ಬಿಎನ್ ಗಂಗಾಧರ್ ಮಗನ ಮದುವೆ: ನಿರ್ಮಾಪಕನ ಋಣ ನೆನೆದ ನಟ ಜಗ್ಗೇಶ್
ಕನ್ನಡದ ಖ್ಯಾತ ನಿರ್ಮಾಪಕ ಬಿಎನ್ ಗಂಗಾಧರ್ ಅವರ ಮಗ ಶ್ರೇಯಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅಮೃತಾ ಎಂಬ ಯುವತಿಯ ಕೈ ಹಿಡಿದಿದ್ದಾರೆ. ಬೆಂಗಳೂರಿನ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಈ ವಿವಾಹ ನಡೆದಿದ್ದು, ನಂತರ ಆರತಕ್ಷತೆ ಕಾರ್ಯಕ್ರಮ ಸಹ ಆಯೋಜನೆ ಮಾಡಲಾಗಿತ್ತು.
ಗಂಗಾಧರ್ ಅವರ ಮಗನ ಮದುವೆಯಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ದಂಪತಿ, ನವರಸ ನಾಯಕ ಜಗ್ಗೇಶ್, ನಟ ಶಶಿಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಶ್ರೇಯಸ್ ಅವರ ಮದುವೆ ಕುರಿತು ಜಗ್ಗೇಶ್ ಅವರು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ಜಗ್ಗೇಶ್ ತಮ್ಮ ಕಷ್ಟದ ದಿನಗಳಲ್ಲಿ ನಿರ್ಮಾಪಕ ಗಂಗಾಧರ್ ಮಾಡಿದ ಸಹಾಯವನ್ನು ನೆನೆದಿದ್ದಾರೆ.

''ಗಾಂಧಿನಗರ ಅಲೆದು ಸಿನಿಮಾ ಸಿಗದೆ ಊಟ ಸಿಗದೆ ಇರುವಾಗ ದಿನ ಅವರ ಆಫೀಸಿನಲ್ಲಿ ನನಗೆ ಹೊಟ್ಟೆತುಂಬ ಊಟ ಹಾಕುತ್ತಿದ್ದ ಮಹನೀಯ! ನನ್ನ ಬೆಳವಣಿಗೆ ಕಂಡು ಹೆಮ್ಮೆಪಡುವ ಮೊದಲಿಗ! ನನ್ನ ಅಣ್ಣನ ಸಮಾನ! ಆತನ ಒಳ್ಳೆಯತನಕ್ಕೆ ಇಂದು ಕುಬೇರ! ಆತನ ಮಗ ನನ್ನ ಹಿರಿಮಗನ ವಯಸ್ಸಿನವ ಅವನ ಎತ್ತಿ ಆಡಿಸಿರುವೆ'' ಎಂದು ಟ್ವೀಟ್ ಮಾಡಿದ್ದಾರೆ.
* ಬಿಎನ್ ಗಂಗಾಧರ್ ಕುರಿತು
1984ರಲ್ಲಿ ತಮ್ಮ ನಿರ್ಮಾಪಕ ಜೀವನ ಆರಂಭಿಸಿದ ಗಂಗಾಧರ್ ಅವರು 35 ವರ್ಷದಿಂದ ಇಂಡಸ್ಟ್ರಿಯಲ್ಲಿದ್ದಾರೆ ಸುಮಾರು 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. 1984ರಲ್ಲಿ 'ಜಿದ್ದು' ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಯಾರಿಗೆ ಸಾಲುತ್ತೆ ಸಂಬಳ (2000), ಅಂಜದ ಗಂಡು (1988). ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ (1991), ಲೋಫರ್, ಸಚಿನ್ ತೆಂಡೂಲ್ಕರ್ ಅಲ್ಲಾ ಸೇರಿದಂತೆ ಹಲವು ಸಿನಿಮಾ ಮಾಡಿದ್ದಾರೆ.


Click it and Unblock the Notifications











