twitter
    For Quick Alerts
    ALLOW NOTIFICATIONS  
    For Daily Alerts

    ಅಂಬರೀಶ್ - ಜಗ್ಗೇಶ್ ನಡುವಿನ ಕೊನೆಯ ಭೇಟಿ, ಕೊನೆಯ ಮಾತು

    |

    Recommended Video

    Ambareesh : ಅಂಬರೀಶ್ ಜೊತೆ ಕಳೆದ ದಿನಗಳನ್ನ ನೆನಪಿಸಿಕೊಂಡ ಜಗ್ಗೇಶ್ | FILMIBEAT KANNADA

    ನಟ ಅಂಬರೀಶ್ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗ ಕಣ್ಣೀರು ಹಾಕುತ್ತಿದೆ. ಅಂಬಿ ವಿಧಿವಶರಾದ ವಿಷಯ ತಿಳಿದ ತಕ್ಷಣ ಅವರನ್ನು ಕಾಣಲು ಅವರ ಆತ್ಮೀಯ ಕಲಾವಿದ ಬಳಗ ಆಸ್ಪತ್ರೆಯ ಬಳಿ ಓಡೋಡಿ ಬಂದಿತ್ತು.

    ನಟ ಜಗ್ಗೇಶ್ ಕೂಡ ಅಂಬರೀಶ್ ರನ್ನು ಕಳೆದುಕೊಂಡ ದುಃಖವನ್ನು ಇದೀಗ ಹೇಳಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ಅಂಬರೀಶ್ ಜೊತೆಗೆ ಕಳೆದ ನೂರು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿಯೂ ಅಂಬರೀಶ್ ರನ್ನು ಕೊನೆಯ ಬಾರಿ ಭೇಟಿ ಮಾಡಿದ ಸನ್ನಿವೇಶ ಹೇಗಿತ್ತು ಎಂಬುದನ್ನು ಜಗ್ಗೇಶ್ ಹೇಳಿಕೊಂಡಿದ್ದಾರೆ.

    ಬೆಂಗಳೂರಿಗೆ ಬಂದ ಡಿ ಬಾಸ್: 'ಅಂಬಿ' ದರ್ಶನಕ್ಕೆ ದಾಸ ಪಟ್ಟ ಕಷ್ಟ ಯಾರಿಗೂ ಗೊತ್ತಿಲ್ಲ.! ಬೆಂಗಳೂರಿಗೆ ಬಂದ ಡಿ ಬಾಸ್: 'ಅಂಬಿ' ದರ್ಶನಕ್ಕೆ ದಾಸ ಪಟ್ಟ ಕಷ್ಟ ಯಾರಿಗೂ ಗೊತ್ತಿಲ್ಲ.!

    ಇನ್ನು, ಅಂಬರೀಶ್ ಮೃತದೇಹದ ದರ್ಶನ ಪಡೆಯಲು ಜಗ್ಗೇಶ್ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಾಯುತ್ತಿದ್ದಾರೆ. ಈ ವೇಳೆ ಮಾತನಾಡಿರುವ ಅವರು ಅಂಬಿ ಜೊತೆಗೆ ಕಳೆದ ದಿನವನ್ನು ನೆನೆಪು ಮಾಡಿಕೊಂಡಿದ್ದಾರೆ. ಮುಂದೆ ಓದಿ..

    ಅವರ ಜೊತೆ ನಾನು, ನನ್ನ ಮಗ ನಟಿಸಿದ್ದೇವೆ

    ಅವರ ಜೊತೆ ನಾನು, ನನ್ನ ಮಗ ನಟಿಸಿದ್ದೇವೆ

    ''ನನ್ನ ಮಗ ಅವರ ಜೊತೆಗೆ ನಟನೆ ಮಾಡಿದ್ದಾನೆ. ಆಗಲೇ ನಮ್ಮ ಸ್ನೇಹ ಶುರು ಆಗಿತ್ತು. ಅಲ್ಲಿಂದ ನಮ್ಮ ಆತ್ಮೀಯತೆ ಪ್ರಾರಂಭವಾಯ್ತು. ಬಳಿಕ 'ರೌಡಿ ಎಂ ಎಲ್ ಎ' ಚಿತ್ರದಲ್ಲಿ ನಾನು ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿತ್ತು. ಆ ಚಿತ್ರದಲ್ಲಿ ನನ್ನ ಸಂಭಾವನೆಯನ್ನು ಕೂಡ ಅವರೇ ಜಾಸ್ತಿ ಮಾಡಿಸಿದ್ದರು.'' - ಜಗ್ಗೇಶ್, ನಟ

    ಅಂತಿಮ ದರ್ಶನದ ವೇಳೆ ಕಾಡುತ್ತಿರುವ ಸೆಲ್ಫಿ ಗೀಳು, ರಮ್ಯಾ ಮೇಡಂ ಗೈರು.!

