'ಪಲ್ಲಂಗ' ಅಂದ್ರೆ 'ಅದಲ್ಲ'! ಜಗ್ಗೇಶ್ ಹೇಳಿದ್ದು ಬೇರೆಯದ್ದೇ ಅರ್ಥದಲ್ಲಿ...

By Harshitha

Recommended Video

'ಪಲ್ಲಂಗ' ಅಂದ್ರೆ 'ಅದಲ್ಲ'! ಜಗ್ಗೇಶ್ ಹೇಳಿದ್ದು ಬೇರೆಯದ್ದೇ ಅರ್ಥದಲ್ಲಿ | FIlmibeat Kannada

ಟ್ವಿಟ್ಟರ್ ಲೋಕದಲ್ಲಿ ಸದ್ಯ 'ಪಲ್ಲಂಗ'ದ ಬಗ್ಗೆಯೇ ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣ ನವರಸ ನಾಯಕ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್.

''ಪ್ರಧಾನಿ ಮೋದಿ ನಶೆಯಲ್ಲಿದ್ದಾಗ ಹೀಗೆ ಆಗೋದು'' ಎಂದು ಟ್ವೀಟ್ ಮಾಡಿದ್ದ ನಟಿ ರಮ್ಯಾಗೆ ತಿರುಗೇಟು ನೀಡುವ ಸಲುವಾಗಿ ಜಗ್ಗೇಶ್ ಮಾಡಿದ್ದ ಒಂದು ಟ್ವೀಟ್ ಇದೀಗ ವಿವಾದಕ್ಕೆ ಗ್ರಾಸವಾಗಿದೆ.

ತಮ್ಮ ಟ್ವೀಟ್ ನಲ್ಲಿ 'ಪಾರ್ಟಿ' ಮತ್ತು 'ಪಲ್ಲಂಗ' ಎಂಬ ಪದಗಳನ್ನ ಪ್ರಯೋಗ ಮಾಡಿದ್ದರು ಜಗ್ಗೇಶ್. ಜವಾಬ್ದಾರಿಯುತ ನಟ, ರಾಜಕಾರಣಿಯಾದ ಜಗ್ಗೇಶ್, ಓರ್ವ ಹೆಣ್ಣಿನ ಬಗ್ಗೆ ಇಷ್ಟು ಕೇವಲವಾಗಿ ಮಾತನಾಡುವುದು ಸರಿಯಲ್ಲ ಎಂಬ ಟೀಕೆಗಳು ಹೆಚ್ಚಾದಂತೆ 'ಪಲ್ಲಂಗ' ಎಂಬ ಪದಕ್ಕೆ ಅರ್ಥ ವಿವರಿಸಿದ್ದಾರೆ ಜಗ್ಗೇಶ್.

ಹಾಗಾದ್ರೆ, 'ಪಲ್ಲಂಗ' ಎಂಬ ಪದಕ್ಕೆ ಅರ್ಥ ಏನು.? ಜಗ್ಗೇಶ್ ಹೀಗೆ ಹೇಳಿದ್ದು ಯಾಕೆ.? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ಓದಿರಿ...

ಶುರುವಾಗಿದ್ದು ಇಲ್ಲಿಂದ...

ಶುರುವಾಗಿದ್ದು ಇಲ್ಲಿಂದ...

ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ ಭಾಷಣದಲ್ಲಿ ''ರೈತರೇ ನಮ್ಮ ಪ್ರಮುಖ (TOP) ಆದ್ಯತೆ. TOP ಅಂದ್ರೆ ಟೊಮ್ಯಾಟೋ, ಈರುಳ್ಳಿ, ಆಲೂಗೆಡ್ಡೆ'' ಎಂದು ಪ್ರಧಾನಿ ಮೋದಿ ಹೇಳಿದ್ದರು. ಈ ಹೇಳಿಕೆಯನ್ನ ಟೀಕಿಸಲು ಮುಂದಾದ ರಮ್ಯಾ ''ನೀವು ನಶೆಯಲ್ಲಿ (POT) ಇದ್ದಾಗ ಹೀಗೆ ಆಗೋದು'' ಎಂದು ಟ್ವೀಟ್ ಮಾಡಿದ್ದರು.

