ಜಗ್ಗೇಶ್ ಅವರ 26 ವರ್ಷದ ಹಳೇ ಕಾಮಿಡಿ ದೃಶ್ಯ ಈಗ ವೈರಲ್
ನವರಸ ನಾಯಕ ಜಗ್ಗೇಶ್ ಅವರು ಸಿನಿಮಾದ ವಿಡಿಯೋವೊಂದು ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದೆ. ಟಾಪ್ 10ರಲ್ಲಿ ಕಾಣಿಸಿಕೊಂಡಿರುವ ಈ ದೃಶ್ಯ ನಾಲ್ಕನೇ ಸ್ಥಾನದಲ್ಲಿದೆ. ಇದು ಅಚ್ಚರಿ ಜೊತೆ ವಿಶೇಷವೂ ಎನಿಸಿಕೊಂಡಿದೆ.
ಸಾಮಾನ್ಯವಾಗಿ ಸ್ಟಾರ್ ನಟರ ಹೊಸ ಟ್ರೈಲರ್ ಅಥವಾ ಹೊಸ ಹಾಡುಗಳು ಟ್ರೆಂಡಿಂಗ್ ನಲ್ಲಿರುತ್ತೆ. ಅಥವಾ ಕೆಲವು ಟಿವಿ ಕಾರ್ಯಕ್ರಮದ ಎಪಿಸೋಡ್ ಗಳು ಟ್ರೆಂಡಿಂಗ್ ಆಗುತ್ತೆ. ಆದ್ರೆ, 26 ವರ್ಷದ ಹಳೆ ಸಿನಿಮಾದ ದೃಶ್ಯವೊಂದು ಯೂಟ್ಯೂಬ್ ನಲ್ಲಿ ಸದ್ದು ಮಾಡ್ತಿದೆ.
1993ರಲ್ಲಿ ತೆರೆಕಂಡಿದ್ದ 'ಸರ್ವರ್ ಸೋಮಣ್ಣ' ಚಿತ್ರದ ಹಾಸ್ಯ ದೃಶ್ಯವೊಂದು ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಸರ್ವರ್ ಸೋಮಣ್ಣ ಚಿತ್ರದಲ್ಲಿ ನಟ ಜಗ್ಗೇಶ್ ಸಿನಿಮಾ ನಟನಾಗಬೇಕೆಂಬ ಆಸೆಯಿಂದ ಆಡಿಷನ್ ಕೊಡ್ತಾರೆ. ಆ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಶೇಷ ಅಂದ್ರೆ ಈ ವಿಡಿಯೋ ಅಪ್ ಲೌಡ್ ಆಗಿರುವುದು ಮಾರ್ಚ್ 25, 2019. ಅಂದ್ರೆ, ಎರಡು ದಿನಗಳ ಹಿಂದೆ. ಕೇವಲ ಎರಡು ದಿನದ ಹಿಂದೆ ಅಪ್ ಲೌಡ್ ಆದ ಈ ವಿಡಿಯೋ ಈಗ ಟಾಪ್ ಹತ್ತರ ಬಳಗದಲ್ಲಿ ಕಾಣಿಸಿಕೊಂಡಿರುವುದು ಸಂಥಿಂಗ್ ಸ್ಪೆಷಲ್.
ಕೆ ವಾಸು ನಿರ್ದೇಶನ ಮಾಡಿದ್ದ ಸರ್ವರ್ ಸೋಮಣ್ಣ ಚಿತ್ರದಲ್ಲಿ ಜಗ್ಗೇಶ್, ರಂಬಾ, ಅಭಿಜಿತ್ ಅಭಿನಯಿಸಿದ್ದರು.


Click it and Unblock the Notifications