    ಕಲಾವಿದರ ಸಂಘದಲ್ಲಿ ಕೊನೆಯ ಭೇಟಿ

    ಕಲಾವಿದರ ಸಂಘದಲ್ಲಿ ಕೊನೆಯ ಭೇಟಿ

    ''ಕೊನೆಯ ಬಾರಿ ಅವರನ್ನು ಕಲಾವಿದರ ಸಂಘದಲ್ಲಿ ಭೇಟಿ ಮಾಡಿದ್ದೆ. ಬೇರೆವರಿಗೆ ಊಟ ಹಾಕಿ, ಎಲ್ಲ ರೀತಿಯಲ್ಲಿ ನೋಡಿಕೊಂಡು ಆನಂದ ಪಡುವ ಆತ್ಮ ಅವರದ್ದು. ನಾನು ಹೋಗುತ್ತೇನೆ ಎಂದರೂ ಬಿಡದೇ ಅವತ್ತು ಊಟ ಮಾಡಿಸಿದರು. ಭಾವನಾತ್ಮಕವಾಗಿ ಮಾತನಾಡಿದರು.'' - ಜಗ್ಗೇಶ್, ನಟ

    9 ಗಂಟೆಗೆ ಅಂಬಿ ಮೃತ ದೇಹ ಬೆಂಗಳೂರಿಗೆ : ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆ 9 ಗಂಟೆಗೆ ಅಂಬಿ ಮೃತ ದೇಹ ಬೆಂಗಳೂರಿಗೆ : ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆ

    ಆ ದಿನ ಜಗ್ಗೇಶ್ ಹೇಳಿದ ಮಾತು

    ಆ ದಿನ ಜಗ್ಗೇಶ್ ಹೇಳಿದ ಮಾತು

    ''ಆ ದಿನ ಅವರಿಗೆ ಈ ರೀತಿ ಹೇಳಿದ್ದೆ, ರಾಜಕುಮಾರ್ ಅವರ ಕನಸನ್ನು ನೀನು ಸಹಕಾರ ಮಾಡಿದೆ. ಇಂಡಸ್ಟ್ರಿಯ ವತಿಯಿಂದ ತುಂಬ ಧನ್ಯವಾದ ಹೇಳುತ್ತೇನೆ. ಕಲಾವಿದರೆಲ್ಲ ಒಂದೇ ನೆರಳಿನಲ್ಲಿ ಇರಬೇಕು ಎನ್ನುವುದು ರಾಜ್ ಕುಮಾರ್ ಅವರ ದೊಡ್ಡ ಕನಸಾಗಿತ್ತು. ಅದನ್ನು ಯಾರಿಗೂ ಮಾಡಲು ಆಗಲಿಲ್ಲ.'' - ಜಗ್ಗೇಶ್, ನಟ

    ಸರ್ಕಾರದ ಜೊತೆಗೆ ಜಗಳ ಮಾಡಿದ್ದರು

    ಸರ್ಕಾರದ ಜೊತೆಗೆ ಜಗಳ ಮಾಡಿದ್ದರು

    ''ಕಲಾವಿದರ ಸಂಘದ ಜಾಗ ಹೊರಟು ಹೋಗಿತ್ತು. ಯಾರಿಗೂ ಏನೂ ಮಾಡಲು ಆಗಲಿಲ್ಲ. ಆದರೆ, ಸರ್ಕಾರದ ಜೊತೆಗೆ ಜಗಳ ಮಾಡಿ ಈ ಕೆಲಸ ಅಂಬರೀಶ್ ಮಾಡಿಸಿದರು. ಅವರ ಬಳಿ ಪಕ್ಷ ಇರಲಿಲ್ಲ. ಪ್ರೀತಿ ಮಾತ್ರ ಇತ್ತು. ನಾನು ಕೂಡ ಅವರ ಜೊತೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ. ಅವರ ಆ ಸಂತೋಷ ನನಗೆ ತಿಳಿದಿದೆ.'' - ಜಗ್ಗೇಶ್, ನಟ

    ಇಷ್ಟು ಬೇಗ ಸಾಯಬಾರದಿತ್ತು

    ಇಷ್ಟು ಬೇಗ ಸಾಯಬಾರದಿತ್ತು

    ''ತುಂಬ ನೋವಾಗುತ್ತದೆ. ನಾನು ಕೂಡ ಅವರ ಒಬ್ಬ ಅಭಿಮಾನಿ. ಸಾವು ಎಲ್ಲರಿಗೆ ಅನಿವಾರ್ಯ. ನನಗೂ ಸಾವು ಬರುತ್ತದೆ. ಅವರು ಇನ್ನೂ ಹತ್ತು, ಹದಿನೈದು ವರ್ಷ ಇರಬೇಕಿತ್ತು. ಅದು ಎಲ್ಲರ ಆಸೆ ಕೂಡ ಇತ್ತು.'' - ಜಗ್ಗೇಶ್, ನಟ

    English summary
    Kannada actor Jaggesh condolences for actor Ambareesh death. Kannada Actor, Former Minister, Congress Politician Ambareesh (66) passed away on November 24th in Bengaluru.
    Monday, November 26, 2018, 10:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X