twitter
    For Quick Alerts
    ALLOW NOTIFICATIONS  
    For Daily Alerts

    ಕೋವಿಡ್ ಲಸಿಕೆ ಪಡೆದ ಜಗ್ಗೇಶ್ ದಂಪತಿ: 'ಇನ್ನು ಎರಡು ವರ್ಷ ಅಂತರವಿರಲಿ' ಎಂದ ನಟ

    |

    45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವೈರಸ್ ಲಸಿಕೆ ನೀಡಲಾಗುತ್ತಿದೆ. ಈ ಹಿನ್ನೆಲೆ 58 ವರ್ಷದ ಹಿರಿಯ ನಟ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳ ಜಗ್ಗೇಶ್ ಅವರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

    ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಟ ಜಗ್ಗೇಶ್ ದಂಪತಿ ಇಂದು ಕೋವಿಡ್ ಲಸಿಕೆ ಪಡೆದಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ನವರಸ ನಾಯಕ 'ಕೊರೊನಾ ಎರಡನೇ ಅಲೆಯಿಂದ ಎಚ್ಚರಿಕೆಯಿಂದಿರಿ' ಎಂದು ಬುದ್ದಿವಾದ ಹೇಳಿದ್ದಾರೆ.

    'ಯುವರತ್ನ' ಯಶಸ್ಸಿನ ಬೆನ್ನಲ್ಲೇ ಜಗ್ಗೇಶ್ ಜೊತೆ ರಾಯರ ದರ್ಶನಕ್ಕೆ ಹೊರಟ ಪುನೀತ್ ಮತ್ತು ತಂಡ'ಯುವರತ್ನ' ಯಶಸ್ಸಿನ ಬೆನ್ನಲ್ಲೇ ಜಗ್ಗೇಶ್ ಜೊತೆ ರಾಯರ ದರ್ಶನಕ್ಕೆ ಹೊರಟ ಪುನೀತ್ ಮತ್ತು ತಂಡ

    'ಕಳೆದ ವರ್ಷ ಮಾರ್ಚ್ ಕೊರೋನ ಮಹಾಮಾರಿ ವಿಶ್ವಕ್ಕೆ ಲಗ್ಗೆ ಇಟ್ಟಾಗ ಮನುಕುಲ ತತ್ತರಿಸಿತು. ವ್ಯವಹಾರ ವ್ಯಾಪಾರ ನಷ್ಟ, ಬಂಧು ಮಿತ್ರರ ಸಮಾಜದ ಗಣ್ಯರ ಸಾವು ನೋವು. ಲೋಕವೆ ಸ್ಥಬ್ಧವಾಯಿತು. ಆಗ ಮನು ಕುಲಕ್ಕೆ ಇದ್ದದ್ದೆ ದಾರಿ ದೇವರ ಮೊರೆ ಹೋಗೋದು. ಮನೆಯಲ್ಲೆ ಜೈಲಿನಂತೆ ಮಾಡಿ ಬದುಕಿದ್ದು. ನಮ್ಮೆಲ್ಲರ ಪ್ರಾರ್ಥನೆ ಬೇಗ ದೇಶಕ್ಕೆ ಕೋವಿಡ್ ಚುಚ್ಚುಮದ್ಧು ಬರಲಿ ಎಂಬುದು ಮಾತ್ರ ಆಗಿತ್ತು. ಈಗ ನಮ್ಮ ಹೆಮ್ಮೆಯ ಭಾರತ ದೇಶ ವ್ಯಾಕ್ಸೀನ್ ಕಂಡುಹಿಡಿದು ಅನ್ಯದೇಶಕ್ಕು ನೀಡಿ ನಮ್ಮ ದೇಶಕ್ಕು ಹಂಚಿದೆ.' ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

     Jaggesh and his wife Parimala takes Covid-19 vaccine first dose

    'ಆದರೆ ಒಂದು ವರ್ಗ ವ್ಯಾಕ್ಸೀನ್ ಮೇಲೆ ಅಪಪ್ರಚಾರ ಆರಂಭಿಸಿ ಅಮಾಯಕರು ಹೆದರುವಂತೆ ಮಾಡಿ ವಿಕೃತ ಆನಂದ ಪಡುತ್ತಿದ್ದಾರೆ. ಕೆಲವರು ಕೊರೋನ ಏನು ಮಾಡದು ಎಂದು ಮಾಸ್ಕ್ ಅಂತರ ಪಾಲಿಸದೆ 2ನೇ ಅಲೆಗೆ ಪುಷ್ಠಿ ನೀಡುತ್ತಿದ್ದಾರೆ. ನೆನಪಿಡಿ ನಮ್ಮ ಅನಾಗರೀಕ ಭಾವದಿಂದ ಮತ್ತೆ ಕೊರೋನ ಸ್ಪೋಟಗೊಂಡರೆ ಹಾಳಾಗುವುದು ನಾವೆ. ನಾವು ಸರಿಯಿದ್ದರೆ ಲೋಕ ಸರಿಯಿರುತ್ತದೆ.

     Jaggesh and his wife Parimala takes Covid-19 vaccine first dose

    ದಯಮಾಡಿ ಕೋವಿಡ್ ಲಸಿಕೆ ನೀವು ಪಡೆದು ಮನೆಯ ಹಿರಿಯರಿಗು ಕೊಡಿಸಿ ಧೈರ್ಯದಿಂದ ನೆಮ್ಮದಿಯಾಗಿ ಬಾಳಿ. ಮಾಸ್ಕ್, ಅಂತರ ಇನ್ನು 2 ವರ್ಷ ಇರಲಿ ನಿಮ್ಮ ಸುರಕ್ಷಿತೆಗಾಗಿ. ನಾನು ನನ್ನ ಮಡದಿ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ ನಾರಾಯಣ ಸ್ವಾಮಿ ಅವರ ಬಳಿ ಕೋವಿಡ್ ಚುಚ್ಚುಮದ್ಧು ಪಡೆದೆವು' ಎಂದು ಜಗ್ಗೇಶ್ ಮಾಹಿತಿ ಹಂಚಿಕೊಂಡಿದ್ದಾರೆ.

    Recommended Video

    Shiva RajKumar ಅವರ 123 ನೇ ಸಿನಿಮಾದ ಸ್ಪೆಷಾಲಿಟಿ ಏನು? | Filmibeat Kannada

    ನಟ ಪುನೀತ್ ರಾಜ್ ಕುಮಾರ್ ಅವರು ಸಹ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

    English summary
    Kannada Actor Jaggesh and his wife Parimala takes Covid-19 vaccine first dose.
    Wednesday, April 7, 2021, 16:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X