ಕೋವಿಡ್ ಲಸಿಕೆ ಪಡೆದ ಜಗ್ಗೇಶ್ ದಂಪತಿ: 'ಇನ್ನು ಎರಡು ವರ್ಷ ಅಂತರವಿರಲಿ' ಎಂದ ನಟ

45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವೈರಸ್ ಲಸಿಕೆ ನೀಡಲಾಗುತ್ತಿದೆ. ಈ ಹಿನ್ನೆಲೆ 58 ವರ್ಷದ ಹಿರಿಯ ನಟ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳ ಜಗ್ಗೇಶ್ ಅವರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಟ ಜಗ್ಗೇಶ್ ದಂಪತಿ ಇಂದು ಕೋವಿಡ್ ಲಸಿಕೆ ಪಡೆದಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ನವರಸ ನಾಯಕ 'ಕೊರೊನಾ ಎರಡನೇ ಅಲೆಯಿಂದ ಎಚ್ಚರಿಕೆಯಿಂದಿರಿ' ಎಂದು ಬುದ್ದಿವಾದ ಹೇಳಿದ್ದಾರೆ.

'ಕಳೆದ ವರ್ಷ ಮಾರ್ಚ್ ಕೊರೋನ ಮಹಾಮಾರಿ ವಿಶ್ವಕ್ಕೆ ಲಗ್ಗೆ ಇಟ್ಟಾಗ ಮನುಕುಲ ತತ್ತರಿಸಿತು. ವ್ಯವಹಾರ ವ್ಯಾಪಾರ ನಷ್ಟ, ಬಂಧು ಮಿತ್ರರ ಸಮಾಜದ ಗಣ್ಯರ ಸಾವು ನೋವು. ಲೋಕವೆ ಸ್ಥಬ್ಧವಾಯಿತು. ಆಗ ಮನು ಕುಲಕ್ಕೆ ಇದ್ದದ್ದೆ ದಾರಿ ದೇವರ ಮೊರೆ ಹೋಗೋದು. ಮನೆಯಲ್ಲೆ ಜೈಲಿನಂತೆ ಮಾಡಿ ಬದುಕಿದ್ದು. ನಮ್ಮೆಲ್ಲರ ಪ್ರಾರ್ಥನೆ ಬೇಗ ದೇಶಕ್ಕೆ ಕೋವಿಡ್ ಚುಚ್ಚುಮದ್ಧು ಬರಲಿ ಎಂಬುದು ಮಾತ್ರ ಆಗಿತ್ತು. ಈಗ ನಮ್ಮ ಹೆಮ್ಮೆಯ ಭಾರತ ದೇಶ ವ್ಯಾಕ್ಸೀನ್ ಕಂಡುಹಿಡಿದು ಅನ್ಯದೇಶಕ್ಕು ನೀಡಿ ನಮ್ಮ ದೇಶಕ್ಕು ಹಂಚಿದೆ.' ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

 Jaggesh and his wife Parimala takes Covid-19 vaccine first dose

'ಆದರೆ ಒಂದು ವರ್ಗ ವ್ಯಾಕ್ಸೀನ್ ಮೇಲೆ ಅಪಪ್ರಚಾರ ಆರಂಭಿಸಿ ಅಮಾಯಕರು ಹೆದರುವಂತೆ ಮಾಡಿ ವಿಕೃತ ಆನಂದ ಪಡುತ್ತಿದ್ದಾರೆ. ಕೆಲವರು ಕೊರೋನ ಏನು ಮಾಡದು ಎಂದು ಮಾಸ್ಕ್ ಅಂತರ ಪಾಲಿಸದೆ 2ನೇ ಅಲೆಗೆ ಪುಷ್ಠಿ ನೀಡುತ್ತಿದ್ದಾರೆ. ನೆನಪಿಡಿ ನಮ್ಮ ಅನಾಗರೀಕ ಭಾವದಿಂದ ಮತ್ತೆ ಕೊರೋನ ಸ್ಪೋಟಗೊಂಡರೆ ಹಾಳಾಗುವುದು ನಾವೆ. ನಾವು ಸರಿಯಿದ್ದರೆ ಲೋಕ ಸರಿಯಿರುತ್ತದೆ.

 Jaggesh and his wife Parimala takes Covid-19 vaccine first dose

ದಯಮಾಡಿ ಕೋವಿಡ್ ಲಸಿಕೆ ನೀವು ಪಡೆದು ಮನೆಯ ಹಿರಿಯರಿಗು ಕೊಡಿಸಿ ಧೈರ್ಯದಿಂದ ನೆಮ್ಮದಿಯಾಗಿ ಬಾಳಿ. ಮಾಸ್ಕ್, ಅಂತರ ಇನ್ನು 2 ವರ್ಷ ಇರಲಿ ನಿಮ್ಮ ಸುರಕ್ಷಿತೆಗಾಗಿ. ನಾನು ನನ್ನ ಮಡದಿ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ ನಾರಾಯಣ ಸ್ವಾಮಿ ಅವರ ಬಳಿ ಕೋವಿಡ್ ಚುಚ್ಚುಮದ್ಧು ಪಡೆದೆವು' ಎಂದು ಜಗ್ಗೇಶ್ ಮಾಹಿತಿ ಹಂಚಿಕೊಂಡಿದ್ದಾರೆ.

ನಟ ಪುನೀತ್ ರಾಜ್ ಕುಮಾರ್ ಅವರು ಸಹ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

More from Filmibeat

English summary
Kannada Actor Jaggesh and his wife Parimala takes Covid-19 vaccine first dose.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X