»   » 'ಬಾಲಿವುಡ್'ನಿಂದ ಜಗ್ಗೇಶ್ ಗೆ ಆಫರ್ ಬಂದ್ರೆ ಏನಂತಾರೆ.?

'ಬಾಲಿವುಡ್'ನಿಂದ ಜಗ್ಗೇಶ್ ಗೆ ಆಫರ್ ಬಂದ್ರೆ ಏನಂತಾರೆ.?

Posted By:
Subscribe to Filmibeat Kannada

ಕನ್ನಡದ ಕೆಲವು ಸ್ಟಾರ್ ನಟರು ಪರಭಾಷೆಗಳಲ್ಲಿ ಅಭಿನಯಿಸಿಲ್ಲ. ಹಾಗಂತ ಅವರಿಗೆ ಅವಕಾಶ ಸಿಕ್ಕಿಲ್ಲ ಅಂತಲ್ಲ. ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಲು ಅವಕಾಶ ಬಂದಿದ್ದರೂ ಒಲ್ಲೆ ಎಂದು ಕನ್ನಡ ಚಿತ್ರರಂಗಕ್ಕೆ ಮಾತ್ರ ತಮ್ಮ ಪ್ರತಿಭೆಯನ್ನ ಮೀಸಲಿಟ್ಟಿದ್ದಾರೆ. ಅಂತಹವರಲ್ಲಿ ನವರಸ ನಾಯಕ ಜಗ್ಗೇಶ್ ಅವರು ಕೂಡ ಒಬ್ಬರು.

ಜಗ್ಗೇಶ್ ಅವರು ಮೊದಲೇ ಅಪ್ಪಟ ಕನ್ನಡ ಅಭಿಮಾನಿ. ಕನ್ನಡ ಸಿನಿಮಾ, ಕನ್ನಡ ಭಾಷೆ, ಕನ್ನಡ ನೆಲ, ಹೀಗೆ ಕನ್ನಡದ ಮಗನಾಗಿ ಜೀವಿಸುತ್ತಿದ್ದಾರೆ. ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತೀರಾ. ಕಾರಣ ಇದೆ. ಮುಂದೆ ಓದಿ...

ಜಗ್ಗೇಶ್ ಟ್ವಿಟ್ಟರ್ ಗೆ ಬರಲು ರಮ್ಯಾ ಕಾರಣವಂತೆ

jaggesh does not accept bollywood offers

ಸ್ಯಾಂಡಲ್ ವುಡ್ ನ ಕಲಾವಿದರಿಗೆ ಬಾಲಿವುಡ್ ಅಥವಾ ಬೇರೆ ಇಂಡಸ್ಟ್ರಿಯಿಂದ ಸಿನಿಮಾ ಆಫರ್ ಬಂದ್ರೆ ''ನೋಡೋಣ ಒಳ್ಳೆ ಸ್ಕ್ರಿಪ್ಟ್ ಬಂದ್ರೆ ಖಂಡಿತಾ ಮಾಡ್ತಿನಿ'' ಎನ್ನುವುದು ಸಾಮಾನ್ಯ. ಇದೇ ಪ್ರಶ್ನೆಯನ್ನ ಜಗ್ಗೇಶ್ ಅವರಿಗೆ ಕೇಳಿದ್ರೆ, ಅವರು ಉತ್ತರ ವಿಶೇಷ ಮತ್ತು ಅಭಿಮಾನದಿಂದ ಕೂಡಿರುತ್ತೆ.

ಮನಸ್ತಾಪ ಮರೆತು ಒಂದಾದ ಸುದೀಪ್ ದಂಪತಿಗೆ ಶುಭ ಹಾರೈಸಿದ ಜಗ್ಗೇಶ್

ಹೌದು, ಜಗ್ಗೇಶ್ ಅವರನ್ನ ಅಭಿಮಾನಿಯೊಬ್ಬ ಟ್ವಿಟ್ಟರ್ ಮೂಲಕ ''ನಿಮಗೆ ಬಾಲಿವುಡ್ ನಿಂದ ಆಫರ್ ಬಂದ್ರೆ....? ಏನು ಮಾಡುತ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಜಗ್ಗೇಶ್ ಅವರು ''ಕನ್ನಡ ಬಿಟ್ರೆ ಮಿಕ್ಕೆಲ್ಲಾ ತೃಣಕ್ಕೆ ಸಮಾನ! ಕನ್ನಡ ಚಿತ್ರರಂಗ ಕನ್ನಡಿಗರೆ ಸಾಕು! 34ವರ್ಷ ಅವರೊಂದಿಗೆ ಬಾಳಿರುವೆ! ಕೊನೆಯ ಉಸಿರಿನವರೆಗು ಕನ್ನಡದಲ್ಲೆ ಇದ್ದು ಇಲ್ಲೆ ಮಣ್ಣಾಗುವೆ!'' ಎಂದಿದ್ದಾರೆ.

English summary
jaggesh says, he does not accept any bollywood film offers at all

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada