For Quick Alerts
  ALLOW NOTIFICATIONS  
  For Daily Alerts

  'ವಂದೇ ಮಾತರಂ' ಗೀತೆಯಲ್ಲಿ ದರ್ಶನ್, ಯಶ್ ಯಾಕಿಲ್ಲ: ಜಗ್ಗೇಶ್ ಸ್ಪಷ್ಟನೆ!

  |

  ದೇಶದೆಲ್ಲಡೆ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಳೆ ಕಟ್ಟಿದೆ. ಅಮೃತ ಮಹೋತ್ಸವದ ಅಂಗವಾಗಿ ಮನೆ ಮನಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಇದಕ್ಕೆ ಸಿನಿ ತಾರೆಯರು ಕೈ ಜೋಡಿಸಿದ್ದು ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದರು.

  ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಸಲಾಗಿದೆ. ಮೂರು ದಿನಗಳ ಕಾಲ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಎಂಬುದಾಗಿತ್ತು. ಇದಕ್ಕೆ ಸಿನಿಮಾ ತಾರೆಯರು ಬೆಂಬಲ ಸೂಚಿಸಿದ್ದಾರೆ. ಈ ಅಭಿಯಾನಕ್ಕೆ ಮತ್ತಷ್ಟು ಶಕ್ತಿ ತುಂಬಲು 'ಹರ್ ಘರ್ ತಿರಂಗಾ' ಅನ್ನುವ ದೇಶಭಕ್ತಿ ಗೀತೆಯನ್ನು ರಚಿಸಲಾಗಿದೆ.

  Recommended Video

  ಸ್ಟಾರ್ ಆದ ಉಪೇಂದ್ರ , ದರ್ಶನ್ , ದುನಿಯಾ ವಿಜಯ್ ಸಾಥ್ ಕೊಡಲಿಲ್ಲ ಯಾಕೆ.? | Filmibeat Kannada

  ತಾರೆಯರ ಮನೆಮನಗಳಲ್ಲಿ ತ್ರಿವರ್ಣ ಧ್ವಜ: 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ತಾರೆಯರ ಸಾಥ್!ತಾರೆಯರ ಮನೆಮನಗಳಲ್ಲಿ ತ್ರಿವರ್ಣ ಧ್ವಜ: 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ತಾರೆಯರ ಸಾಥ್!

  ಕನ್ನಡದಲ್ಲಿ 'ವಂದೇ ಮಾತರಂ' ಗೀತೆಯಲ್ಲಿ ಸಿನಿಮಾ ತಾರೆಯರು ಬಾವುಟ ಹಿಡಿದು ಬಂದಿದ್ದಾರೆ. ಗಾಯಕ ವಿಜಯ್ ಪ್ರಕಾಶ್ ಹಾಡಿರುವ ಈ ಹಾಡಿನಲ್ಲಿ ಕನ್ನಡದ ಸಿನಿಮಾ ತಾರೆಯರು ಮತ್ತು ಹಲವು ಸಾಧಕರು ಇದ್ದಾರೆ. ಈ ಹಾಡಿನ ಮೂಲಕ 'ಹರ್ ಘರ್ ತಿರಂಗ' ಅಭಿಯಾನವನ್ನು ಮಾಡಲಾಗಿದೆ. ಆದರೆ ಈ ಹಾಡಿನಲ್ಲಿ ಕನ್ನಡದ ಪ್ರಮುಖ ನಟರಾದ ದರ್ಶನ್, ಯಶ್, ಉಪೇಂದ್ರ ಯಾಕಿಲ್ಲ ಎನ್ನುವ ಬಗ್ಗೆ ಚರ್ಚೆ ಹುಟ್ಟಿಕೊಂಡಿತು.

  ಕನ್ನಡ ತಾರೆಯರ 'ವಂದೇ ಮಾತರಂ'!

  ಕನ್ನಡ ತಾರೆಯರ 'ವಂದೇ ಮಾತರಂ'!

