ಯಶ್-ರಶ್ಮಿಕಾ ವಿವಾದದ ಬಗ್ಗೆ ನಟ ಜಗ್ಗೇಶ್ ಮಾಡಿದ ಕಾಮೆಂಟ್ ಇದು.!

By Harshitha

ಟಾಕ್ ಶೋ ಒಂದರಲ್ಲಿ ನಟ ಯಶ್ ಗೆ 'ಮಿಸ್ಟರ್ ಶೋ ಆಫ್' ಎಂದು ಬಿರುದು ಕೊಟ್ಟ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಯಶ್ 'ಅಣ್ತಮ್ಮಂದಿರು' ಸಿಡಿದೆದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ರಾದ್ಧಾಂತ ನೋಡಿದ ಬಳಿಕ ''ಈ ವಿಚಾರವನ್ನ ಇಲ್ಲಿಗೆ ಬಿಟ್ಟುಬಿಡಿ'' ಎಂದು ನಟ ಯಶ್ ಮನವಿ ಮಾಡಿದ್ದರು. ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ನಟಿ ರಶ್ಮಿಕಾ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಕ್ಷಮೆ ಯಾಚಿಸಿದ್ದರು.

ಇಡೀ ಘಟನೆ ಕುರಿತು ನಟ ಜಗ್ಗೇಶ್ ತಮ್ಮ ಅಭಿಪ್ರಾಯವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Jaggesh comments on Rashmika Mandanna-Yash controversy

ವಿವಾದ ಭುಗೆಲೆದ್ದು ತಮ್ಮ ಅಭಿಮಾನಿಗಳಲ್ಲಿ ನಟ ಯಶ್ ಮನವಿ ಮಾಡಿದಾಗ 'ನವರಸ ನಾಯಕ' ಜಗ್ಗೇಶ್ ಕಾಮೆಂಟ್ ಮಾಡಿದ್ದು ಹೀಗೆ...

''ಹೆಸರು ಬಂದಾಗ ಕೆಸರಿನ ಪ್ರಶ್ನೆ ಸುರಿಮಳೆ. ಉತ್ತರಿಸುವ ಜಾಣ್ಮೆಯಿದ್ದರೆ ಉತ್ತರಿಸಿ. ಇಲ್ಲ ನೋ ಕಾಮೆಂಟ್ಸ್. ಮಾತು ಮನೆ ಕಡೆಸುತ್ತೆ, ತೂತು ಒಲೆ ಕೆಡಿಸುತ್ತೆ. ಗಾದೆ ನೆನಪಾಯಿತು'' ಎಂದು ತಮ್ಮ ಟ್ವೀಟ್ ಮೂಲಕ ರಶ್ಮಿಕಾಗೆ ಜಗ್ಗೇಶ್ ಕಿವಿಮಾತು ಹೇಳಿದ್ದರು.

ಇನ್ನೂ ಇಡೀ ಘಟನೆ ಕುರಿತು ರಶ್ಮಿಕಾ ಕ್ಷಮೆ ಕೇಳಿದ್ಮೇಲೆ, ರಶ್ಮಿಕಾ ರವರ ನಡೆಯನ್ನ ಜಗ್ಗೇಶ್ ಶ್ಲಾಘಿಸಿದ್ದಾರೆ.

''ತಪ್ಪಿನ ಪ್ರಾಯಶ್ಚಿತ್ತ ಶ್ರೇಷ್ಟ ಗುಣ. ಅಪವಾದಕ್ಕೆ ಶುಭಂ. ಮುಂದಿನ ದಿನ ಕ್ಷೇಮಂ. ಸಿಗಲಿ ಸರ್ವಕಾಲದಲ್ಲೂ ಭಾಗ್ಯಂ. ಒಗ್ಗಟ್ಟಿರಲಿ ಕನ್ನಡಿಗರಲ್ಲಿ, ಅದುವೇ ಶ್ರೀರಕ್ಷಂ'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಅಂತೂ, ರಶ್ಮಿಕಾ ಕ್ಷಮೆ ಕೇಳಿದ್ಮೇಲೆ ಯಶ್ 'ಅಣ್ತಮ್ಮಂದಿರು' ಕೂಡ ಸೈಲೆಂಟ್ ಅಗಿದ್ದಾರೆ. ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟ ರಶ್ಮಿಕಾ ತಮ್ಮ ನಿಶ್ಚಿತಾರ್ಥದ ತಯಾರಿಯಲ್ಲಿ ತೊಡಗಿದ್ದಾರೆ.

More from Filmibeat

English summary
Kannada Actor Jaggesh has taken his twitter account to comment on Kannada Actress Rashmika Mandanna-Yash controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X