೃತಿಗೆ ಸಮಸ್ಯೆಯಾಗಿದ್ದು, ಅದರ ಪರಿಣಾಮ ನಾಗರಿಕ ಸಮಾಜದ ಮೇಲೆ ಬೀಳಲಿದೆ ಎನ್ನುವುದು ವಾಸ್ತವ. ಪ್ರಾಣಿ-ಪಕ್ಷಿಗಳ ಜೀವಕ್ಕೆ ಅಪಾಯ ಎದುರಾಗಿದೆ. ಇದಕ್ಕೆಲ್ಲಾ ಮನುಷ್ಯನ ಅಜಾಗರೂಕತೆಯೇ ಕಾರಣ ಎನ್ನುವುದು ಸತ್ಯ. ಇದಕ್ಕೆ ಏನಾದರೂ ಪರಿಹಾರ ಬೇಕು ಎಂಬ ಉದ್ದೇಶದಿಂದ ದರ್ಶನ್ ಮತ್ತು ಜಗ್ಗೇಶ್ ಹೊಸದೊಂದು ಅಭಿಯಾನಕ್ಕೆ ಕೈಹಾಕಿದ್ದಾರೆ.

ಒಬ್ಬರು ಒಂದು ಗಿಡ ನೆಟ್ಟರೇ ಸಾಕು

ಒಬ್ಬರು ಒಂದು ಗಿಡ ನೆಟ್ಟರೇ ಸಾಕು

ಮನುಷ್ಯರ ಅಗತ್ಯಕ್ಕೆ ಅರಣ್ಯವನ್ನ ಬಲಿ ಕೊಡುವ ಪರಿಸ್ಥಿತಿ ಉದ್ಬವವಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನ ಬೆಳಸಬೇಕು ಅಂದ್ರೆ ಒಬ್ಬೊಬ್ಬರು ಒಂದೊಂದು ಗಿಡ ನೆಡಬೇಕು. ಆದ್ದರಿಂದ ಕಳೆದು ಹೋದ ನಮ್ಮ ಪ್ರಕೃತಿ ನಮ್ಮ ಸೃಷ್ಟಿಯಾಗುತ್ತೆ ಎಂಬ ಕಾರಣಕ್ಕೆ ''ಒಂದು ಗಿಡ ನೆಡಿ'' ಎಂಬ ಅಭಿಯಾನವನ್ನ ದರ್ಶನ್ ಕೈಯಿಂದ ಜಗ್ಗೇಶ್ ಆರಂಭಿಸಿದರು.

ದರ್ಶನ್ ಮಾತಿಗೆ ದೊಡ್ಡ ಬೆಲೆ ಇದೆ

ದರ್ಶನ್ ಮಾತಿಗೆ ದೊಡ್ಡ ಬೆಲೆ ಇದೆ

ದರ್ಶನ್ ದೊಡ್ಡ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಅವರ ಮಾತಿಗೆ ಅಭಿಮಾನಿಗಳು ಕೂಡ ವಿಶೇಷವಾದ ಗೌರವ ಕೊಡ್ತಾರೆ. ಹಾಗಾಗಿ, ದರ್ಶನ್ ಈ ಅಭಿಯಾನವನ್ನ ಶುರು ಮಾಡಿದ್ರೆ, ಅದು ಖಂಡಿತಾ ಒಳ್ಳೆಯದಾಗುತ್ತೆ ಎಂದು ಹಾರೈಸಿ ಒಂದು ಗಿಡ ಕೊಟ್ಟು ಈ ಒಳ್ಳೆಯ ಕೆಲಸಕ್ಕೆ ಚಾಲನೆ ನೀಡಿದ್ರು ಜಗ್ಗೇಶ್.

ವರ್ಷಕ್ಕೊಂದು ಫೋಟೋ ಹಾಕಿ

ವರ್ಷಕ್ಕೊಂದು ಫೋಟೋ ಹಾಕಿ

ಇನ್ನು ಈ ಬಗ್ಗೆ ಮಾತನಾಡಿದ ದರ್ಶನ್ ''ಒಂದು ಗಿಡ ನೆಟ್ಟರೇ ಸಾಕಾಗಲ್ಲ. ಅದಕ್ಕೆ ಗೊಬ್ಬರ ಹಾಕಿ, ಅದನ್ನ ಚೆನ್ನಾಗಿ ನೋಡಿಕೊಳ್ಳಬೇಕು. ಗಿಡ ನೆಟ್ಟು ಒಂದು ಸೆಲ್ಫಿ ತೆಗೆದು ಹಾಕಿದ್ರೆ ಮುಗಿದುಹೋಗಲ್ಲ. ಪ್ರತಿವರ್ಷನೂ ಒಂದು ಸೆಲ್ಫಿ ತೆಗದು ಹಾಕಿ'' ಎಂದು ಕರೆ ನೀಡಿದರು.

More from Filmibeat

English summary
Kannada actor jaggesh and challenging star darshan joins hand together for one good work. before that darshan has released jaggesh's premier padmini movie audio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X