  ಕನ್ನಡದ ಕಲಾವಿರು 'ವಂದೇ ಮಾತರಂ' ಗೀತೆಯನ್ನು ವಿಶೇಷವಾಗಿ ರಚಿಸಿ ಲಾಂಚ್ ಮಾಡಿದ್ದಾರೆ. ಈ ಗೀತೆಯಲ್ಲಿ ಪ್ರಮುಖವಾಗಿ ನಟ ಜಗ್ಗೇಶ್, ರವಿಚಂದ್ರನ್, ಅನಂತ್‌ನಾಗ್, ರಮೇಶ್, ಶಿವರಾಜ್ ಕುಮಾರ್, ಸುದೀಪ್, ಗಣೇಶ್, ವಿಜಯ್ ಪ್ರಕಾಶ್, ಅರ್ಜನ್ ಸರ್ಜಾ, ಸಾಲು ಮರದ ತಿಮ್ಮಕ್ಕ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಧನಂಜಯ್, ಶ್ರೀ ಮುರುಳಿ ಸೇರಿದಂತೆ ಹಲವು ಕಲಾವಿದರು ಮತ್ತು ಸಾಧಕರು ಈ ಹಾಡಿನಲ್ಲಿದ್ದಾರೆ. ರಿಲೀಸ್ ಬಳಿಕ ಹಾಡಿಗೆ ಉತ್ತಮ ಪ್ರತಿಕ್ರಿಯೆ ಬಂತು.

  ಇದು ಅಪ್ಪು ಅಸಲಿ ಪವರ್‌: ರಿಲೀಸ್‌ಗೂ ಮೊದಲೇ 'ಲಕ್ಕಿಮ್ಯಾನ್' ಹೊಸ ದಾಖಲೆ!ಇದು ಅಪ್ಪು ಅಸಲಿ ಪವರ್‌: ರಿಲೀಸ್‌ಗೂ ಮೊದಲೇ 'ಲಕ್ಕಿಮ್ಯಾನ್' ಹೊಸ ದಾಖಲೆ!

  ಜಗ್ಗೇಶ್ ಬಗ್ಗೆ ಅಸಮಾಧಾನ!

  ಜಗ್ಗೇಶ್ ಬಗ್ಗೆ ಅಸಮಾಧಾನ!

  ಒಂದು ಕಡೆ ಈ ಹಾಡಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮತ್ತೊಂದು ಕಡೆ ಈ ಹಾಡಿನ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಈ ಹಾಡಿನಲ್ಲಿ ಕನ್ನಡದ ಪ್ರಮುಖ ನಟರಾದ ದರ್ಶನ್, ಯಶ್, ದುನಿಯಾ ವಿಜಯ್, ಉಪೇಂದ್ರ ಯಾಕಿಲ್ಲ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಈ ಹಾಡಿನ ಬಗ್ಗೆ ಸಾರಥ್ಯ ವಹಿಸಿಕೊಂಡ ನಟ ಜಗ್ಗೇಶ್ ವಿರುದ್ಧ ಅಸಮಾಧಾನದ ಕೂಗು ಕೇಳಿ ಬಂದಿದೆ. ಹಾಗಾಗಿ ಈ ಬಗ್ಗೆ ನಟ ಜಗ್ಗೇಶ್ ಸ್ಪಷ್ಟನೆ ಕೊಟ್ಟಿದ್ದಾರೆ. ವೇದಿಕೆ ಮೇಲೆ ಮಾತನಾಡಿದ ಅವರು. ಯಾಕೆ ಎಲ್ಲರೂ ಈ ಹಾಡಿನಲ್ಲಿ ಇಲ್ಲ ಎನ್ನುವುದನ್ನು ಹೇಳಿದ್ದಾರೆ.

  ಜಗ್ಗೇಶ್ ಸ್ಪಷ್ಟನೆ!

  ಜಗ್ಗೇಶ್ ಸ್ಪಷ್ಟನೆ!

