ಮುನಿಸು ಮರೆತು ಒಂದಾದ ಹಿಟ್ ಜೋಡಿ: ಏನಾದ್ರೂ ಹಿಂಟ್ ಸಿಗ್ತಾ?

Recommended Video

ಜಗ್ಗೇಶ್ ಫೋಟೋ ಹಾಕಿ ಗುರುಪ್ರಸಾದ್ ಮಾಡಿದ ಟ್ವೀಟ್ ಏನು ಗೊತ್ತಾ..? | FILMIBEAT KANNADA

ಸ್ಯಾಂಡಲ್ ವುಡ್ ನ ಹಿಟ್ ಕಾಂಬಿನೇಷನ್ ನವರಸನಾಯಕ ಜಗ್ಗೇಶ್ ಮತ್ತು ಗುರುಪ್ರಸಾದ್ ಜೋಡಿ ಈಗ ಮತ್ತೆ ಒಂದಾಗಿದೆ. ಇಬ್ಬರು ಮುನಿಸು ಮರೆತು ಒಂದಾಗಿದ್ದು ಮಾತ್ರವಲ್ಲ ಈ ಜೋಡಿ ಮತ್ತೊಂದು ಸಿನಿಮಾಗೆ ತಯಾರಿ ನಡೆಸುತ್ತಿದೆ.

ಮಠ, ಎದ್ದೇಳು ಮಂಜುನಾಥ ಅಂತಹ ಸೂಪರ್ ಹಿಟ್ ಕಾಮಿಡಿ ಸಿನಿಮಾಗಳನ್ನು ನೀಡಿದ ಈ ಜೋಡಿ ಆ ನಂತರ ದೂರ ದೂರ ಆಗಿದ್ರು. ಅದ್ಯಾಕೋ ಗೊತ್ತಿಲ್ಲ, ಇಬ್ಬರ ನಡುವೆ ಬಿರುಕು ಮೂಡಿ, ಇಬ್ಬರು ದೂರ ಆಗಿದ್ದರು. ಇವರ ಮುನಿಸಿನಿಂದ ಅಭಿಮಾನಿಗಳಿಗೆ ಮಾತ್ರ ಭಾರಿ ನಿರಾಸೆಯಾಗಿತ್ತು. ಈ ಜೋಡಿ ಯಾವಾಗ ಒಂದಾಗುತ್ತೆ ಎಂದು ಕಾಯುತ್ತಿದ್ದರು.

ಆದ್ರೀಗ ಅಭಿಮಾನಿಗಳ ಆಸೆ ಈಡೇರುವ ಸಮಯ ಬಂದಿದೆ. ಎರಡು ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ನಕ್ಕು ನಗಿಸಿದ್ದ ಈ ಜೋಡಿ ಈಗ ಮೂರನೆ ಸಿನಿಮಾ ಮಾಡುವ ಸೂಚನೆ ನೀಡಿದ್ದಾರೆ. ಈ ಬಗ್ಗೆ ಸ್ವತಹ ನಿರ್ದೇಶಕ ಗುರುಪ್ರಸಾದ್ ಹೇಳಿಕೊಂಡಿದ್ದಾರೆ. ಟ್ವಿಟ್ಟರ್ ನಲ್ಲಿ ಜಗ್ಗೇಶ್ ಮತ್ತು ಗುರುಪ್ರಸಾದ್ ಫೋಟೋವನ್ನು ಶೇರ್ ಮಾಡುವ ಮೂಲಕ "ಏನಾದ್ರು ಹಿಂಟ್ ಸಿಗ್ತಾ?" ಎಂದು ಚಿತ್ರಾಭಿಮಾನಿಗಳಿಗೆ ಕೇಳಿದ್ದಾರೆ.

Jaggesh And Director Guru Prasad To Team Up For The Third Time

ಗುರುಪ್ರಸಾದ್ ಟ್ವೀಟ್ ಮಾಡಿದ್ದಾರೆ ಎಂದ್ಮೇಲೆ ಇಬ್ಬರ ಸಿನಿಮಾ ಬರುವುದು ಪಕ್ಕಾ ಆದಂತೆ ಆಯ್ತು. ಮಠ ಮತ್ತು ಎದ್ದೇಳು ಮಂಜುನಾಥ ಸಿನಿಮಾಗಳನ್ನು ಕನ್ನಡ ಚಿತ್ರಪ್ರಿಯರು ಮರೆಯಲು ಸಾಧ್ಯವೆ ಇಲ್ಲ. ಆಲ್ ಟೈಂ ಫೇವರಿಟ್ ಕಾಮಿಡಿ ಸಿನಿಮಾಗಳಿವು.

ಎರಡು ಹಿಟ್ ಸಿನಿಮಾಗಳನ್ನು ನೀಡಿರುವ ಈ ಜೋಡಿ ಹ್ಯಾಟ್ರಿಕ್ ಸಿನಿಮಾ ಮಾಡಲು ತಯಾರಿ ನಡೆಸುತ್ತಿದೆ. ಮತ್ತೆ ಒಂದಾಗಿರುವ ಈ ಜೋಡಿಯ ಮೇಲೆ ನಿರೀಕ್ಷೆ ಕೂಡ ದುಪ್ಪಟ್ಟಾಗಿದೆ. ಆದಷ್ಟು ಬೇಗ ಜಗ್ಗೇಶ್ ಮತ್ತು ಗುರುಪ್ರಸಾದ್ ಸಿನಿಮಾ ಸೆಟ್ಟೇರಲಿ ಎನ್ನುವುದೆ ಅಭಿಮಾನಿಗಳ ಆಸೆ.

More from Filmibeat

English summary
Kannada actor Jaggesh and director Guru Prasad to team up for the third time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X