twitter
    For Quick Alerts
    ALLOW NOTIFICATIONS  
    For Daily Alerts

    'ಬಾಲಿವುಡ್'ನಿಂದ ಜಗ್ಗೇಶ್ ಗೆ ಆಫರ್ ಬಂದ್ರೆ ಏನಂತಾರೆ.?

    By Bharath Kumar
    |

    ಕನ್ನಡದ ಕೆಲವು ಸ್ಟಾರ್ ನಟರು ಪರಭಾಷೆಗಳಲ್ಲಿ ಅಭಿನಯಿಸಿಲ್ಲ. ಹಾಗಂತ ಅವರಿಗೆ ಅವಕಾಶ ಸಿಕ್ಕಿಲ್ಲ ಅಂತಲ್ಲ. ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಲು ಅವಕಾಶ ಬಂದಿದ್ದರೂ ಒಲ್ಲೆ ಎಂದು ಕನ್ನಡ ಚಿತ್ರರಂಗಕ್ಕೆ ಮಾತ್ರ ತಮ್ಮ ಪ್ರತಿಭೆಯನ್ನ ಮೀಸಲಿಟ್ಟಿದ್ದಾರೆ. ಅಂತಹವರಲ್ಲಿ ನವರಸ ನಾಯಕ ಜಗ್ಗೇಶ್ ಅವರು ಕೂಡ ಒಬ್ಬರು.

    ಜಗ್ಗೇಶ್ ಅವರು ಮೊದಲೇ ಅಪ್ಪಟ ಕನ್ನಡ ಅಭಿಮಾನಿ. ಕನ್ನಡ ಸಿನಿಮಾ, ಕನ್ನಡ ಭಾಷೆ, ಕನ್ನಡ ನೆಲ, ಹೀಗೆ ಕನ್ನಡದ ಮಗನಾಗಿ ಜೀವಿಸುತ್ತಿದ್ದಾರೆ. ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತೀರಾ. ಕಾರಣ ಇದೆ. ಮುಂದೆ ಓದಿ...

    ಜಗ್ಗೇಶ್ ಟ್ವಿಟ್ಟರ್ ಗೆ ಬರಲು ರಮ್ಯಾ ಕಾರಣವಂತೆಜಗ್ಗೇಶ್ ಟ್ವಿಟ್ಟರ್ ಗೆ ಬರಲು ರಮ್ಯಾ ಕಾರಣವಂತೆ

    jaggesh does not accept bollywood offers

    ಸ್ಯಾಂಡಲ್ ವುಡ್ ನ ಕಲಾವಿದರಿಗೆ ಬಾಲಿವುಡ್ ಅಥವಾ ಬೇರೆ ಇಂಡಸ್ಟ್ರಿಯಿಂದ ಸಿನಿಮಾ ಆಫರ್ ಬಂದ್ರೆ ''ನೋಡೋಣ ಒಳ್ಳೆ ಸ್ಕ್ರಿಪ್ಟ್ ಬಂದ್ರೆ ಖಂಡಿತಾ ಮಾಡ್ತಿನಿ'' ಎನ್ನುವುದು ಸಾಮಾನ್ಯ. ಇದೇ ಪ್ರಶ್ನೆಯನ್ನ ಜಗ್ಗೇಶ್ ಅವರಿಗೆ ಕೇಳಿದ್ರೆ, ಅವರು ಉತ್ತರ ವಿಶೇಷ ಮತ್ತು ಅಭಿಮಾನದಿಂದ ಕೂಡಿರುತ್ತೆ.

    ಮನಸ್ತಾಪ ಮರೆತು ಒಂದಾದ ಸುದೀಪ್ ದಂಪತಿಗೆ ಶುಭ ಹಾರೈಸಿದ ಜಗ್ಗೇಶ್ಮನಸ್ತಾಪ ಮರೆತು ಒಂದಾದ ಸುದೀಪ್ ದಂಪತಿಗೆ ಶುಭ ಹಾರೈಸಿದ ಜಗ್ಗೇಶ್

    ಹೌದು, ಜಗ್ಗೇಶ್ ಅವರನ್ನ ಅಭಿಮಾನಿಯೊಬ್ಬ ಟ್ವಿಟ್ಟರ್ ಮೂಲಕ ''ನಿಮಗೆ ಬಾಲಿವುಡ್ ನಿಂದ ಆಫರ್ ಬಂದ್ರೆ....? ಏನು ಮಾಡುತ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಜಗ್ಗೇಶ್ ಅವರು ''ಕನ್ನಡ ಬಿಟ್ರೆ ಮಿಕ್ಕೆಲ್ಲಾ ತೃಣಕ್ಕೆ ಸಮಾನ! ಕನ್ನಡ ಚಿತ್ರರಂಗ ಕನ್ನಡಿಗರೆ ಸಾಕು! 34ವರ್ಷ ಅವರೊಂದಿಗೆ ಬಾಳಿರುವೆ! ಕೊನೆಯ ಉಸಿರಿನವರೆಗು ಕನ್ನಡದಲ್ಲೆ ಇದ್ದು ಇಲ್ಲೆ ಮಣ್ಣಾಗುವೆ!'' ಎಂದಿದ್ದಾರೆ.

    English summary
    jaggesh says, he does not accept any bollywood film offers at all
    Saturday, August 26, 2017, 10:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X