Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರರಂಗದಲ್ಲಿ 37 ವರ್ಷ ಪೂರೈಸಿದ ನವರಸ ನಾಯಕ
ಕನ್ನಡ ನಟ ಜಗ್ಗೇಶ್ ಅವರ '8 ಎಂಎಂ' ಸಿನಿಮಾ ನಿನ್ನೆ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ಈ ಸಿನಿಮಾದ ಸಂತಸದಲ್ಲಿ ಇರುವ ಜಗ್ಗೇಶ್ ಗೆ ಈಗ ಮತ್ತೊಂದು ಸಿಹಿಯಾದ ಕ್ಷಣ ಎದುರಾಗಿದೆ.
ಜಗ್ಗೇಶ್ ಈಗ ಚಿತ್ರರಂಗದಲ್ಲಿ 37 ವರ್ಷಗಳನ್ನು ಪೂರೈಸಿದ್ದಾರೆ. ಈ ವಿಷಯವನ್ನು ಸ್ವತ ಜಗ್ಗೇಶ್ ಹಂಚಿಕೊಂಡಿದ್ದಾರೆ. ಮೊದಲು ಅವರ ಅಭಿಮಾನಿಯೊಬ್ಬರು ಈ ವಿಷಯವನ್ನು ಟ್ವಿಟ್ಟರ್ ನಲ್ಲಿ ಹಾಕಿ ಅಭಿನಂದನೆ ತಿಳಿಸಿದ್ದು, ಜಗ್ಗೇಶ್ ಆ ಸುದ್ದಿವನ್ನು ಖಚಿತ ಪಡಿಸಿದ್ದಾರೆ.
ಜಗ್ಗೇಶ್ ಅಭಿನಯದ '8ಎಂಎಂ' ಚಿತ್ರಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು.?
ಆ ಬಗ್ಗೆ ಟ್ವೀಟ್ ಮಾಡಿರುವ ಅವರು ''ಅಂದಿನ ಅದ್ಭುತ ಕಲಾವಿದರು ನಿರ್ದೇಶಕರ ಆಶೀರ್ವಾದ ಪಡೆದು ಬೆಳೆದವ. ರಾಜಣ್ಣ, ವಿಷ್ಣು ಸಾರ್, ಅಂಬಿ ಸಾರ್, ಪ್ರಭಣ್ಣ, ಶಂಕ್ರಣ್ಣ, ಅನಂತ್ ಸಾರ್, ವಜ್ರಣ್ಣ, ತೂಗುದೀಪಣ್ಣ, ದಿನೇಶಣ್ಣ, ಮುಸುರಿ, ಬಾಲಣ್ಣ, ಧೀರೇಂದ್ರಣ್ಣ, ದ್ವಾರ್ಕಿ ಅಣ್ಣ, ಶ್ರೀನಾಥ್ ಸಾರ್, ಪುಟ್ಟಣ್ಣ ಕಣಗಾಲ್, ಕಾಶಿನಾಥ್, ಜಯರಾಂ, ರಾಜ್ ಕಿಶೋರ್, ಸೋಮಶೇಖರ್ ನಾನೇ ಅದೃಷ್ಟವಂತ'' ಎಂದು ಬರೆದುಕೊಂಡಿದ್ದಾರೆ.
'8 ಎಂಎಂ' ವಿಮರ್ಶೆ : ಗನ್ ಜೊತೆ ಆಟ, ಜೂಟಾಟ, ಹೊಡೆದಾಟ
37 ವರ್ಷಗಳನ್ನು ಪೂರೈಸಿದ ಸಂತಸದಲ್ಲಿರುವ ಅವರು ಈ ವೇಳೆ ತಾವು ಚಿತ್ರರಂಗದಲ್ಲಿ ಕಂಡ ಅಧ್ಬುತ ಕಲಾವಿದರ ನೆನಪು ಮಾಡಿಕೊಂಡಿದ್ದಾರೆ. 37 ವರ್ಷಗಳಲ್ಲಿ ಜಗ್ಗೇಶ್ 130ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಎರಡು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.
ಹೌದು ಅಂದಿನ ಅದ್ಭುತ ಕಲಾವಿದರು ನಿರ್ದೇಶಕರ ಆಶೀರ್ವಾದ ಪಡೆದು ಬೆಳೆದವ!ರಾಜಣ್ಣ,ವಿಷ್ಣುಸಾರ್,ಅಂಬಿಸಾರ್,ಪ್ರಭಣ್ಣ,ಶಂಕ್ರಣ್ಣ,ಅನಂತಸಾರ್,ವಜ್ರಣ್ಣ,ತೂಗುದೀಪಣ್ಣ,ದಿನೇಶಣ್ಣ,ಮುಸುರಿ,ಬಾಲಣ್ಣ,ಧೀರೇಂದ್ರಣ್ಣ,ದ್ವಾರ್ಕಿಅಣ್ಣ,ಶ್ರೀನಾಥ್ ಸಾರ್,ಪುಟ್ಟಣ್ಣ,nsರಾವ್,ಕಾಶಿನಾಥ್ ಕಣಗಾಲ್ ಪುಟ್ಟಣ್ಣ ,kvಜಯರಾಂ,ರಾಜ್ ಕಿಶೋರ್,ಸೋಮಶೇಖರ್,ನಾನೆ ಅದೃಷ್ಟವಂತ🙏 https://t.co/DgywW5xACL
— ನವರಸನಾಯಕ ಜಗ್ಗೇಶ್ (@Jaggesh2) November 17, 2018
ಸದ್ಯ, '8 ಎಂ ಎಂ' ಸಿನಿಮಾದ ನಂತರ 'ಪ್ರೀಮಿಯರ್ ಪದ್ಮಿನಿ' ಹಾಗೂ 'ತೋತಾಪುರಿ' ಚಿತ್ರಗಳಲ್ಲಿ ಅವರು ಬ್ಯುಸಿ ಇದ್ದಾರೆ.