twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಫ್ಯಾನ್ಸ್-ಜಗ್ಗೇಶ್ ವಿವಾದ ಸುಖಾಂತ್ಯ: ಬಿರುಗಾಳಿ ಎಬ್ಬಿಸಿದ 'ಆಡಿಯೋ ಕ್ಲಿಪ್' ಸುತ್ತಾ ಏನಾಯ್ತು?

    |

    'ಆಡಿಯೋ ಕ್ಲಿಪ್ ವಿಚಾರ ಮೊದಲೇ ತಿಳಿದಿತ್ತು, ನಾನು ತಲೆಗೆ ಹಾಕಿಕೊಂಡಿಲ್ಲ, ಅವತ್ತು ಜಗ್ಗೇಶ್ ಸರ್‌ಗೆ ಕಾಲ್ ಪ್ರಯತ್ನಿಸಿದ್ದ ಸಿಗಲಿಲ್ಲ, ಆಮೇಲೆ ಏನಾಯ್ತು ನನಗೆ ಗೊತ್ತಿಲ್ಲ. ಜಗ್ಗೇಶ್ ಸರ್ ನಮ್ಮ ಸೀನಿಯರ್, ನಮ್ಮ ಸೆಲೆಬ್ರಿಟಿಗಳಿಂದ ಅವರಿಗೆ ನೋವಾಗಿದ್ರೆ ನಾನು ಕ್ಷಮೆ ಕೇಳ್ತೀನಿ'' ಎಂದು ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ದರ್ಶನ್ ಹೇಳುವ ಮೂಲಕ ಭುಗಿಲೆದ್ದಿದ್ದ ವಿವಾದವನ್ನು ತಣ್ಣಗಾಗಿಸಿದರು.

    ದರ್ಶನ್ ಅವರು ಈ ಮಾತುಗಳನ್ನು ಕೇಳಿದ ಜಗ್ಗೇಶ್ ಸಹ ಟ್ವಿಟ್ಟರ್ ಮೂಲಕ ದಾಸನಿಗೆ ಧನ್ಯವಾದ ಹೇಳುವುದರೊಂದಿಗೆ ಮುರಿದು ಬೀಳುತ್ತಿದ್ದ ಸ್ನೇಹವನ್ನು ಉಳಿಸಿಕೊಳ್ಳುವ ಸೂಚನೆ ನೀಡಿದರು.

    ಅಭಿಮಾನಿಗಳ ಪರವಾಗಿ ಜಗ್ಗೇಶ್ ಕ್ಷಮೆ ಕೇಳಿದ ದರ್ಶನ್ಅಭಿಮಾನಿಗಳ ಪರವಾಗಿ ಜಗ್ಗೇಶ್ ಕ್ಷಮೆ ಕೇಳಿದ ದರ್ಶನ್

    ''ಸಮಯ ಸಂದರ್ಭ ವಿಷಘಳಿಗೆ ಪ್ರೀತಿ ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯ. ವೈಶಾಲ್ಯತೆ ಚಿಂತನೆ ಹೃದಯ ಇದ್ದಾಗ ಅಪನಂಬಿಕೆ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ. ಕನ್ನಡಕ್ಕೆ ಒಗ್ಗಟ್ಟಿರಲಿ. ಧನ್ಯವಾದ ದರ್ಶನ್. ಮನಸ್ಸು ಹಗುರವಾಯಿತು. ಇನ್ನೆಂದು ಇಂಥ ದಿನ ಬರದಿರಲಿ'' ಎಂದು ಟ್ವೀಟ್ ಮಾಡಿದರು. ಇಲ್ಲಿಗೆ ಕಳೆದ ನಾಲ್ಕೈದು ದಿನಗಳಿಂದ ಸ್ಯಾಂಡಲ್‌ವುಡ್‌ ಬಿರುಗಾಳಿ ಎಬ್ಬಿಸಿದ್ದ ಆಡಿಯೋ ಕ್ಲಿಪ್ ವಿವಾದ ಸುಖಾಂತ್ಯ ಕಂಡಿತು. ಮುಂದೆ ಓದಿ....

