For Quick Alerts
  ALLOW NOTIFICATIONS  
  For Daily Alerts

  Jaggesh: ಮದುವೆ ದಿನ ನೆನೆದ ಜಗ್ಗೇಶ್: ಇವರ ಲವ್ ಸ್ಟೋರಿನೇ ಬಲು ರೋಚಕ

  |

  ನಟ ಜಗ್ಗೇಶ್ ಹಾಗೂ ಪರಿಮಳ ಜಗ್ಗೇಶ್ ವಿವಾಹ ವಾರ್ಷಿಕೋತ್ಸವ ಇಂದು (ಮಾರ್ಚ್ 22). ಜಗ್ಗೇಶ್ ಮತ್ತು ಪರಿಮಳಾ ವಿವಾಹದ ಬಗ್ಗೆ ಹೇಳಬೇಕು ಅಂದರೆ, ಅವರ ಪ್ರೇಮ ಪುರಾಣದ ಬಗ್ಗೆ ಮಾತನಾಡಲೇ ಬೇಕು. ಇವರನ್ನು ಆದರ್ಶ ದಂಪತಿ ಎಂದೇ ಕರೆಯಲಾಗುತ್ತದೆ. ಅಷ್ಟರ ಮಟ್ಟಿಗೆ ಇವರ ಲವ್‌ ಸ್ಟೋರಿ, ಮ್ಯಾರೇಜ್ ಸ್ಟೋರಿ ಫೇಮಸ್.

  ಜಗ್ಗೇಶ್ ಮತ್ತು ಪರಿಮಳಾ ಪ್ರೇಮ ಪುರಾಣ ಯಾವ ರೋಚಕ ಸಿನಿಮಾ ಕಥೆಗಿಂತಲೂ ಕಮ್ಮಿ ಇಲ್ಲ. ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಆದ ಈ ಜೋಡಿ ಪೊಲೀಸ್ ಸ್ಟೇಷನ್ ಹಾಗೂ ಕೋರ್ಟ್ ಮೆಟ್ಟಿಲೇರಬೇಕಾಯ್ತು. ಪೋಷಕರ ಕಣ್ತಪ್ಪಿಸಿ ಪರಿಮಳಾರನ್ನ ಮದುವೆ ಆದ ನಟ ಜಗ್ಗೇಶ್ ಮೇಲೆ 'ಕಿಡ್ನ್ಯಾಪ್' ಕೇಸ್ ಕೂಡ ಹಾಕಲಾಗಿತ್ತು.

  ಜಗ್ಗೇಶ್ ಬರ್ತ್‌ಡೇ ಸಂಭ್ರಮಕ್ಕೆ ಬ್ರೇಕ್: ಟ್ವೀಟ್‌ನಲ್ಲೇ ಕಣ್ಣೀರು!ಜಗ್ಗೇಶ್ ಬರ್ತ್‌ಡೇ ಸಂಭ್ರಮಕ್ಕೆ ಬ್ರೇಕ್: ಟ್ವೀಟ್‌ನಲ್ಲೇ ಕಣ್ಣೀರು!

  ಸವಾಲುಗಳನ್ನು ಎದುರಿಸಿ ಜೊತೆಗೆ ಬಾಳುತ್ತಿರುವ ಈ ಜೋಡಿಯ ದಾಂಪತ್ಯ ಜೀವನದ ಪಯಣಕ್ಕೆ ಈಗ 38 ವರ್ಷ. ಈ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡ ನಟ ಜಗ್ಗೇಶ್,ಪತ್ನಿ ಪರಿಮಳಾ ಮತ್ತು ತಮ್ಮ ಮಕ್ಕಳ ಬಗ್ಗೆ ಬರೆದುಕೊಂಡಿದ್ದಾರೆ. ಅವರಿಗೆ ಅಭಿಮಾನಿ ಬಳಗದಿಂದ ಶುಭಾಶಯಗಳು ಹರಿದು ಬರುತ್ತಿದೆ. ಜಗ್ಗೇಶ್ ತಮ್ಮ ಬಾಳ ಪಯಣದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

  ಜಗ್ಗೇಶ್ ಟ್ವೀಟ್‌ನಲ್ಲಿ ಏನಿದೆ?

