ಗೆಳೆಯನ ಅಗಲಿಕೆಗೆ ನೋವಿನ ವಿದಾಯ ಹೇಳಿದ ಜಗ್ಗೇಶ್
ಕನ್ನಡದ ಖ್ಯಾತ ನಿರ್ದೇಶಕ ಎ ಆರ್ ಬಾಬು ನಿಧನ ಹೊಂದಿದ್ದಾರೆ. ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದ ಈ ನಿರ್ದೇಶಕ ಈಗ ಬಾರದ ಲೋಕಕ್ಕೆ ಹೋಗಿದ್ದಾರೆ.
ಎ ಆರ್ ಬಾಬು ಅವರ ನಿಧನಕ್ಕೆ ನಟ ಜಗ್ಗೇಶ್ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ''ನನ್ನ ಆತ್ಮೀಯ ಸಹೋದರ ನಿರ್ದೇಶಕ #ARbabu ಅಲ್ಲಾಹುವಿನ ಪಾದಸೇರಿದ.. ''ಯಾರದೋ ದುಡ್ಡು", ಕಾಸಿದ್ದವನೆ ಬಾಸ್" ನನ್ನೊಟಿಗೆ ಕಾರ್ಯ ಮಾಡಿದ್ದ. ನಿರ್ದೇಶಕ ಪ್ರೇಮ್ ನ ಪರಿಚಯಿಸಿದ ಮಹನೀಯ.. ನಮ್ಮಿಬ್ಬರ ಗೆಳೆತನ 30ವರ್ಷದ್ದು.. ನೋವಿನಿಂದ ವಿದಾಯ ಮಿತ್ರನಿಗೆ.. ನಿನ್ನ ಆತ್ಮ ಅಲ್ಲಾಹುವಿನಲ್ಲಿ ಲೀನವಾಗಲಿ ಗೆಳೆಯ..I miss your frindship.. RIP'' ಎಂದು ಬರೆದುಕೊಂಡಿದ್ದಾರೆ.

ಎ ಆರ್ ಬಾಬು 'ಕಾಸಿದ್ದವನೇ ಬಾಸ್', 'ಯಾರದ್ದೋ ದುಡ್ಡು ಯಲಮ್ಮನ ಜಾತ್ರೆ' ಸಿನಿಮಾಗಳನ್ನ ಜಗ್ಗೇಶ್ ಜೊತೆಗೆ ಮಾಡಿದ್ದರು. ಉಳಿದಂತೆ, 'ಹಲೋ ಯಮ', 'ಆಂಧ್ರ ಹೆಂಡತಿ', 'ಆಗೋದೆಲ್ಲ ಒಳ್ಳೆದಕ್ಕೆ', 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ', 'ಸಪ್ನೊಂಕಿ ರಾಣಿ' ಸೇರಿದಂತೆ ಅನೇಕ ಚಿತ್ರಗಳಿಗೆ ಇವರು ಆಕ್ಷನ್ ಕಟ್ ಹೇಳಿದ್ದರು.
ಅನೇಕ ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 8:50ರ ಸುಮಾರಿಗೆ ಕೊನೆಯೂಸಿರೆಳೆದಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.


Click it and Unblock the Notifications











