ನವೆಂಬರ್ ನಲ್ಲಿ ಜಗ್ಗೇಶ್ - ಗುರುಪ್ರಸಾದ್ ಹೊಸ ಸಿನಿಮಾ
'ಮಠ' ಹಾಗೂ 'ಎದ್ದೇಳು ಮಂಜುನಾಥ' ಸಿನಿಮಾಗಳು ನವರಸ ನಾಯಕ ಜಗ್ಗೇಶ್ ಕೆರಿಯರ್ ನ ಬೆಸ್ಟ್ ಸಿನಿಮಾಗಳು. ಈ ಚಿತ್ರಗಳನ್ನು ನಿರ್ದೇಶನ ಮಾಡಿದ್ದು, ಗುರುಪ್ರಸಾದ್.
ಕನ್ನಡದ ಪ್ರೇಕ್ಷಕರು ಇಂದಿಗೂ 'ಮಠ' ಮತ್ತು 'ಎದ್ದೇಳು ಮಂಜುನಾಥ' ಗುಂಗಿನಿಂದ ಹೊರ ಬಂದಿಲ್ಲ. ಮತ್ತೊಂದು ಕಡೆ ಈ ಜೋಡಿ ಮತ್ತೆ ಸಿನಿಮಾ ಮಾಡಬೇಕು ಎನ್ನುವ ಆಸೆ ಅನೇಕರಿಗೆ ಇತ್ತು. ಈಗ ಅಂತೂ ಜಗ್ಗೇಶ್ ಹಾಗೂ ಗುರುಪ್ರಸಾದ್ ಸಿನಿಮಾ ಮಾಡುತ್ತಿದ್ದಾರೆ.
ಈ ಹಿಂದೆಯಿಂದ ಜಗ್ಗೇಶ್ ಮತ್ತು ಗುರುಪ್ರಸಾದ್ ಹ್ಯಾಟ್ರಿಕ್ ಸಿನಿಮಾದ ಬಗ್ಗೆ ಸುದ್ದಿ ಕೇಳುತ್ತಾ ಬರುತ್ತಿತ್ತು, ಇದೀಗ ಈ ಸುದ್ದಿಯನ್ನು ನಿರ್ಮಾಪಕ ವಿಖ್ಯಾತ್ ಖಚಿತ ಪಡಿಸಿದ್ದಾರೆ. ನವೆಂಬರ್ ನಲ್ಲಿ ಈ ಸಿನಿಮಾ ಪ್ರಾರಂಭ ಆಗಲಿದೆಯಂತೆ.

ವಿಖ್ಯಾತ್ ಚಿತ್ರ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ. ಎಂದಿನಂತೆ ಗುರುಪ್ರಸಾದ್ ತಮ್ಮ ಸ್ಟೈಲ್ ಸಿನಿಮಾ ಮಾಡಲು ಪ್ಲಾನ್ ಮಾಡಿದ್ದಾರೆ. ಸದ್ಯಕ್ಕೆ, ಕಥೆಯ ಕೆಲಸಗಳು ನಡೆಯುತ್ತಿದೆ. ಸಿನಿಮಾ ಪಕ್ಕಾ ಕಾಮಿಡಿಯಾಗಿ ಇರಲಿದೆ.
'ಡೈರೆಕ್ಟರ್ ಸ್ಪೆಷಲ್' ನಂತರ ತಣ್ಣಗಾಗಿದ್ದ ಗುರುಪ್ರಸಾದ್ 'ಅದೇಮಾ' ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಆದರೆ, ಈಗ ಮತ್ತೆ ಜಗ್ಗೇಶ್ ಜೊತೆಗೆ ಒಂದಾಗಿದ್ದಾರೆ.


Click it and Unblock the Notifications











