Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಪ್ಪಲಿಯಲ್ಲಿ ಹೊಡೆದೆ ಎಂದು ಜಗ್ಗೇಶ್ ವಿವಾದ ಮಾಡಿದರು: ವಿಜಯಲಕ್ಷ್ಮಿ
ನಟಿ ವಿಜಯಲಕ್ಷ್ಮಿ ಸಿನಿಮಾಗಳಿಂದ ದೂರವಾದರೂ, ಫೇಸ್ಬುಕ್ ವಿಡಿಯೋಗಳ ಮೂಲಕ ಆಗಾಗ್ಗೆ ಸುದ್ದಿಗೆ ಬರುತ್ತಲೇ ಇರುತ್ತಾರೆ.
Recommended Video
ತಮಿಳಿನ ಸೀಮನ್ ವಿರುದ್ಧ ಆರೋಪ, ಫೇಸ್ಬುಕ್ ವಿಡಿಯೋದಲ್ಲಿ ಆತ್ಮಹತ್ಯೆಗೆ ಯತ್ನ, ಕೆಲವರ ಮೇಲೆ ಆರೋಪಗಳು ಹೀಗೆಯೇ ಕೆಲವು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ ವಿಜಯಲಕ್ಷ್ಮಿ. ಇದೀಗ ಹೊಸ ವಿಡಿಯೋ ಪ್ರಕಟಿಸಿರುವ ವಿಜಯಲಕ್ಷ್ಮಿ ಮಾತಿನ ನಡುವೆ ಹಿರಿಯ ನಟ ಜಗ್ಗೇಶ್ ಅವರನ್ನು ಎಳೆದು ತಂದಿದ್ದಾರೆ.
ನಟಿ
ವಿಜಯಲಕ್ಷ್ಮಿ-ರವಿಪ್ರಕಾಶ್
ಪ್ರಕರಣಕ್ಕೆ
ಸಖತ್
ಟ್ವಿಸ್ಟ್
''ನಟ ಸೃಜನ್ ಲೋಕೇಶ್ಗೆ ಯಾಮಾರಿಸಿದ್ದಕ್ಕೆ ಬೀದಿಗೆ ಬಂದೆ'' ಎಂದು ಕೆಲವರು ವಿಜಯಲಕ್ಷ್ಮಿಗೆ ಕಮೆಂಟ್ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿ, ''ನಾನು ಸೃಜನ್ಗೆ ಯಾಮಾರಿಸಿಲ್ಲ'' ಎಂದು ಸ್ಪಷ್ಟೀಕರಣ ನೀಡುತ್ತಾ ಮಾತಿನ ಮಧ್ಯೆ, ''ನನ್ನ ಜೀವನದಲ್ಲಿ ಮೊದಲ ದೊಡ್ಡ ವಿವಾದ ಮಾಡಿದ್ದು ಜಗ್ಗೇಶ್. ನಾನು ಚಪ್ಪಲಿಯಲ್ಲಿ ಹೊಡೆದು ಎಂದು ದೊಡ್ಡ ವಿವಾದ ಮಾಡಿದರು. ಹಲವು ಯೂನಿಯನ್ಗಳಿಗೆ ನನ್ನನ್ನು ಕರೆಸಿ ಕ್ಷಮಾಪಣೆ ಕೋರುವಂತೆ ಮಾಡಿದರು. ನಾನು ಏಕೆ ಕ್ಷಮಾಪಣೆ ಕೇಳುತ್ತಿದ್ದೀನಿ ಎಂಬುದು ಸಹ ನನಗೆ ಆಗ ಗೊತ್ತಿರಲಿಲ್ಲ'' ಎಂದಿದ್ದಾರೆ ವಿಜಯಲಕ್ಷ್ಮಿ.

ಪಾರ್ವತಮ್ಮ ರಾಜ್ಕುಮಾರ್ ನನ್ನನ್ನು ಕಾಪಾಡಿದರು: ವಿಜಯಲಕ್ಷ್ಮಿ
''ಆ ವಿವಾದ ಆದಾಗ ನನ್ನನ್ನು ಕಾಪಾಡಿದ್ದು ಪಾರ್ವತಮ್ಮ ರಾಜ್ಕುಮಾರ್ ಅವರು. ಅವರೇ ನನಗೆ ಆ ವಿವಾದದಿಂದ ಮುಕ್ತಿ ಕೊಡಿಸಿದರು. ಈಗ ಪಾರ್ವತಮ್ಮನವರ ಜಾಗದಲ್ಲಿ ಶಿವಣ್ಣ ಇದ್ದಾರೆ'' ಎಂದಿದ್ದಾರೆ ವಿಜಯಲಕ್ಷ್ಮಿ.

