'ನವರಸ' ಕಲಾಸೇವೆಗೆ 40 ವರ್ಷ: ಸಾರ್ಥಕ ವೃತ್ತಿಗೆ ಸಹಕರಿಸದವರ ನೆನೆದ ಜಗ್ಗೇಶ್

ಬಹು ಭಾವ ನಟನೆಯಿಂದಾಗಿ ನವರಸ ನಾಯಕ ಎಂದು ಖ್ಯಾತಿ ಗಳಿಸಿರುವ ನಟ ಜಗ್ಗೇಶ್ ಅವರು ಕಲಾಸೇವೆಯಲ್ಲಿ ತೊಡಗಿ ಬರೋಬ್ಬರಿ 40 ವರ್ಷಗಳಾಗಿವೆ.

ಸಿನಿಮಾರಂಗದಲ್ಲಿ 40 ವರ್ಷಗಳನ್ನು ಪೂರ್ಣಗೊಳಿಸಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಜಗ್ಗೇಶ್. 1980 ರ ನವೆಂಬರ್ 17 ರಂದು ಜಗ್ಗೇಶ್ ಮೊತ್ತ ಮೊದಲ ಬಾರಿಗೆ ಸಿನಿಮಾ ರಂಗ ಪ್ರವೇಶಿಸಿದರು. ಇಂದು 2020, ನವೆಂಬರ್ 17.

ಈ ನಲವತ್ತು ವರ್ಷ ಸಿನಿಮಾ ರಂಗದಲ್ಲಿ ಸಾಗಿಬಂದುದಕ್ಕೆ ಸಹಕಾರ ನೀಡಿದವರನ್ನು, ಹಾರೈಸಿದವರನ್ನು, ಜೊತೆಗೆ ನಿಂತವರನ್ನು ನೆನೆದಿರುವ ಜಗ್ಗೇಶ್, ಹಲವು ಹಿರಿ-ಕಿರಿ ನಟರೊಂದಿಗಿನ ತಮ್ಮ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.

ಬೆಳವಣಿಗೆ ಪ್ರೋತ್ಸಾಹಿಸಿದ ಎಲ್ಲರಿಗೂ ಋಣಿ: ಜಗ್ಗೇಶ್

ಬೆಳವಣಿಗೆ ಪ್ರೋತ್ಸಾಹಿಸಿದ ಎಲ್ಲರಿಗೂ ಋಣಿ: ಜಗ್ಗೇಶ್

'ಈ ಬೆಳವಣಿಗೆಗೆ ಪ್ರೋತ್ಸಾಹಿಸಿದ , ನಿರ್ದೇಶಕ ನಿರ್ಮಾಪಕ ಭುಜತಟ್ಟಿದ ಅಂದಿನ ನನ್ನ ಕಲಾಕುಟುಂಬ, ಮಾಧ್ಯಮ ಕನ್ನಡದ ಮನಸ್ಸುಗಳು! ಅಪಮಾನಿಸಿದ ಸ್ನೇಹಕ್ಕೆ,ಗೆಲ್ಲುವೆ ಹೋಗು ಕರಿಯ ಎಂದ ಹರಸಿದ ಅಮ್ಮ,ಜೊತೆನಿಂತ ಪರಿಮಳ,ಕೋಮಲ್ ರಾಯರದಯೆಗೆ ಆಜನ್ಮ ಋಣಿ' ಎಂದಿದ್ದಾರೆ ನಟ ಜಗ್ಗೇಶ್.

ಪ್ರಯತ್ನ ಮತ್ತು ಪರಿಶ್ರಮದಿಂದ ಮೇಲೆ ಬಂದವರು

ಪ್ರಯತ್ನ ಮತ್ತು ಪರಿಶ್ರಮದಿಂದ ಮೇಲೆ ಬಂದವರು

ಜಗ್ಗೇಶ್ ಅವರೇ ಈ ಹಿಂದೆ ಹೇಳಿರುವಂತೆ ನಟನಾಗಲು ಅವರು ಬಹುಪಡಿಪಾಟಲು ಪಟ್ಟವರು. ಆದರೆ ಛಲ ಬಿಡದೆ ಏಕ ಗುರಿಹೊಂದಿ ಸತತ ಪ್ರಯತ್ನ ಹಾಗೂ ಪರಿಶ್ರಮದ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಬೆಳೆಯುತ್ತಾ ಈಗ 4 ದಶಕಗಳನ್ನು ಪೂರೈಸಿದ್ದಾರೆ.

ನಿರ್ದೇಶನ-ನಿರ್ಮಾಣದ ಅನುಭವವೂ ಇದೆ

ನಿರ್ದೇಶನ-ನಿರ್ಮಾಣದ ಅನುಭವವೂ ಇದೆ

ನಿರ್ಮಾಪಕ ಹಾಗೂ ನಿರ್ದೇಶನದಲ್ಲೂ ಕೈಯಾಡಿಸಿರುವ ಜಗ್ಗೇಶ್, ತಮ್ಮದೇ ನಟನೆಯ ಮೇಕಪ್ ಸಿನಿಮಾವನ್ನು ನಿರ್ಮಾಣ ಮಾಡಿದ್ದರೆ, ಮಗನಿಗಾಗಿ 'ಗುರು' ಸಿನಿಮಾ ನಿರ್ದೇಶಿಸಿದರು. ಜೊತೆಗೆ ತಮ್ಮದೇ ನಟನೆಯ 'ಮೇಲುಕೋಟೆ ಮಂಜ' ಸಿನಿಮಾವನ್ನು ಸಹ ನಿರ್ದೇಶಿಸಿದ್ದಾರೆ.

Recommended Video

ವಿರೋಧಿಸುವವರಿಗೆ ಟಾಂಗ್ ಕೊಟ್ಟ Rachita Ram | Filmibeat Kannada
ಬೇಡಿಕೆ ಉಳಿಸಿಕೊಂಡಿದ್ದಾರೆ ನಟ ಜಗ್ಗೇಶ್

ಬೇಡಿಕೆ ಉಳಿಸಿಕೊಂಡಿದ್ದಾರೆ ನಟ ಜಗ್ಗೇಶ್

ಜಗ್ಗೇಶ್, ತಮ್ಮ ಈ ನಲವತ್ತು ವರ್ಷದ ಸಿನಿಪಯಣದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಪ್ರಸ್ತುತ ರಾಜಕೀಯದಲ್ಲೂ ಸಿನಿಮಾರಂಗದಲ್ಲಿಯೂ ಏಕಕಾಲಕ್ಕೆ ಪಯಣ ಸಾಗಿಸುತ್ತಿದ್ದಾರೆ. 40 ವರ್ಷದ ನಂತರ ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ ನಟ ಜಗ್ಗೇಶ್.

More from Filmibeat

English summary
Actor Jaggesh completed 40 years in Kannada film industry as an actor. He thanked all who supported him in this journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X