    ಆಡಿಯೋ ಲೀಕ್ ಮಾಡಿ ಸಾಧಿಸಿದ್ದು ಏನು?

    ಆಡಿಯೋ ಲೀಕ್ ಮಾಡಿ ಸಾಧಿಸಿದ್ದು ಏನು?

    'ಇನ್ಸ್‌ಪೆಕ್ಟರ್ ವಿಕ್ರಂ' ಸಿನಿಮಾದ ಬಿಡುಗಡೆ ಸಮಯದಲ್ಲಿ ಈ ಆಡಿಯೋ ಕ್ಲಿಪ್ ಸೋರಿಕೆಯಾಗಿದೆ. ದರ್ಶನ್ ತಿರುಪತಿಗೆ ಹೋಗಿ ಬಂದ ಮೇಲೆ ಆಡಿಯೋ ಕ್ಲಿಪ್ ವಿಚಾರ ಕಿವಿಗೆ ಬಿದ್ದಿದೆ. ಹೆಚ್ಚು ತಲೆಕೆಡಿಸಿಕೊಳ್ಳದ ದಾಸ ಸುಮ್ಮನಾಗಿಬಿಟ್ಟಿದ್ದಾರೆ. ಅದ್ಯಾವಾಗ ಮಾಧ್ಯಮಗಳಲ್ಲಿ ಹಾಗೂ ಸಮಾಜಿಕ ಮಾಧ್ಯಮದಲ್ಲಿ ಈ ವಿಚಾರ ಪ್ರಸಾರ ಆಯಿತು ದರ್ಶನ್ ಅಭಿಮಾನಿಗಳು ಜಗ್ಗೇಶ್ ವಿರುದ್ಧ ಹರಿಹಾಯ್ದರು. ಜಗ್ಗೇಶ್ ಅವಕಾಶವಾದಿ, ಹಿಂದೆ ಒಂದು ರೀತಿ, ಮುಂದೆ ಒಂದು ರೀತಿ ಎಂದು ಸಾಮಾಜಿಕ ಜಾಲತಾಣದಲ್ಲಿ ತಿರುಗಿಬಿದ್ದರು.

    ಆ ಘಟನೆಯನ್ನು ದರ್ಶನ್ ನೆನಪಿಸಿಕೊಳ್ಳಬೇಕು: ಜಗ್ಗೇಶ್ ಬೇಸರದ ನುಡಿಆ ಘಟನೆಯನ್ನು ದರ್ಶನ್ ನೆನಪಿಸಿಕೊಳ್ಳಬೇಕು: ಜಗ್ಗೇಶ್ ಬೇಸರದ ನುಡಿ

    ದರ್ಶನ್ ಅಭಿಮಾನಿಗಳಿಂದ ಮುತ್ತಿಗೆ

    ದರ್ಶನ್ ಅಭಿಮಾನಿಗಳಿಂದ ಮುತ್ತಿಗೆ

    ಮೈಸೂರಿನಲ್ಲಿ ಜಗ್ಗೇಶ್ ಚಿತ್ರೀಕರಣ ಮಾಡ್ತಿದ್ದ ಸೆಟ್‌ಗೆ ಹೋಗಿ ಡಿ ಫ್ಯಾನ್ಸ್ ಮುತ್ತಿಗೆ ಹಾಕಿದರು. ಹಿರಿಯ ಕಲಾವಿದ ಎನ್ನುವುದನ್ನು ಲೆಕ್ಕಿಸಿದೆ ಜಗ್ಗೇಶ್ ಅವರನ್ನು ಸುತ್ತುವರೆದು ಬಹಿರಂಗವಾಗಿ ಕ್ಷಮೆ ಕೇಳುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ನಡೆದುಕೊಂಡ ರೀತಿಗೆ ವಿರೋಧ ವ್ಯಕ್ತವಾಯಿತು. ಸೆಟ್‌ಗೆ ಬಂದಿದ್ದ ಡಿ ಫ್ಯಾನ್ಸ್‌ಗೆ ಜಗ್ಗೇಶ್ ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ ಅದು ವ್ಯರ್ಥವಾಯಿತು.