''ರಾಯರ ಮೇಲೆ ಆಣೆ ಮಾಡಿ ಹೇಳಲಿ ನೋಡೋಣ''
ಮುಂದುವರೆದು, ''ಜಗ್ಗೇಶ್ ಅವರು ಪ್ರತಿ ಟ್ವೀಟ್ಗೆ ರಾಯರನ್ನು ನೆನಪಿಸಿಕೊಳ್ಳುತ್ತಾರೆ. ಹಾಗಿದ್ದರೆ ಈಗಲೂ ಅವರು ಆಣೆ ಮಾಡಿ ಹೇಳಲಿ ನಾನು ಚಪ್ಪಲಿಯಲ್ಲಿ ಹೊಡೆದಿದ್ದೆ ಎಂದು. ಅವರು ಹೇಳುವುದಿಲ್ಲ ಕಾರಣ ಅದೊಂದು ಸುಳ್ಳು. ಆ ಸಮಯದಲ್ಲಿ ನನಗಿದ್ದ ಜನಪ್ರಿಯತೆ ಕಡಿಮೆ ಮಾಡಲು, ನನ್ನ ಕರಿಯರ್ ಹಾಳು ಮಾಡಲು ಅವರು ಹಾಗೆ ಮಾಡಿದ್ದರು. ಆದರೆ ಅಮ್ಮ ಪಾರ್ವತಮ್ಮ ನನ್ನನ್ನು ಕಾಪಾಡಿದರು'' ಎಂದಿದ್ದಾರೆ ವಿಜಯಲಕ್ಷ್ಮಿ.
ಸೃಜನ್ಗೆ
ನಾನು
ಯಾಮಾರಿಸಿಲ್ಲ:
ಗರಂ
ಆದ
ನಟಿ
ವಿಜಯಲಕ್ಷ್ಮಿ

'ಮಾತಿನ ಮಲ್ಲ' ಸಿನಿಮಾದಲ್ಲಿ ಒಟ್ಟಿಗೆ ನಟನೆ
'ಮಾತಿನ ಮಲ್ಲ' ಸಿನಿಮಾದಲ್ಲಿ ನಟ ಜಗ್ಗೇಶ್ ಹಾಗೂ ವಿಜಯಲಕ್ಷ್ಮಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾದಲ್ಲಿ ಚಾರುಲತಾ ನಾಯಕಿ ಪಾತ್ರದಲ್ಲಿದ್ದರು. ಸಿನಿಮಾವು 1998 ರಲ್ಲಿ ಬಿಡುಗಡೆ ಆಗಿತ್ತು. ಈಗ ವಿಜಯಲಕ್ಷ್ಮಿ ಮಾಡಿರುವ ಆರೋಪಕ್ಕೆ ನಟ ಜಗ್ಗೇಶ್ ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರವಿಪ್ರಕಾಶ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ
ಈ ಹಿಂದೆ ನಟಿ ವಿಜಯಲಕ್ಷ್ಮಿ, ನಟ ರವಿಪ್ರಕಾಶ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಇತ್ತೀಚಿಗೆ ರವಿಪ್ರಕಾಶ್ಗೆ ಕರೆ ಮಾಡಿದ್ದ ವಿಜಯಲಕ್ಷ್ಮಿ ಸಹೋದರಿ, 'ನೀವು ನಮಗೆ ಸಹಾಯ ಮಾಡಲು ಬಂದಿರಿ, ಆದರೆ ನಾವು ಪರಿಸ್ಥಿತಿ ಒತ್ತಡಕ್ಕೆ ಸಿಲುಕಿ ನಿಮ್ಮ ಮೇಲೆ ದೂರು ನೀಡಿದೆವು' ಎಂದು ಕ್ಷಮೆ ಕೋರಿದ್ದರು. ಆದರೆ ರವಿಪ್ರಕಾಶ್ ಕ್ಷಮೆಯನ್ನು ಸ್ವೀಕರಿಸುವುದಿಲ್ಲವೆಂದು ಹೇಳಿದರು.