ಗುರು ರಾಯರ ಸನ್ನಿಧಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟ ಜಗ್ಗೇಶ್

ಸ್ಯಾಂಡಲ್ ವುಡ್ ನಲ್ಲಿ ಇಂದು ಇಬ್ಬರು ಸ್ಟಾರ್ ನಟರ ಹುಟ್ಟುಹಬ್ಬ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ನವರಸ ನಾಯಕ ಜಗ್ಗೇಶ್ ಅವರಿಗೆ ಇಂದು ಜನ್ಮ ದಿನದ ಸಂಭ್ರಮ. ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಇನ್ನೂ ಜಗ್ಗೇಶ್ ಈಗಾಗಲೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.

Recommended Video

ಪುನೀತ್ ರಾಜ್ ಕುಮಾರ್ ಗೆ ದರ್ಶನ್ ಮಾಡಿದ ವಿಷ್ ಹೇಗಿತ್ತು ನೀವೇ ನೋಡಿ | Darshan Wish for Puneeth

ಹೌದು, ಜಗ್ಗೇಶ್ ರಾಘವೇಂದ್ರ ಸ್ವಾಮಿಯ ಅಪಾರ ಭಕ್ತರು. ಪ್ರತಿವರ್ಷ ಹುಟ್ಟುಹಬ್ಬಕ್ಕೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಸನ್ನಿಧಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಈ ಬಾರಿ ಸಹ ನವರಸನಾಯಕ ಮಂತ್ರಾಲಯದಲ್ಲಿ ಇದ್ದಾರೆ. 57ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಜಗ್ಗೇಶ್ ಇಂದು ಗುರು ರಾಯರ ಸನ್ನಿಧಿಯಲ್ಲಿ ರಾಯರ ನೆನೆದು ಧನ್ಯರಾಗಿದ್ದಾರೆ.

ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಜಗ್ಗೇಶ್ "ನನ್ನ ಹುಟ್ಟುಹಬ್ಬದ ದಿನ ರಾಯರು ನಿದ್ರಿಸುತ್ತಿದ್ದ ಜಾಗದಲ್ಲಿ ಅವರ ಆದಿನ ನೆನೆದು ಕೂತಕ್ಷಣ ರೋಮಾಂಚನ" ಎನ್ನುತ್ತ ರಾಯರ ಸನ್ನಿಧಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Jaggesh Celebrating His 57th Birthday In Mantralaya

ಇನ್ನು ಸಾಕಷ್ಟು ಜನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ನಟ ಜಗ್ಗೇಶ್ ಗೆ ಶುಭಕೋರುತ್ತಿದ್ದಾರೆ. ಜಗ್ಗೇಶ್ ಸದ್ಯ ತೋತಾಪುರಿ ಮತ್ತು ರಂಗನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತೋತಾಪುರಿ ಈಗಾಗಲೆ ಚಿತ್ರೀಕರಣ ಮುಗಿಯುತ್ತ ಬಂದಿದೆ. ಇನ್ನೂ ರಂಗನಾಯಕ ಚಿತ್ರೀಕರಣ ಪ್ರಾರಂಭಿಸಬೇಕಿದೆ. ಜಗ್ಗೇಶ್ ಇತ್ತೀಚಿಗೆ ಕಾಳಿದಾಸ ಕನ್ನಡ ಮೇಸ್ಟ್ರಾಗಿ ಅಭಿಮಾನಿಗಳ ಮುಂದೆ ಬಂದಿದ್ದರು.

More from Filmibeat

English summary
Kannada Actor Jaggesh celebrating his 57th birthday in Mantralaya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X