    ಆಕ್ರೋಶ ಹೊರಹಾಕಿದ ಜಗ್ಗೇಶ್

    ಆಕ್ರೋಶ ಹೊರಹಾಕಿದ ಜಗ್ಗೇಶ್

    ಮರುದಿನ ಬೆಳಗ್ಗೆ ಜಗ್ಗೇಶ್ ಟ್ವಿಟ್ಟರ್‌ ಲೈವ್‌ನಲ್ಲಿ ತೀವ್ರ ಆಕ್ರೋಶ ಭರಿತವಾಗಿ ಮಾತನಾಡಿದರು. ಚಿತ್ರರಂಗದಲ್ಲಿ ನಡೆಯುತ್ತಿರುವ ಸ್ಟಾರ್‌ಡಂ, ರೌಡಿಸಂ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನನಗೂ ಅಭಿಮಾನಿಗಳ ಸಂಘ ಇದೆ, ನನ್ನೊಂದಿಗೆ ಜನ ಇದ್ದಾರೆ ಎಂದು ತಿರುಗಿ ಬಿದ್ದರು. ಆರ್‌ಎಸ್‌ಎಸ್‌, ಒಕ್ಕಲಿಗ ಸಮುದಾಯದ ಹೆಸರು ಎಳೆದು ತಂದರು. ಡಾ ರಾಜ್, ವಿಷ್ಣು, ಅಂಬಿ ಹೆಸರು ಚರ್ಚಿಸಿದರು. ಇಲ್ಲಿಂದು ಈ ವಿವಾದ ಮತ್ತಷ್ಟು ತೀವ್ರತೆ ಪಡೆದುಕೊಂಡಿತ್ತು.

    ಫಿಲಂ ಚೇಂಬರ್‌ ಮುಂದೆ ಪ್ರತಿಭಟನೆ

    ಫಿಲಂ ಚೇಂಬರ್‌ ಮುಂದೆ ಪ್ರತಿಭಟನೆ

    ಜಗ್ಗೇಶ್ ಚಿತ್ರೀಕರಣ ಮಾಡ್ತಿದ್ದ ವೇಳೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದು ತಪ್ಪು, ಅವರ ವಿರುದ್ಧ ಕ್ರಮ ಜರುಗಿಸಬೇಕು, ಹಿರಿಯ ಕಲಾವಿದರಿಗೆ ಗೌರವ ಕೊಡಬೇಕು ಎಂದು ಒತ್ತಾಯಿಸಿ ಜಗ್ಗೇಶ್ ಅಭಿಮಾನಿಗಳು ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಿಂದ ಮತ್ತೆ ಈ ಬೆಳವಣಿಗೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಾ ಎಂಬ ಆತಂಕ ಕಾಡಿತ್ತು.

