ನಟ ಜಗ್ಗೇಶ್ ಜೀವನವನ್ನೇ ಬದಲಿಸಿತ್ತು 1984 ಮಾರ್ಚ್ 22
Recommended Video

ನಟ ಜಗ್ಗೇಶ್ ಅವರ ಮದುವೆ ಸುಪ್ರೀಂ ಕೋರ್ಟ್ ನಲ್ಲಿ ಇಂದಿಗೂ ಲ್ಯಾಂಡ್ ಮಾರ್ಕ್ ಆಗಿ ಉಳಿದಿದೆ. ಜಗ್ಗೇಶ್ ಮತ್ತು ಪರಿಮಳ ಅವರ ಲವ್ ಸ್ಟೋರಿ ಯಾವ ಸಿನಿಮಾಗಿಂತ ಕಮ್ಮಿಯಿಲ್ಲ. ಸಿನಿಮಾಗಳಲ್ಲಿ ಬರುವಂತೆ ಲವ್, ಫೈಟ್, ಪೊಲೀಸ್, ಕೇಸ್ ಹೀಗೆ ಎಲ್ಲವೂ ಜಗ್ಗೇಶ್ ಅವರ ಬಾಳಲ್ಲಿ ಇದೆ.
ಇದೆಲ್ಲವನ್ನ ಎದುರಿಸಿ, ಪ್ರೀತಿಸಿದವರ ಕೈಹಿಡಿದು 35 ವರ್ಷಗಳ ಕಾಲ ಸುಖಕರ ಜೀವನ ಮಾಡಿದ್ದಾರೆ ನಟ ಜಗ್ಗೇಶ್. ಅಂದ್ಹಾಗೆ, ಈ ಕಥೆ ಈಗ್ಯಾಕೆ ಅಂತೀರಾ. ಅರೇ ಇವತ್ತು ನವರಸ ನಾಯಕ ಜಗ್ಗೇಶ್ ಮತ್ತು ಪರಿಮಳ ಅವರು ಮದುವೆ ಆದ ದಿನ.
35ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಜಗ್ಗೇಶ್ ದಂಪತಿ ಈ ಸಂತಸವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಹೀಗಾಗಿ, ಜಗ್ಗಣ್ಣನ ಮದುವೆ ಅಂದ್ರೆ ಆ ಹಳೇ ಕಥೆಗಳೆಲ್ಲಾ ನನೆಪಾಗುತ್ತೆ. ಮುಂದೆ ಓದಿ.....
2 ಸಾವಿರದಲ್ಲಿ ಮದುವೆ ಆಗಿದ್ದ ಜಗ್ಗೇಶ್
ಮಾರ್ಚ್ 22, 1984ರಲ್ಲಿ ನಟ ಜಗ್ಗೇಶ್ ಅವರು ಪರಿಮಳ ಜೊತೆ ಸಪ್ತಪದಿ ತುಳಿದರು. ಆಗ ಮದುವೆಗಾಗಿ ಖರ್ಚು ಮಾಡಿದ್ದು ಬರಿ 2 ಸಾವಿರ. ಈಗಿನ ಸಮಯಕ್ಕೆ ಅದು 2 ಲಕ್ಷವೆನಿಸಬಹುದು ಬಿಡಿ. ಕಷ್ಟದ ಜೀವನ ಆರಂಭಿಸಿ ಇಂದು ರಾಯರ ಆಶೀರ್ವಾದಿಂದ ಸಂತೋಷವಾಗಿರುವುದಾಗಿ ಜಗ್ಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

ಮದುವೆ ಫ್ಲಾಶ್ ಬ್ಯಾಕ್
ಜಗ್ಗೇಶ್ ಮತ್ತು ಪರಿಮಳ ಅವರು ಮೊದಲ ಸಲ ಭೇಟಿಯಾದಾಗ ಜಗ್ಗಣ್ಣಗೆ 19 ವರ್ಷ ಮತ್ತು ಪರಿಮಳ ಅವರಿಗೆ 14 ವರ್ಷ ವಯಸ್ಸಂತೆ. ಜಗ್ಗೇಶ್ ಮೊದಲ ವರ್ಷ ಡಿಗ್ರಿ, ಪರಿಮಳ ಅವರು ಒಂಭತ್ತನೇ ತರಗತಿ. ನಂತರ 22 ಮಾರ್ಚ್ 1984ರಲ್ಲಿ ಪೋಷಕರ ಕಣ್ತಪ್ಪಿಸಿ ರಿಜಿಸ್ಟರ್ ಮದುವೆ ಆದರಂತೆ. ಪರಿಮಳ ಅವರು ಆಗ ಅಪ್ರಾಪ್ತ ವಯಸ್ಸಿನಲ್ಲಿದ್ದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕಿಡ್ನ್ಯಾಪ್ ಕೇಸ್ ಆಗಿತ್ತು
ಪರಿಮಳ ಅವರನ್ನ ಅವರ ಮನೆಯಿಂದ ಜಗ್ಗೇಶ್ ಅವರು ಕರೆದುಕೊಂಡು ಬಂದುಬಿಟ್ಟಿದ್ದರು. ಆ ಸಮಯದಲ್ಲಿ ಅವರ ಮೇಲೆ ಕಿಡ್ನ್ಯಾಪ್ ಕೇಸ್ ದಾಖಲಾಗಿತ್ತು. 'ಚಿತ್ರನಟನಿಂದ ಕಿಡ್ನ್ಯಾಪ್' ಎಂದು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು.ಈ ಪ್ರಕರಣ ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು.

ಸುಪ್ರೀಂ ಕೋರ್ಟ್ ನಲ್ಲಿ ಮಹತ್ವದ ತೀರ್ಪು
ಅಪ್ರಾಪ್ತ ಯುವತಿಯನ್ನ ಅಪಹರಣ ಮಾಡಿ, ಮದುವೆ ಆಗಿರುವ ಬಗ್ಗೆ ನಟ ಜಗ್ಗೇಶ್ ವಿರುದ್ಧ ದಾಖಲಾಗಿದ್ದ ಪ್ರಕರಣ, ಸುಪ್ರೀಂ ಕೋರ್ಟ್ ನಲ್ಲಿ ತೀರ್ಮಾನವಾಗಿತ್ತು. ಅಂದು ಮಾನವೀಯತೆಯ ಆಧಾರದ ಮೇಲೆ, ಜಗ್ಗೇಶ್-ಪರಿಮಳ ಪ್ರೇಮಕ್ಕೆ ಬೆಲೆಕೊಟ್ಟ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸಂವಿಧಾನದ ವಿರುದ್ಧ ಹೋಗಿ ಪ್ರೇಮಿಗಳ ಪರ ತೀರ್ಪು ಕೊಟ್ಟರು. ಅಂದು ಎದುರಿಸಿದ ಕಷ್ಟಗಳಿಗೆ ಉತ್ತರ ಕೊಡಬೇಕೆಂದು ತೀರ್ಮಾನಿಸಿದ ಜಗ್ಗೇಶ್ ದಂಪತಿ ಇಂದು ಅನೇಕರಿಗೆ ಮಾದರಿಯಾಗಿದ್ದಾರೆ.


Click it and Unblock the Notifications