  ನಟ ಜಗ್ಗೇಶ್ ತಮ್ಮ ವಿವಾಹ ವಾರ್ಷಿಕೋತ್ಸವದ ಬಗ್ಗೆ ಟ್ವಿಟ್ಟರ್‌ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಜಗ್ಗೇಶ್ ಮಾಡಿರುವ ಟ್ವೀಟ್ ಹೀಗಿದೆ "ಇಂದು ಪರಿಮಳಾಗೆ ತಾಳಿ ಕಟ್ಟಿ 38ನೇ ವರ್ಷ. ಪರಿಮಳಾಚಾರ್ಯರು, ಗುರುರಾಜ, ಯತಿರಾಜ ರಾಯರ ಸಂಬಂಧಿತ ನಾಮಾಂಕಿತ. ಅರ್ಜುನ ಕೃಷ್ಣನ ಪ್ರಿಯ ಸಖ,ರಾಯರು ಕೃಷ್ಣನ ಪ್ರಿಯ ಸಖ. ಇಷ್ಟು ಹೆಸರು ದಿನ ಬಳಸಲು ರಾಯರು ನನ್ನ ಬದುಕಿಗೆ ನೀಡಿದ ದೇಣಿಗೆ. ಪರಿಮಳ ಮಡದಿ, ಗುರುರಾಜ ಯತಿರಾಜ ಮಕ್ಕಳು, ಅರ್ಜುನ ಮೊಮ್ಮಗ ಶುಭ ಮಂಗಳವಾರ." ಎಂದು ಬರೆದುಕೊಂಡು ವಿಡಿಯೋ ಹಂಚಿಕೊಂಡಿದ್ದಾರೆ.

  'ಎದ್ದೇಳು ಮಂಜುನಾಥ 2': ಚಿತ್ರದಲ್ಲಿ ಜಗ್ಗೇಶ್‌ಗೆ ಜಾಗವಿಲ್ಲ!'ಎದ್ದೇಳು ಮಂಜುನಾಥ 2': ಚಿತ್ರದಲ್ಲಿ ಜಗ್ಗೇಶ್‌ಗೆ ಜಾಗವಿಲ್ಲ!

  9ನೇ ತರಗತಿಯಲ್ಲಿ ಇದ್ದಾಗಲೇ ಸಿಕ್ಕಿತ್ತು ಲವ್ ಲೆಟರ್!

  9ನೇ ತರಗತಿಯಲ್ಲಿ ಇದ್ದಾಗಲೇ ಸಿಕ್ಕಿತ್ತು ಲವ್ ಲೆಟರ್!

  ಜಗ್ಗೇಶ್ ಮತ್ತ ಪರಿಮಳಾ ನಡುವೆ ಪ್ರೇಮಾಂಕುರವಾಗಿದ್ದು ಯಾವಾಗ ಮತ್ತು ಹೇಗೆ ಎನ್ನುವುದನ್ನು ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪರಿಮಳಾ ಹಂಚಿಕೊಂಡಿದ್ದರು. ಆಗ ಜಗ್ಗೇಶ್ ಹೇಳಿದ್ದು ಹೀಗೆ. " ನಾನು ನಿಮ್ಮ ಮೊದಲು ಮೀಟ್ ಮಾಡಿದಾಗ ನನ್ನ ವಯಸ್ಸು 14, ನಿಮ್ಮ ವಯಸ್ಸು 19. ನಾನು ಒಂಬತ್ತನೇ ಕ್ಲಾಸ್. ನೀವು ಫಸ್ಟ್ ಇಯರ್ ಡಿಗ್ರಿ ಓದುತ್ತಿದ್ರಿ. ಆಗಲೇ ಲವ್ ಲೆಟರ್ ಬರೆದಿದ್ರಿ. 22 ಮಾರ್ಚ್ 84, ಪರೀಕ್ಷೆ ಆದ ಕೂಡಲೇ ರಿಜಿಸ್ಟರ್ ಮದುವೆ ಆದ್ವಿ. ಆಗ ನಿಮ್ಮ ಹತ್ತಿರ ದುಡ್ಡು ಇರಲಿಲ್ಲ''. ಎಂದು ಪರಿಮಳಾ ಹೇಳಿಕೊಂಡಿದ್ದಾರೆ.

  ಜಗ್ಗೇಶ್ ಪ್ರೇಮ ಪತ್ರಕ್ಕೆ ಉತ್ತರ ಸಿಕ್ಕಿದ ಕೂಡಲೇ ಮದುವೆ!

  ಜಗ್ಗೇಶ್ ಪ್ರೇಮ ಪತ್ರಕ್ಕೆ ಉತ್ತರ ಸಿಕ್ಕಿದ ಕೂಡಲೇ ಮದುವೆ!

