twitter
    For Quick Alerts
    ALLOW NOTIFICATIONS  
    For Daily Alerts

    ಇಂದಿನ ಮೆಜೆಸ್ಟಿಕ್, ಅಂದು ಹಿರಣಯ್ಯ ಮಿತ್ರ ಮಂಡಳಿ ಬಿಡಾರ!

    |

    ಮಾಸ್ಟರ್ ಹಿರಣ್ಣಯ್ಯ ವೇದಿಕೆ ಏರಿ ಮಾತಾಡುತ್ತಿದ್ದರೆ, ಪ್ರೇಕ್ಷಕರು ಅತ್ತ ಇತ್ತ ನೋಡದೆ ಅವರ ಮಾತನ್ನೇ ಕೇಳುತ್ತಿದ್ದರು. ತಮ್ಮ ನಾಟಕಗಳ ಡೈಲಾಗ್ ಮೂಲಕ ರಾಜಕಾರಣಿಗಳಿಗೆ ಚಾಟಿ ಏಟು ನೀಡುತ್ತಿದ್ದ ಮಹಾನ್ ಕಲಾವಿದ ಇಂದು ಮರೆಯಾಗಿದ್ದಾರೆ.

    ಅಪ್ಪನಿಗೆ ಚಾಲೆಂಜ್ ಹಾಕಿ ರಂಗಭೂಮಿಯ 'ಮಾಸ್ಟರ್' ಆದ ಹಿರಣ್ಣಯ್ಯ ಅಪ್ಪನಿಗೆ ಚಾಲೆಂಜ್ ಹಾಕಿ ರಂಗಭೂಮಿಯ 'ಮಾಸ್ಟರ್' ಆದ ಹಿರಣ್ಣಯ್ಯ

    ಮಾಸ್ಟರ್ ಹಿರಣ್ಣಯ್ಯ ಅವರ ಬಗ್ಗೆ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಅಂದಿನ ದಿನದ ಹಿರಣಯ್ಯ ಮಿತ್ರ ಮಂಡಳಿಯ ಬಗ್ಗೆ ಬರೆದುಕೊಂಡಿದ್ದಾರೆ. ಜಗ್ಗೇಶ್ ಕೂಡ ಖುಷಿಯಿಂದ ಹಿರಣ್ಣಯ್ಯ ಅವರ ನಾಟಕಗಳನ್ನು ನೋಡುತ್ತಿದ್ದರಂತೆ.

    jaggesh condolences for actor master hirannaiah death

    ''ಇಂದಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಅಂದು ಹಿರಣಯ್ಯ ಮಿತ್ರ ಮಂಡಳಿ ಬಿಡಾರ!. 1976ರಲ್ಲಿ ಇವರ ನಾಟಕ ನೋಡಲು ಅಪ್ಪ ಅಮ್ಮನ ಜೊತೆ ಹೋಗುತ್ತಿದ್ದೆ!. ನಮ್ಮ ಸೋದರ ಮಾವ ರಂಗನಟ Tm ಭಧ್ರಾಚಲ ನಾಟಕದ ಟಿಕೆಟ್ ಕೊಡುತ್ತಿದ್ದರು!. ಹಳ್ಳಿಯಂತಿದ್ದ ಆ ದಿನಗಳ ಬಾಲ್ಯ ನೆನಪಾಯಿತು!. ಇವರ ದೇವದಾಸಿ ಚಿತ್ರದ ಹಾಡು ಹಾಡಿ 9ನೇ ತರಗತಿಯಲ್ಲಿ ಪಾರಿತೋಷಕ ಪಡೆದಿದ್ದೆ ಓಂ ಶಾಂತಿ.'' ಎಂದು ಬರೆದುಕೊಂಡಿದ್ದಾರೆ.

    ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ನಟ ಸುದೀಪ್ ಸಂತಾಪ ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ನಟ ಸುದೀಪ್ ಸಂತಾಪ

    ನಟ ಜಗ್ಗೇಶ್ ಜೊತೆಗೆ, ಸುದೀಪ್, ದರ್ಶನ್, ಹಿರಿಯ ನಟ ದತ್ತಣ್ಣ, ಶಿವರಾಂ, ನಿರ್ದೇಶಕ ಟಿ ಎನ್ ಸೀತಾ ರಾಮ್ ಸೇರಿದಂತೆ ಸಾಕಷ್ಟು ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಮಾಸ್ಟರ್ ಹಿರಿಯಣ್ಣಯ್ಯ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು 10 ಗಂಟೆ ಸುಮಾರಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬನಶಂಕರಿಯ ಅವರ ನಿವಾಸದಲ್ಲಿ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದೆ.

    English summary
    Actor Jaggesh condolences for popular movie theater actor Master Hirannaiah. Master Hirannaiah passes away today (May 2th).
    Thursday, May 2, 2019, 12:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X