'ನಿನ್ನನ್ನು ಹೇಗೆ ಮರೆಯಲಿ': ಜಗ್ಗೇಶ್ ಬಿಚ್ಚಿಟ್ಟ ಪುನೀತ್ ನೆನಪು

ಪುನೀತ್ ರಾಜ್‌ಕುಮಾರ್ ಅಗಲಿಕೆ ಚಿತ್ರರಂಗದಲ್ಲಿ ಸೂತಕದ ಛಾಯೆ ಮೂಡಿಸಿದೆ. ಹಿರಿಯ-ಕಿರಿಯ ಕಲಾವಿದರೆಲ್ಲರೂ ಪುನೀತ್ ಅವರನ್ನು ನೆನದು ಭಾವುಕರಾಗಿದ್ದಾರೆ.

ದೊಡ್ಮನೆಯೊಂದಿಗೆ, ಸ್ವತಃ ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಬಹು ಆತ್ಮೀಯ ಬಂಧ ಹೊಂದಿದ್ದ ನಟ ಜಗ್ಗೇಶ್, ಕಿರಿಯ ಮಿತ್ರನ ಅಗಲಿಕೆಯಿಂದ ಆಗಿರುವ ನೋವನ್ನು ಪದಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಜಗ್ಗೇಶ್, ಪುನೀತ್ ರಾಜ್‌ಕುಮಾರ್ ಬಗ್ಗೆ ಮಾಡಿರುವ ಪೋಸ್ಟ್‌ ಯಥಾವತ್ತು ಇಲ್ಲಿದೆ,

Jaggesh Emotional Social Media Post About Puneeth Rajkumar

''ಪುನೀತ್ ನಿನ್ನ 30ವರ್ಷದ ಒಡನಾಟ ಹೇಗೆ ಮರೆಯಲಿ ಬಂಧುವೆ.ಅಪ್ಪ, ನನ್ನನ್ನು, ನಿನಗೆ ಪರಿಚಯಿಸಿದಾಗ ನಿನ್ನ ಆಶ್ಚರ್ಯದ ಮುದ್ದು ಮುಖ ಹೇಗೆ ಮರೆಯಲಿ. ನನ್ನ ಚಿತ್ರಗಳ ನೋಡಿ ಸಂಭ್ರಮಿಸಿ ನನಗೆ ಕರೆಮಾಡಿ ಹರಸುತ್ತಿದ್ದ ನಿನ್ನ ಗುಣ ಹೇಗೆ ಮರೆಯಲಿ. ನನ್ನ ಗ್ರಾಮದ ಭೈರವನ ನೋಡಲು ಬಂದು ನನ್ನ ಗ್ರಾಮೀಣ ಹಿನ್ನೆಲೆ ಬದುಕಿನ ಅನುಭವ ಕೇಳಿ ಮರುಗಿದ್ದು ಹೇಗೆ ಮರೆಯಲಿ. ನನ್ನ ಜೊತೆ ಮಂತ್ರಾಲಯಕ್ಕೆ ಬಂದು ಸಾಮಾನ್ಯನಂತೆ ರಸ್ತೆ ಬದಿಯ ಚಹಾದ ಅಂಗಡಿ ಮುಂದಿನ ಆನಂದಮಯ ಕ್ಷಣದ ದಿನ ಹೇಗೆ ಮರೆಯಲಿ''.

''ಆನಂದರಾಮ (ಸಂತೋಶ್ ಆನಂದ್‌ರಾಮ್) ನನಗಾಗಿ ನಿರ್ದೇಶನ ಮಾಡುವ ಚಿತ್ರದ ಕಥೆ ಕೇಳಿ ನೀನು ನಗುತ್ತಿದ್ದ ಆ ನಗು ಮುಖ ಹೇಗೆ ಮರೆಯಲಿ. ಮಗ ಗುರುರಾಜನ ಚಿತ್ರಕ್ಕೆ ಶುಭ ಹಾರೈಸಿ ಮಗನಿಗೆ ಭುಜ ತಟ್ಟಿದ ದಿನ ಹೇಗೆ ಮರೆಯಲಿ. ನಿನ್ನ ತಂದೆಯ ದ್ವನಿ ಅನುಕರಣೆ ಮಾಡಿದಾಗ ನೀ ಮಗುವಂತೆ ನಗುತ್ತಿದ್ದ ಆ ಮುದ್ದು ಮುಖ ಹೇಗೆ ಮರೆಯಲಿ. ಕೇವಲ ವಾರದ ಹಿಂದೆ ಅಣ್ಣ ಮಲ್ಲೇಶ್ವರಕ್ಕೆ ಬಂದಿರುವೆ ಬನ್ನಿ ಎಂದು ಕರೆದು ನನ್ನ ನಿನ್ನ ಬದುಕಿನ ಕಡೆಯಬೇಟಿ ಹೇಗೆಮರೆಯಲಿ. ಪ್ರೀತಿಯ ಆತ್ಮವೆ ಹೋಗಿ ಬಾ ಎಂದು ಹೇಳಲು ನನಗೆ ಮನಸ್ಸು ಒಪ್ಪುತ್ತಿಲ್ಲ. ನನ್ನ ಕಡೆ ಉಸಿರಿನವರೆಗು ನಿನ್ನ ನೆನಪು ಒಡನಾಟ ನನ್ನ ಮನದಲ್ಲಿ ಉಳಿಸಿಕೊಳ್ಳುವೆ. ನಿನ್ನ ಆತ್ಮ ಎಲ್ಲೆ ಇರಲಿ ಶಾಂತಿಯಿಂದ ಉಳಿಯಲಿ. I love you ಚಿನ್ನ''

Jaggesh Emotional Social Media Post About Puneeth Rajkumar

ಪುನೀತ್ ರಾಜ್‌ಕುಮಾರ್ ಹಾಗೂ ಜಗ್ಗೇಶ್ ಬಹಳ ಆತ್ಮೀಯರಾಗಿದ್ದರು. ''ಜಗ್ಗೇಶ್ ನನ್ನ ಮೆಚ್ಚಿನ ನಟ'' ಎಂದು ಹಲವು ವೇದಿಕೆಗಳಲ್ಲಿ ಪುನೀತ್ ರಾಜ್‌ಕುಮಾರ್ ಹೇಳಿಕೊಂಡಿದ್ದರು. ಕೆಲವು ದಿನಗಳ ಹಿಂದೆ 'ಸಲಗ' ಸಿನಿಮಾದ ಕಾರ್ಯಕ್ರಮದಲ್ಲಿ ಉಪೇಂದ್ರ ಅವರ ನಿರ್ದೇಶನದ ಬಗ್ಗೆ ಮಾತನಾಡುತ್ತಾ, ''ಜಗ್ಗೇಶ್ ನಟಿಸಿರುವ ತರ್ಲೆ ನನ್ಮಗ' ನನ್ನ ಮೆಚ್ಚಿನ ಸಿನಿಮಾ. ಅದನ್ನು ನೂರಾರು ಬಾರಿ ನೋಡಿದ್ದೇನೆ'' ಎಂದಿದ್ದರು.

ಜಗ್ಗೇಶ್ ಹಾಗೂ ಪುನೀತ್ ಇನ್ನು ಕೆಲವು ಗೆಳೆಯರೊಟ್ಟಿಗೆ ಕೆಲ ತಿಂಗಳ ಹಿಂದೆ ಮಂತ್ರಾಲಯಕ್ಕೆ ತೆರಳಿದ್ದರು.

More from Filmibeat

English summary
Jaggesh writes emotional post about Puneeth Rajkumar. Actor Puneeth Rajkumar dies today due to heart attack.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X