ರಮ್ಯಾ ವಿರುದ್ಧ ಸಿಡಿದೆದ್ದ ಜಗ್ಗೇಶ್-ಶಿಲ್ಪಾ ಗಣೇಶ್

ನಟಿ ರಾಜಕಾರಣಿ ರಮ್ಯಾ ಒಂದೊಂದೆ ವಿವಾದಗಳನ್ನು ಸೃಷ್ಟಿಕೊಳ್ಳುತ್ತಿರುತ್ತಾರೆ. ಕಾಂಗ್ರೇಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿರುವ ರಮ್ಯಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಣಕುತ್ತಲೆ ಇರುತ್ತಾರೆ. ಈ ಬಾರಿ ಮೋದಿ ಟೀಕಿಸಲು ಹೋಗಿ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ರಮ್ಯಾ ಮಾಡಿದ ಟ್ವೀಟ್ ನೋಡಿ ಮೋದಿ ಭಕ್ತರು ರೊಚ್ಚಿಗೆದ್ದಿದ್ದಾರೆ. ಮೋಹಕ ತಾರೆಯ ಟ್ವೀಟ್ ಗೆ ಸ್ಯಾಂಡಲ್ ವುಡ್ ನಟರು ಪ್ರತಿಕ್ರಿಯೆ ನೀಡಿದ್ದಾರೆ.

ನಟ ಬುಲೆಟ್ ಪ್ರಕಾಶ್ ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದಂತೆ ನಟ ಜಗ್ಗೇಶ್ ಮತ್ತು ಗಣೇಶ್ ಪತ್ನಿ ಶಿಲ್ಪ ಗಣೇಶ್ ಇಬ್ಬರು ರಮ್ಯಾ ವಿರುದ್ದ ಸಿಡಿದೆದ್ದಿದ್ದಾರೆ. ಬುಲೆಟ್ ಪ್ರಕಾಶ್ ಪ್ರತಿಕ್ರಿಯೆಗೆ ಬೆಂಬಲ ನೀಡಿರುವ ಜಗ್ಗೇಶ್ ತಮ್ಮದೆ ಶೈಲಿಯಲ್ಲಿ ರಮ್ಯಾ ಅವರನ್ನು ಜರಿದಿದ್ದಾರೆ. ಇತ್ತಾ ಶಿಲ್ಪ ಗಣೇಶ್ ಕೂಡ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ವಿರುದ್ಧ ಹರಿಹಾಯ್ದಿದ್ದಾರೆ.

ಸ್ಯಾಂಡಲ್ ವುಡ್ ಪದ್ಮಾವತಿ ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಬಾಲಕನ ಕಿವಿ ಹಿಂಡುತ್ತಿರುವುದನ್ನ ಹಿಟ್ಲರ್ ಗೆ ಹೋಲಿಸಿ ಒಂದು ಫೋಟೋವನ್ನು ಶೇರ್ ಮಾಡಿದ್ದರು. ಈ ಫೋಟೊ ಈಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ, ಅಲ್ಲದೆ ಕೇಸರಿ ಪಡೆಯನ್ನು ಕೆರಳಿಸಿದೆ. ಮುಂದೆ ಓದಿ..

ರಮ್ಯಾ ಮಾನಸಿಕ ವಿಕಲಚೇತನೆ

ರಮ್ಯಾ ವಿರುದ್ಧ ಸಿಟ್ಟಿಗೆದ್ದ ಬುಲೆಟ್ ಪ್ರಕಾಶ್ ಪದ್ಮಾವತಿಯನ್ನು ಸರಿಯಾಗೆ ತರಾಟೆಗೆ ತೆಗೆದುಕೊಂಡಿದ್ದರು. ಬುಲೆಟ್ ಮಾತಿಗೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ "ಸಹೋದರ ದಾರಿ ತಪ್ಪಿದ ಮಕ್ಕಳ ತಿದ್ದಬಹುದು. ದಾರಿ ತಪ್ಪಲೆ ಹುಟ್ಟಿದ ಮಕ್ಕಳ ತಿದ್ದಬಾರದು. ಕಾರಣ ದಾರಿ ತಪ್ಪಲು ಹುಟ್ಟಿದ ಮಕ್ಕಳ ಇತಿಹಾಸ ಯಕ್ಷಪ್ರಶ್ನೆ. ಯತಃ ಜನನ ತಥಃ ಜೀವನ. ಅನುಕಂಪವಿರಲಿ ಅಂಥ ಮಕ್ಕಳಿಗೆ. ಕಾರಣ ಮಾನಸಿಕ ವಿಕಲಚೇತನರು ಅಂಥ ಮಕ್ಕಳು. ಇಂತ ಮಕ್ಕಳನ್ನು ನೋಡಿ ಸಂತೋಷ ಪಡುವ ಒಂದು ವರ್ಗವಿದೆ ದೌರ್ಭಾಗ್ಯ" ಎಂದು ಹೇಳಿದ್ದಾರೆ.