ಏಟಿಗೆ ಎದಿರೇಟು ಕೊಟ್ಟ ಜಗ್ಗೇಶ್

ಏಟಿಗೆ ಎದಿರೇಟು ಕೊಟ್ಟ ಜಗ್ಗೇಶ್

ರಮ್ಯಾ ಮಾಡಿದ್ದ ನಶೆ ಟ್ವೀಟ್ ಗೆ ಜಗ್ಗೇಶ್ ತಿರುಗೇಟು ಕೊಟ್ಟಿದ್ದು ಹೀಗೆ - ''''ಸ್ಟಾರ್ ಹೋಟೆಲ್ ನಲ್ಲಿ ಕೂತು ಅಪ್ಪನ ದುಡ್ಡಲ್ಲಿ ಪಾರ್ಟಿ ಕೊಟ್ಟು ಪಾರ್ಟು ಗಿಟ್ಟಿಸಿ, ಪ್ರತಿ ಚಿತ್ರದ ಕ್ಯಾಚ್ ಗೆ ಅದೇ ಸ್ಟಾರ್ ಹೋಟೆಲ್ ನಲ್ಲಿ ಪಾರ್ಟಿ, ದೊಡ್ಡವರ ನೆರಳಲ್ಲಿ ರಾಜಕೀಯ ಕ್ಯಾಚ್, ಆಮೇಲೆ ಮೆಟ್ಟಿಲು ಏರಲು ಹೆಡ್ ಆಫೀಸ್ ಕ್ಯಾಚ್ ಹಾಕಿದವರಿಗೆ ಮೋದಿ ಆದರೇನು? ಗಾಂಧಿ ಆದರೇನು? ಯಾರಿಗೆ ಬೇಕಾದರೂ ಹಂಗಿಸುತ್ತಾರೆ.! ಕಾರಣ, ಶ್ರಮವಿಲ್ಲದೆ ಪಲ್ಲಂಗ ಏರಿದವರಲ್ಲವೇ.?''. ತಮ್ಮ ಟ್ವೀಟ್ ನಲ್ಲಿ 'ಪಲ್ಲಂಗ'ದ ಬಗ್ಗೆ ಜಗ್ಗೇಶ್ ಪ್ರಸ್ತಾಪ ಮಾಡಿದ್ರಿಂದಾಗಿ ಪರ-ವಿರೋಧ ಚರ್ಚೆ ಶುರು ಆಯ್ತು.

'ಪಲ್ಲಂಗ' ಅಂದ್ರೆ...

'ಪಲ್ಲಂಗ' ಅಂದ್ರೆ...

''ಪಲ್ಲಂಗ' ಅಂದ್ರೆ ಸುಖದ ಸುಪ್ಪತ್ತಿಗೆ ಎಂದು ಅರ್ಥ'' ಎಂದು ತಮ್ಮ ಟ್ವೀಟ್ ಒಂದರಲ್ಲಿ ಜಗ್ಗೇಶ್ ಸ್ಪಷ್ಟ ಪಡಿಸಿದ್ದಾರೆ. ''ಶ್ರಮವಿಲ್ಲದೆ ಸುಖದ ಸುಪ್ಪತ್ತಿಗೆ ಏರಿದವರು'' ಎಂಬ ಅರ್ಥದಲ್ಲಿ ಜಗ್ಗೇಶ್ ಟ್ವೀಟ್ ಮಾಡಿದ್ದಾರಂತೆ.

ಪ್ರಧಾನಿಗೆ ಅವಮಾನ ಮಾಡಿದ್ದಕ್ಕೆ...

ಪ್ರಧಾನಿಗೆ ಅವಮಾನ ಮಾಡಿದ್ದಕ್ಕೆ...

''ರಾಷ್ಟ್ರದ ಹೆಮ್ಮೆಯ ಪ್ರಧಾನಿಗೆ ಅವಮಾನ ಮಾಡಿದ್ದಕ್ಕೆ, ಸ್ವಾಭಿಮಾನಿ ಭಾರತೀಯನಾಗಿ ಉತ್ತರಿಸಿದೆ'' ಎಂದು ತಮ್ಮ ಟ್ವೀಟ್ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ ನಟ ಜಗ್ಗೇಶ್.

ಮಹಿಳೆಯರನ್ನು ಅವಮಾನಿಸುವುದು ಬಿಜೆಪಿ ಸಂಸ್ಕೃತಿಯೇ.?

ಮಹಿಳೆಯರನ್ನು ಅವಮಾನಿಸುವುದು ಬಿಜೆಪಿ ಸಂಸ್ಕೃತಿಯೇ.?

''ಮಹಿಳೆಯರನ್ನು ಅವಮಾನಿಸುವುದು ಬಿಜೆಪಿ ಸಂಸ್ಕೃತಿಯೇ.?'' ಎಂಬ ಪ್ರಶ್ನೆ ಉದ್ಭವ ಆದಾಗ, ''ರಾಷ್ಟ್ರದ ಪ್ರಧಾನಿ, ತಂದೆಯ ವಯಸ್ಕರು, ವಿಶ್ವದ ಮೆಚ್ಚಿದ ನಾಯಕ, ಕೋಟ್ಯಾಂತರ ಭಾರತೀಯರ ಆಶಾದಾಯಕ ಮೋದಿ ಅವರನ್ನು ಅಪಮಾನಿಸಿದರೆ ನೀವು ಸಮರ್ಥಿಸಿಕೊಳ್ಳುತ್ತೀರಾ.? ನಿಮ್ಮ ಸಂಸ್ಕೃತಿ ಇದೇನಾ.?'' ಎಂದು ಪ್ರಶ್ನಿಸಿದ್ದಾರೆ ಜಗ್ಗೇಶ್.

More from Filmibeat

English summary
Kannada Actor, BJP Politician Jaggesh explained the meaning of 'Pallanga' in his tweet. Jaggesh mentioned the word 'Pallanga' in his tweet against Kannada Actress, EX MP, Congress Politician Ramya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X