  ಪರಿಮಳಾ ಪ್ರೇಮದ ವಿಚಾರ ಅವರ ತಂದೆಗೆ ತಿಳಿದಿತ್ತು. ಆ ವೇಳೆ ಪರಿಮಳಾರನ್ನು ಮದ್ರಾಸ್‌ನಲ್ಲಿ ಕಾಲೇಜ್‌ಗೆ ಕಳುಹಿಸುವಾಗಲೂ ಮಗಳ ಮೇಲೆ ಕಣ್ಣಿಟ್ಟಿದ್ದರು. ಆಗ ಜಗ್ಗೇಶ್ ಜೊತೆಗೆ ಪರಿಮಳಾಗೆ ಸಂಪರ್ಕ ಇರಲಿಲ್ಲ. ಆ ಸಮಯದಲ್ಲಿ ನನ್ನ ಮನಸ್ಸಲ್ಲಿ ಇದ್ದ ಭಾವನೆಗಳನ್ನೆಲ್ಲಾ ಲೆಟರ್‌ನಲ್ಲಿ ಬರೆದು ಇಟ್ಟಿದ್ದರಂತೆ. ಆ ಲೆಟರ್‌ಗಳನ್ನೆಲ್ಲಾ ಪರಿಮಳಾಗೆ ಕೋಮಲ್ ತಲುಪಿಸುತ್ತಿದ್ದರಂತೆ. ಆ ಎಲ್ಲಾ ಪತ್ರಗಳನ್ನು ಓದಿ ಪರಿಮಳಾ ಕಡೆಯಿಂದ ಉತ್ತರ ಬಂದ ಕೂಡಲೇ ಜಗ್ಗೇಶ್ ಮದುವೆ ಸಜ್ಜಾಗಿದ್ದರು. ಮದ್ರಾಸ್‌ನಿಂದ ಪರಿಮಳಾರನ್ನು ಕರೆದುಕೊಂಡು ಬಂದಿದ್ದರು.

  'ತೋತಾಪುರಿ' ಚಿತ್ರದ 'ಬಾಗ್ಲು ತೆಗಿ ಮೇರಿ ಜಾನ್‌' ಸಾಂಗ್ 100 ಮಿಲಿಯನ್ ವೀವ್ಸ್ ಸಿಕ್ಕಿದ್ದು ಹೆಂಗೆ?'ತೋತಾಪುರಿ' ಚಿತ್ರದ 'ಬಾಗ್ಲು ತೆಗಿ ಮೇರಿ ಜಾನ್‌' ಸಾಂಗ್ 100 ಮಿಲಿಯನ್ ವೀವ್ಸ್ ಸಿಕ್ಕಿದ್ದು ಹೆಂಗೆ?

  ಪ್ರೀತಿ ಗೆದ್ದ ಜಗ್ಗೇಶ್- ಪರಿಮಳಾ ದಾಂಪತ್ಯಕ್ಕೆ 38 ವರ್ಷ!

  ಪ್ರೀತಿ ಗೆದ್ದ ಜಗ್ಗೇಶ್- ಪರಿಮಳಾ ದಾಂಪತ್ಯಕ್ಕೆ 38 ವರ್ಷ!

  ಇನ್ನು ತಮ್ಮ ಲವ್ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಗೆದ್ದ ಬಗ್ಗೆ ಜಗ್ಗೇಶ್ ಈ ಹಿಂದೆ ಹೇಳಿಕೊಂಡಿದ್ದು ಹೀಗೆ. "ನನಗೆ ಆಗ 17 ವರ್ಷ. ಮದುವೆ ಆಗಿ ಒಂದೂವರೆ ವರ್ಷ ಆಗಿತ್ತು. ನಮ್ಮ ವಯಸ್ಸು ಚಿಕ್ಕದಿದ್ದರೂ, ನಮ್ಮ ಯೋಚನೆ ಮಾತ್ರ ಚಿಕ್ಕದಾಗಿರಲಿಲ್ಲ. ಹೀಗಾಗಿ ತೀರ್ಪು ನಮ್ಮ ಪರ ಆಯ್ತು. ಅದು ಗುರುವಾರ. ರಾಯರ ಸ್ಥಾನದಲ್ಲಿ ನಿಂತು ಮುಖ್ಯ ನ್ಯಾಯಮೂರ್ತಿ ಜಗ್ಗೇಶ್ ಪರ ಮಾತನಾಡಿದರು. ಸಂವಿಧಾನದ ವಿರುದ್ಧ ಹೋಗಿ ನಮ್ಮ ಪರ ತೀರ್ಪು ಬಂತು. ಅದು ಲ್ಯಾಂಡ್ ಮಾರ್ಕ್ ಜಡ್ಜ್‌ಮೆಂಟ್." ಎಂದು ಜಗ್ಗೇಶ್ ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದರು.

  English summary
  Jaggesh and His Wife Parimala Celebrate 38th Wedding Anniversary, Here Is Their Intresting Love Story,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X