  'ವಂದೇ ಮಾತರಂ' ವಿಶೇಷ ಹಾಡಿನಲ್ಲಿ ದರ್ಶನ್, ಯಶ್, ರಕ್ಷಿತ್ ಶೆಟ್ಟಿ ಯಾಕಿಲ್ಲ ಎನ್ನುವ ಬಗ್ಗೆ ಹೇಳಿದ್ದಾರೆ. " "ಈ ಹಾಡಿನ ಬಗ್ಗೆ ವಿಜಯ್ ಪ್ರಕಾಶ್ ಹಾಡೋದಷ್ಟೇ ಅಲ್ಲಾ, ಸಂಗೀತ ಕೂಡ ಮಾಡುತ್ತೇನೆ ಎಂದರು. ಈ ರೀತಿ ಹಾಡು ಮಾಡಬೇಕು ಅಂದರೆ ಎಲ್ಲಾ ನಟರು ಬರುವುದಕ್ಕೆ ಸಾಧ್ಯವೇ ಎನ್ನುವ ಪ್ರಶ್ನೆ ಬಂತು. ನಾನು ಆದಷ್ಟು ಪ್ರಯತ್ನ ಪಡುತ್ತೇನೆ ಎಂದು ಮಾತು ಕೊಟ್ಟೆ, ನಮಗೆ ಇದ್ದಿದ್ದು ಕೇವಲ 13 ದಿನ ಟೈಂ, ಅದರಲ್ಲಿ ಹಾಡು ರೆಕಾರ್ಡ್ ಆಗಬೇಕು, ಯಾರೆಲ್ಲಾ ಇರಲಿದ್ದಾರೆ ಎನ್ನುವುದು ನಿಗದಿ ಆಗಬೇಕು, ಶೂಟಿಂಗ್ ಆಗಬೇಕು."

  ಕಡಿಮೆ ಸಮಯ ಇತ್ತು!

  ಕಡಿಮೆ ಸಮಯ ಇತ್ತು!

  "ನನಗೆ ಸೆಷನ್ ಇದ್ದ ಕಾರಣ, ನಾನು 5 ದಿನಗಳ ಕಾಲ ಎಲ್ಲಿದ್ದೆ. ನಂತರ ವಿನಾಯಿತಿ ಪಡೆದು ಇಲ್ಲಿಗೆ ಬಂದೆ. ಬಂದು ಎಲ್ಲಾ ಕಲಾವಿದರಿಗೂ ನಾನೇ ವೈಯಕ್ತಿಕವಾಗಿ ಕರೆ ಮಾಡಿ ಮಾತಾಡಿದೆ. ಕಲಾವಿದರ ಬದುಕು ಯಾವಾಗಲು ಫಿಕ್ಸ್ ಆಗಿರುತ್ತೆ. ಹಲವು ಪ್ರೋಗ್ರಾಂಗಳು ಇರುತ್ತವೆ. ಚಿತ್ರರಂಗದ ಹಲವರು ನನಗೆ ಸ್ಪಂದಿಸಿ, ನಮ್ಮ ಜೊತೆ ಸೇರಿಕೊಳ್ಳುವಂತಹ ಕೆಲಸ ಮಾಡಿದರು. ದರ್ಶನ್ ಮತ್ತು ಯಶ್ ಇದ್ದಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು ಎನ್ನುವುದು ನನಗೆ ಕಾಡುತ್ತಿದೆ. ಅವರಿಗೆ ಅಪ್ರೋಚ್ ಮಾಡಿದ್ದೆವು. ಅವರು ಬರ್ತೀವಿ ಎಂದಿದ್ದರು, ಆದರೆ ಕಾರಣಾಂತರಗಳಿಂದ ಸಾಧ್ಯ ಆಗಲಿಲ್ಲ. ರಕ್ಷಿತ್ ಶೆಟ್ಟಿಯನ್ನು ಕೇಳಿದ್ದೇವು. ಅವರು ಥೈಲ್ಯಾಂಡ್‌ನಲ್ಲಿದ್ದ ಕಾರಣ ಬರಲು ಸಾಧ್ಯವಾಗಿಲ್ಲ." ಎಂದು ನಟ ಜಗ್ಗೇಶ್ ಹೇಳಿಕೊಂಡಿದ್ದಾರೆ.

  English summary
  Jaggesh Clarify About Why Darshan And Yash Not In Vande Mataram video Song, Know More,
  Wednesday, August 17, 2022, 8:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X