ಜಗ್ಗೇಶ್ ವಿರುದ್ಧ ತಿರುಗಿ ಬಿದ್ದ ರಮ್ಯಾ ಫ್ಯಾನ್

ದಾರಿ ತಪ್ಪಿದ ಮಕ್ಕಳನ್ನು ತಿದ್ದ ಬಹುದು ಆದರೆ ತಾರಿ ತಪ್ಪಿ ಹುಟ್ಟಿದ ಮಕ್ಕಳನ್ನು ತಿದ್ದಲು ಸಾಧ್ಯವಿಲ್ಲ ಎಂದು ರಮ್ಯಾಗೆ ಟಾಂಗ್ ಕೊಟ್ಟಿದ್ದ ಜಗ್ಗೇಶ್ ಗೆ ರಮ್ಯಾ ಅಭಿಮಾನಿಯೊಬ್ಬರು ಸರಿಯಾಗೆ ಟಾಂಕ್ ಕೊಟ್ಟಿದ್ದಾರೆ. ವಿದೇಶಿ ಹುಡುಗಿಯನ್ನು ಮದುವೆಯಾದ ಜಗ್ಗೇಶ್ ಪುತ್ರನನ್ನು ಅಣಕಿಸಿದ್ದಾರೆ. ಜಗ್ಗೇಶ್ ಪುತ್ರ ಮತ್ತು ವಿದೇಶಿ ಸೊಸೆ ಫೋಟೋ ಶೇರ್ ಮಾಡುವ ಮೂಲಕ ನಿಮ್ಮ ಮಗ ಎನು ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.

'ನಿಮ್ದು ಒಂದು ಜನ್ಮ' ರೊಚ್ಚಿಗೆದ್ದ ಜಗ್ಗೇಶ್

ಸೊಸೆ ಮತ್ತು ಪುತ್ರನನ್ನು ಅಣಕಿಸಿದ ರಮ್ಯಾ ಅಭಿಮಾನಿಯನ್ನು ಟ್ವಿಟ್ಟರ್ ನಲ್ಲೆ ತರಾಟೆಗೆ ತೆಗೆದುಕೊಂಡಿದ್ದಾರೆ. "ಈ ಅದ್ಭುತ ಜೀವನ ದೇವರು ನಿಮಗು ದಯಪಾಲಿಸಲಿ. 3ಮಾಸ್ಟರ್ ಡಿಗ್ರಿ scientist ಅಪ್ಪ ಅಮ್ಮ ದೇಶ ಬಿಟ್ಟು ನನ್ನ ಮನೆಯ ಮೆಚ್ಚಿನ ಹೆಣ್ಣುಕುಲ.13ಲಕ್ಷ ಸಂಬಳ ತೆಜಿಸಿ ಮಗನ ಪ್ರೀತಿಗಾಗಿ 2ಲಕ್ಷ ಸಂಬಳಕ್ಕೆ ಬಂಧು ಅದ್ಭುತ ಮೊಮ್ಮಗನ ನೀಡಿ ಮಾವನ ಜೊತೆ ಭಾರತ್ ಮಾತಾ ಕೀ ಜೈ ಅನ್ನುತ್ತಾಳೆ. ದೇವರು ಅವಳ ಯೋಗ ಯೋಗ್ಯತೆ ನಿಮಗು ದಯಪಾಲಿಸಲಿ. ನಿಮ್ದು ಒಂದು ಜನ್ಮ" ಎಂದಿದ್ದಾರೆ.

ರಮ್ಯಾಗೆ ಟಾಂಗ್ ನೀಡಿದ ಶಿಲ್ಪ ಗಣೇಶ್

ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಶಿಲ್ಪ ಗಣೇಶ್ ಈಗ ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ರಮ್ಯಾ ರವರೇ, ಕಾಂಗ್ರೆಸ್ ಸಾಮಾಜಿಕ ಜಾಲ ತಾಣದ ಮುಖ್ಯಸ್ಥೆಯ ಜವಬ್ದಾರಿ ಏನಾಗಿರುತ್ತದೆ ಎಂಬುದನ್ನು ಮೊದಲು ತಿಳಿಯಿರಿ. ಪದೇ ಪದೇ ಈ ಫೋಟೋಶಾಪ್ ಬಳಸಿ ತಿರುಚಿದ ಚಿತ್ರ ಪ್ರಕಟಿಸಿ ಜನರ ದಾರಿ ತಪ್ಪಿಸುವ ಕೆಲಸ ಮಾಡುವುದು ನಿಮಗೆ ಶೋಭೆ ನೀಡುವುದಿಲ್ಲ. ಒಬ್ಬ ವ್ಯಕ್ತಿಗಲ್ಲದಿದ್ದರೂ ಆತನ ಸ್ಥಾನಕ್ಕೆ, ವ್ಯಕ್ತಿತ್ವಕ್ಕೆ ಗೌರವ ಕೊಡುವ ಕನಿಷ್ಠ ಸೌಜನ್ಯ ರೂಢಿಸಿಕೊಳ್ಳುವುದು ಉತ್ತಮ ಇಲ್ಲದಿದ್ದರೆ ಜನರ ದೃಷ್ಟಿಯಲ್ಲಿ ಪೂರ್ತಿ ಫೇಕ್ ಆಗಿ ಹೋಗುತ್ತೀರಿ" ಎಂದು ರಮ್ಯಾಗೆ ಬುದ್ಧಿವಾದ ಹೇಳಿದ್ದಾರೆ.

More from Filmibeat

English summary
Kannada actor Jaggesh and actor Ganesh wife, BJP member Shilpa Ganesh are reacted to Ramya statement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X