twitter
    For Quick Alerts
    ALLOW NOTIFICATIONS  
    For Daily Alerts

    ಮಾತು ಉಳಿಸಿಕೊಂಡ ಜಗ್ಗೇಶ್: ನಿರ್ಭಯಾ ಹಂತಕರ ಹ್ಯಾಂಗ್ ಮ್ಯಾನ್ ಗೆ 1 ಲಕ್ಷ ದೇಣಿಗೆ

    |

    ಇಡೀ ವಿಶ್ವದ ಗಮನ ಸೆಳೆದ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ 7 ವರ್ಷಗಳ ಬಳಿಕ ಕೊನೆಗೂ ನ್ಯಾಯ ಸಿಕ್ಕಿದೆ. ಇಂದು ಬೆಳ್ಳಂಬೆಳಗ್ಗೆ ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಲಾಯಿತು. ಏಳು ವರ್ಷಗಳ ಬಳಿಕ ಸಿಕ್ಕ ನ್ಯಾಯಕ್ಕೆ ಇಡೀ ದೇಶವೆ ಸಂತಸಗೊಂಡಿದೆ.

    Recommended Video

    ಕೊಟ್ಟ ಮಾತು ಉಳಿಸಿಕೊಂಡ ನವರಸನಾಯಕ | Jaggesh donates 1 Lakh for Nirbhaya hangman

    ಅಪರಾಧಿಗಳನ್ನು ಗಲ್ಲಿಗೇರಿಸಿದ ಬಳಿಕ ನಟ ಜಗ್ಗೇಶ್ ಕೊಟ್ಟ ಮಾತಿನಂತೆ 1 ಲಕ್ಷ ರೂ. ನಿರ್ಭಯಾ ಹಂತಕರ ಹ್ಯಾಂಗ್ ಮ್ಯಾನ್ ಗೆ ದೇಣಿಗೆ ನೀಡಿದ್ದಾರೆ. ಈ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿ ಬಹಿರಂಗ ಪಡಿಸಿದ್ದಾರೆ. ಈ ಸುದ್ದಿ ಕೇಳಲು ರಾತ್ರಿಯೆಲ್ಲ ನಿದ್ದೆ ಮಾಡದೆ ಎದ್ದು ಕೂತಿದ್ದ ಜಗ್ಗೇಶ್ ನಾಲ್ವರನ್ನು ಗಲ್ಲಿಗೇರಿಸುತ್ತಿದ್ದಂತೆ ಟ್ವೀಟ್ ಮಾಡಿದ್ದಾರೆ.

    ಕೊಟ್ಟ ಮಾತಿನಂತೆ 1 ಲಕ್ಷ ದೇಣಿಗೆ ನೀಡಿದ ಜಗ್ಗೇಶ್

    "ಕೊಟ್ಟ ಮಾತಿನಂತೆ 1 ಲಕ್ಷ ರೂ ನಿರ್ಭಯ ಹಂತಕರ #hangmen ಗೆ ನನ್ನ ಧೇಣಿಗೆ. ದೇವನೊಬ್ಬನಿರುವ ಅವ ಎಲ್ಲ ನೋಡುತಿರುವ. ಸತ್ಯದ ಹಾದಿಯಲ್ಲಿ ನಡೆದವಗೆ ಭಯವಿಲ್ಲಾ. ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪಲ್ಲಾ. ಈ ದಿನಕ್ಕೆ ಹಲ್ಲುಕಚ್ಚಿ ಎಂದು ಅಂತ್ಯ ದುಷ್ಟ ಕ್ರಿಮಿಗಳಿಗೆ ಎಂದು ಕಾಯುತ್ತಿದ್ದೆ. ಸುದ್ಧಿ ಕೇಳಲು ನಿದ್ರೆ ಮಾಡದೆ ಕಾದೆ. ಹರಿ ಓಂ. ಶುಭದಿನ" ಎಂದು ಹೇಳಿದ್ದಾರೆ.

    ಅತ್ಯಾಚಾರಿಗಳನ್ನು ಹ್ಯಾಂಗ್ ಮಾಡಿದ ಪವನ್ ಜಲ್ಲಾದ್

    ಅತ್ಯಾಚಾರಿಗಳನ್ನು ಹ್ಯಾಂಗ್ ಮಾಡಿದ ಪವನ್ ಜಲ್ಲಾದ್

    ನಾಲ್ಕು ಜನ ಅಪರಾಧಿಗಳನ್ನು ಗಲ್ಲಿಗೇರಿಸಿದ ಪವನ್ ಜಲ್ಲಾದ್, ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದವರು. ಇವರಿಗೆ ತಲಾ ಅಪರಾಧಿಗೆ 25 ಸಾವಿರ ರೂಪಾಯಿಯಂತೆ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ಹ್ಯಾಂಗ್ ಮ್ಯಾನ್ ಗೆ ಒಂದು ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದರು.

    '1 ಲಕ್ಷದಲ್ಲಿ ಮಗಳ ಮದುವೆ ಮಾಡುತ್ತೇನೆ'

    '1 ಲಕ್ಷದಲ್ಲಿ ಮಗಳ ಮದುವೆ ಮಾಡುತ್ತೇನೆ'

    ಕೀಚಕರನ್ನು ಗಲ್ಲಿಗೇರಿಸಿದಾಗ ಸಿಗುವ ಒಂದು ಲಕ್ಷ ರೂಪಾಯಿ ಸಂಭಾವನೆಯಿಂದ ಮಗಳ ಮದುವೆಯನ್ನು ಮಾಡುತ್ತೇನೆ ಎಂದು ಪವನ್ ಜಲ್ಲಾದ್ ಹೇಳಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ನವರಸನಾಯಕ ಜಗ್ಗೇಶ್, ಬಡತನದಲ್ಲಿರುವ ಪವನ್ ಅವರ ನೆರವಿಗೆ ಧಾವಿಸಿದ್ದರು.

    ಜಗ್ಗೇಶ್ ಟ್ವೀಟ್ ಹೀಗಿದೆ

    ಜಗ್ಗೇಶ್ ಟ್ವೀಟ್ ಹೀಗಿದೆ

    "ಮಾನ್ಯರೇ ರಾಕ್ಷಸರ ಸಂಹಾರ ದೇವರ ನಿಯಮ! ಆ ಕಾರ್ಯದಿಂದ ಬರುವ ಹಣದಲ್ಲಿ ಮಗಳ ಮದುವೆ ಮಾಡುವೆ ಎಂದ ನಿಮ್ಮ ಅನಿಸಿಕೆ ಕೇಳಿ ಭಾವುಕನಾದೆ. ನೀವೆ ಆ ಪಾಪಿಗಳ ನೇಣಿಗೇರಿಸಿದರೆ, ನಾನು ಕಲೆಯಿಂದ ದುಡಿದ 1ಲಕ್ಷ ರೂ, ನಿಮಗೆ ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ. ಇಂದೆ ಆ ಹಣ ನಿಮಗಾಗಿ ಮೀಸಲಿಟ್ಟೆ. ಇದು ದುರುಳ ನಿಗ್ರಹ ದೇವರ ಸೇವೆ. ಹರಿಓಂ" ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದರು.

    English summary
    Kannada Actor Jaggesh Donates 1 lakh for Nirbhaya hangman. Nirbhaya case convicts hanged.
    Saturday, May 30, 2020, 14:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X