    ಪ್ರೆಸ್‌ಮೀಟ್‌ನಲ್ಲಿ ಜಗ್ಗೇಶ್ ಟೀಕೆ

    ಪ್ರೆಸ್‌ಮೀಟ್‌ನಲ್ಲಿ ಜಗ್ಗೇಶ್ ಟೀಕೆ

    ಆಡಿಯೋ ಕ್ಲಿಪ್ ವಿವಾದ ಶುರುವಾದ ಕ್ಷಣದಿಂದ ನೇರವಾಗಿ ದರ್ಶನ್ ಅವರನ್ನು ಉದ್ದೇಶಿಸಿ ಜಗ್ಗೇಶ್ ಮಾತನಾಡಲೇ ಇಲ್ಲ. ಸೆಟ್‌ಗೆ ಬಂದಿದ್ದ ದರ್ಶನ್ ಹುಡುಗರು ಹಾಗೂ ಇಂಡಸ್ಟ್ರಿ ಪರಿಸ್ಥಿತಿಯನ್ನೇ ಪ್ರಶ್ನಿಸುತ್ತಿದ್ದಾರೆ. ಫೆಬ್ರವರಿ 24 ರಂದು ಮಧ್ಯಾಹ್ನ ಮೈಸೂರಿನಲ್ಲಿ ಪ್ರೆಸ್‌ಮೀಟ್ ಮಾಡಿ ಮತ್ತೊಮ್ಮೆ ದರ್ಶನ್ ಅಭಿಮಾನಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಈ ವೇಳೆ ದರ್ಶನ್ ಅವರ ಕೆಲವು ಖಾಸಗಿ ವಿಚಾರಗಳ ಕುರಿತು ಕುಟುಕಿದರು. ಅಲ್ಲಿಗೆ, ಜಗ್ಗೇಶ್ ಮತ್ತು ದರ್ಶನ್ ಸಂಬಂಧ ಮುಗಿದಹೋದ ಅಧ್ಯಾಯ ಎನ್ನುವುದು ಗೋಚರವಾಗುತ್ತಿತ್ತು.

    ಜಗ್ಗೇಶ್-ದರ್ಶನ್ ಅಭಿಮಾನಿಗಳ ವಿವಾದಕ್ಕೆ ಅವರೊಬ್ಬರಿಂದಲೇ ಪರಿಹಾರ ಸಾಧ್ಯ!ಜಗ್ಗೇಶ್-ದರ್ಶನ್ ಅಭಿಮಾನಿಗಳ ವಿವಾದಕ್ಕೆ ಅವರೊಬ್ಬರಿಂದಲೇ ಪರಿಹಾರ ಸಾಧ್ಯ!

    ದರ್ಶನ್ ಕ್ಷಮೆ, ಜಗ್ಗೇಶ್ ಮನಸ್ಸು ಹಗುರ

    ದರ್ಶನ್ ಕ್ಷಮೆ, ಜಗ್ಗೇಶ್ ಮನಸ್ಸು ಹಗುರ

    ಈ ವಿಚಾರದ ಕುರಿತು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಟ ದರ್ಶನ್ ಹಿರಿಯ ನಟ ಜಗ್ಗೇಶ್ ಅವರಿಗೆ ಕ್ಷಮೆ ಕೇಳಿದರು. ''ನನ್ನ ಸೆಲೆಬ್ರಿಟಿಗಳಿಂದ ಜಗ್ಗೇಶ್‌ ಸಾರ್‌ಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ'' ಎಂದರು. ಡಿ ಬಾಸ್ ಕ್ಷಮೆಯಾಚಿಸಿದ್ದಕ್ಕೆ ಪ್ರತಿಕ್ರಿಯಿಸಿದ್ದ ಜಗ್ಗೇಶ್ ''ಮನಸ್ಸು ಹಗುರವಾಯಿತು, ಧನ್ಯವಾದ ದರ್ಶನ್'' ಎಂದು ಹಿರಿಯ ಕಲಾವಿದ ಟ್ವೀಟ್ ಮಾಡಿ ''ಇನ್ನೆಂದು ಇಂಥ ದಿನ ಬರದಿರಲಿ'' ಎಂದರು. ಈ ಮೂಲಕ ಈ ವಿವಾದಕ್ಕೆ ಸಂಪೂರ್ಣ ತೆರೆಬಿದ್ದಿತು.

    Recommended Video

    ನನ್ನ ಸೆಲೆಬ್ರಿಟಿಗಳಿಂದ ತಪ್ಪಾಗಿದೆ ಪ್ಲೀಸ್ ಕ್ಷಮಿಸಿ ಜಗ್ಗಣ್ಣ | Darshan Apologize to Jaggesh

    English summary
    Jaggesh-Darshan Audio Leak Controversy: Here is the timeline explains what happened in the case in detail.
    Thursday, February 25, 2021, 15:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X