ಚಿತ್ರರಂಗದಲ್ಲಿ 37 ವರ್ಷ ಪೂರೈಸಿದ ನವರಸ ನಾಯಕ

ಕನ್ನಡ ನಟ ಜಗ್ಗೇಶ್ ಅವರ '8 ಎಂಎಂ' ಸಿನಿಮಾ ನಿನ್ನೆ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ಈ ಸಿನಿಮಾದ ಸಂತಸದಲ್ಲಿ ಇರುವ ಜಗ್ಗೇಶ್ ಗೆ ಈಗ ಮತ್ತೊಂದು ಸಿಹಿಯಾದ ಕ್ಷಣ ಎದುರಾಗಿದೆ.

ಜಗ್ಗೇಶ್ ಈಗ ಚಿತ್ರರಂಗದಲ್ಲಿ 37 ವರ್ಷಗಳನ್ನು ಪೂರೈಸಿದ್ದಾರೆ. ಈ ವಿಷಯವನ್ನು ಸ್ವತ ಜಗ್ಗೇಶ್ ಹಂಚಿಕೊಂಡಿದ್ದಾರೆ. ಮೊದಲು ಅವರ ಅಭಿಮಾನಿಯೊಬ್ಬರು ಈ ವಿಷಯವನ್ನು ಟ್ವಿಟ್ಟರ್ ನಲ್ಲಿ ಹಾಕಿ ಅಭಿನಂದನೆ ತಿಳಿಸಿದ್ದು, ಜಗ್ಗೇಶ್ ಆ ಸುದ್ದಿವನ್ನು ಖಚಿತ ಪಡಿಸಿದ್ದಾರೆ.

ಆ ಬಗ್ಗೆ ಟ್ವೀಟ್ ಮಾಡಿರುವ ಅವರು ''ಅಂದಿನ ಅದ್ಭುತ ಕಲಾವಿದರು ನಿರ್ದೇಶಕರ ಆಶೀರ್ವಾದ ಪಡೆದು ಬೆಳೆದವ. ರಾಜಣ್ಣ, ವಿಷ್ಣು ಸಾರ್, ಅಂಬಿ ಸಾರ್, ಪ್ರಭಣ್ಣ, ಶಂಕ್ರಣ್ಣ, ಅನಂತ್ ಸಾರ್, ವಜ್ರಣ್ಣ, ತೂಗುದೀಪಣ್ಣ, ದಿನೇಶಣ್ಣ, ಮುಸುರಿ, ಬಾಲಣ್ಣ, ಧೀರೇಂದ್ರಣ್ಣ, ದ್ವಾರ್ಕಿ ಅಣ್ಣ, ಶ್ರೀನಾಥ್ ಸಾರ್, ಪುಟ್ಟಣ್ಣ ಕಣಗಾಲ್, ಕಾಶಿನಾಥ್, ಜಯರಾಂ, ರಾಜ್ ಕಿಶೋರ್, ಸೋಮಶೇಖರ್ ನಾನೇ ಅದೃಷ್ಟವಂತ'' ಎಂದು ಬರೆದುಕೊಂಡಿದ್ದಾರೆ.

jaggesh completed 37 years in kannada film industry

37 ವರ್ಷಗಳನ್ನು ಪೂರೈಸಿದ ಸಂತಸದಲ್ಲಿರುವ ಅವರು ಈ ವೇಳೆ ತಾವು ಚಿತ್ರರಂಗದಲ್ಲಿ ಕಂಡ ಅಧ್ಬುತ ಕಲಾವಿದರ ನೆನಪು ಮಾಡಿಕೊಂಡಿದ್ದಾರೆ. 37 ವರ್ಷಗಳಲ್ಲಿ ಜಗ್ಗೇಶ್ 130ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಎರಡು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

ಸದ್ಯ, '8 ಎಂ ಎಂ' ಸಿನಿಮಾದ ನಂತರ 'ಪ್ರೀಮಿಯರ್ ಪದ್ಮಿನಿ' ಹಾಗೂ 'ತೋತಾಪುರಿ' ಚಿತ್ರಗಳಲ್ಲಿ ಅವರು ಬ್ಯುಸಿ ಇದ್ದಾರೆ.

More from Filmibeat

English summary
Actor Jaggesh completed 37 years in kannada film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X